ADVERTISEMENT

ಯಾದಗಿರಿ: ಸಮೀಕ್ಷೆ ವೇಳೆ ಶಿಕ್ಷಕಿ ಆರೋಗ್ಯದಲ್ಲಿ ಏರುಪೇರು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 5:21 IST
Last Updated 8 ಅಕ್ಟೋಬರ್ 2025, 5:21 IST
ಸೈದಾಪುರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿಕ್ಷಕಿ ಸುನೀತಾಗೌಡ ಅಳಳ್ಳಿ ಅವರ ಆರೋಗ್ಯವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ವೀರಪ್ಪ ಕನ್ನಳ್ಳಿ ವಿಚಾರಿಸಿದರು
ಸೈದಾಪುರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿಕ್ಷಕಿ ಸುನೀತಾಗೌಡ ಅಳಳ್ಳಿ ಅವರ ಆರೋಗ್ಯವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ವೀರಪ್ಪ ಕನ್ನಳ್ಳಿ ವಿಚಾರಿಸಿದರು   

ಯಾದಗಿರಿ: ಪಟ್ಟಣದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಗಾಗಿ ಮನೆಗಳ ಹುಡುಕಾಡುವಾಗ ಬಂದಳ್ಳಿ ಗ್ರಾಮದ ಪ್ರಾಥಮಿಕ ಶಾಲಾ ಶಿಕ್ಷಕಿ ಸುನೀತಾಗೌಡ ಅಳಳ್ಳಿ ಸುಸ್ತಾಗಿ ತೆಲೆ ತಿರುಗಿ ಬಿದ್ದಿದ್ದಾರೆ.

ತಕ್ಷಣ ಅವರನ್ನು ಸ್ಥಳೀಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ‘ಆರೋಗ್ಯ ಸ್ಥಿರವಾಗಿದೆ’ ಎಂದು ವೈದ್ಯರು ತಿಳಿಸಿದ್ದಾರೆ.

ಆಸ್ಪತ್ರೆಗೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ವೀರಪ್ಪ ಜಿ.ಕನ್ನಳ್ಳಿ ಅವರು ಶಿಕ್ಷಕಿಯ ಆರೋಗ್ಯ ವಿಚಾರಿಸಿದರು. ಬಳಿಕ ವೈದ್ಯರೊಂದಿಗೆ ಮಾತನಾಡಿದ ಅವರು, ‘ಸ್ವಲ್ಪ ಒತ್ತಡ, ಬಿಸಿಲಿನಿಂದ ಈ ರೀತಿಯಾಗಿದೆ. ಸ್ವಲ ವಿಶ್ರಾಂತಿ ಪಡೆಯಿರಿ’ ಎಂದು ಶಿಕ್ಷಕಿಗೆ ಹೇಳಿದರು.

ADVERTISEMENT

ಈ ವೇಳೆ ಶಿಕ್ಷಣ ಇಲಾಖೆಯ ಮಲ್ಲಿಕಾರ್ಜುನ ಕಾವಲಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಅಳ್ಳಳ್ಳಿ, ತಾಲ್ಲೂಕು ಅಧ್ಯಕ್ಷ ಯಂಕಪ್ಪ ದೊಡ್ಡಮನಿ, ಇಸಿಒ ಚಾಂದಸಾಬ್ ಸೈದಾಪುರ್ ಸಿಆರ್‌ಪಿ ಲಿಂಗರೆಡ್ಡಿ ಗೊಬ್ಬೂರು ಇದ್ದರು.

ಒಂದೇ ಕಾಲೊನಿಯಲ್ಲಿ 45ಕ್ಕೂ ಹೆಚ್ಚೂ ಶಿಕ್ಷಕರಿಂದ ಗಣತಿ: ಸೈದಾಪುರ ಪಟ್ಟಣದ ಗಂಗಾನಗರ, ತಾಯಿ ಕಾಲೊನಿ ಮತ್ತು ಮಹಾವೀರ ಕಾಲೊನಿ ಸೇರಿದಂತೆ ಇನ್ನಿತರ ಕಾಲೋನಿಗಳ ಸೋಮವಾರ (ಅ.6) ಅಂತ್ಯಕ್ಕೆ 1,000ಕ್ಕೂ ಹೆಚ್ಚು ಮನೆಗಳ ಗಣತಿ ಮಾಡಿಲ್ಲ. ಈ ಬಗ್ಗೆ ಸ್ಥಳಿಯರು ಕಂದಾಯ ಇಲಾಖೆಗೆ ತಿಳಿಸಿದ್ದಾರೆ. ಬಳಿಕ ಯಾದಗಿರಿ ತಾಲ್ಲೂಕಿನಲ್ಲಿ ನಿರ್ದಿಷ್ಠ ಗುರಿ ಮುಟ್ಟದ ಶಿಕ್ಷಕರಿಗೆ ಜಿಲ್ಲಾ ಕೇಂದ್ರದಿಂದ 30 ಶಿಕ್ಷಕರನ್ನು ಇಲಾಖೆ ಸಮೀಕ್ಷೆಗೆ ಕಳುಹಿಸಿದೆ. ಆದರೆ ಇತರ ಗ್ರಾಮ ಮತ್ತು ಪಟ್ಟಣಗಳಲ್ಲಿ ಗುರಿ ಮುಟ್ಟದ ಇತರ ಶಿಕ್ಷಕರೂ ಈ ಪ್ರದೇಶದಲ್ಲೇ ಸಮೀಕ್ಷೆ ಮಾಡುತ್ತಿದ್ದಾರೆ. ಇದರಿಂದ ಸಮೀಕ್ಷೆ ಮಾಡದಿರುವ ಮನೆಗಳ ಹುಡುಕಾಟಕ್ಕೆ ಶಿಕ್ಷಕರು ಪರದಾಡುತ್ತಿದ್ದಾರೆ.

ಸೈದಾಪುರ ಪಟ್ಟಣದಲ್ಲಿ ಸಮೀಕ್ಷೆಯಲ್ಲಿ ತೊಡಗಿದ್ದ ಶಿಕ್ಷಕಿಗೆ ರಕ್ತದ ಒತ್ತಡ ಕಡಿಮೆಯಾಗಿ ತೆಲೆ ಸುತ್ತಿನಿಂದ ಬಳಲುತ್ತಿದ್ದರು. ತಕ್ಷಣ ನಮ್ಮ ಇಲಾಖೆಯರು ಆಸ್ಪತ್ರೆಗೆ ಸೇರೆಸಿ ಚಿಕಿತ್ಸೆ ಕೊಡಿಸಿದ್ದಾರೆ. ನಾನೂ ಆರೋಗ್ಯ ವಿಚಾರಿಸಿದ್ದೇನೆ.
ವೀರಪ್ಪ ಕನ್ನಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಯಾದಗಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.