ADVERTISEMENT

ಪರ ಪುರುಷರ ಜೊತೆ ಲೈಂಗಿಕ ಕ್ರಿಯೆಯಲ್ಲಿ ಸಹಕರಿಸದ ಪತ್ನಿಯ ಕೊಲೆ ಮಾಡಿದ ಗಂಡ!

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 16:07 IST
Last Updated 14 ಸೆಪ್ಟೆಂಬರ್ 2024, 16:07 IST
   

ಶಹಾಪುರ (ಯಾದಗಿರಿ ಜಿಲ್ಲೆ): ತನ್ನ ಪತ್ನಿ ಪರ ಪುರುಷರ ಜತೆ ಲೈಂಗಿಕ ಕ್ರಿಯೆಯಲ್ಲಿ ಸಹಕರಿಸದ ಕಾರಣಕ್ಕೆ ಪತಿ ಕೊಲೆ ಮಾಡಿದ ಘಟನೆ ತಿಳಿದು ಬಂದಿದೆ.

ಹುಣಸಗಿಯ ನಿವಾಸಿಗಳಾದ ಭೀಮಣ್ಣ ಬಾಗಲೇರ, ಸಾಬಣ್ಣ, ಮುತ್ತಪ್ಪ, ನೀಲಮ್ಮ, ಜೆಟ್ಟೆಪ್ಪ, ದೇವಪ್ಪ, ಶಾಂತಪ್ಪ ಕೊಲೆ ಗೈದ ಆರೋಪಿಗಳು ಆಗಿದ್ದಾರೆ. ಪ್ರಮುಖ ಆರೋಪಿ ಭೀಮಣ್ಣ ಬಾಗಲೇರ ಬಂಧಿಸಲಾಗಿದೆ ಎಂದು ಗೋಗಿ ಠಾಣೆ ಪಿಎಸ್‌ಐ ದೇವೇಂದ್ರ ರೆಡ್ಡಿ ತಿಳಿಸಿದ್ದಾರೆ.

ಏನಿದು ಪ್ರಕರಣ?

ADVERTISEMENT

ತಾಲ್ಲೂಕಿನ ಗಂಗನಾಳ ಗ್ರಾಮದ ಶರಣಬಸಮ್ಮ ಅವರು 2024 ಜುಲೈ 25ರಂದು ತನ್ನ ಗಂಡನ ಜತೆ ಕೋಣೆಯಲ್ಲಿ ಮಲಗಿದ್ದಾಗ ಮೃತಪಟ್ಟಿದ್ದರು. ‘ನನ್ನ ತಂಗಿಯ ಸಾವಿನ ಬಗ್ಗೆ ಸಂಶಯವಿದೆ’ ಎಂದು ಮೃತ ಶರಣಬಸಮ್ಮ ಅವರ ಅಣ್ಣ ಅಂಬಲಪ್ಪ ಬಿರಾದಾರ ಗೋಗಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಯುಡಿಆರ್ ದೂರು ದಾಖಲಾಗಿತ್ತು.

ನಂತರ ಸೆ.12ರಂದು ಮತ್ತೆ ಮೃತ ಶರಣಬಸಮ್ಮ ಅವರ ಅಣ್ಣ ಅಂಬಲಪ್ಪ ಬಿರಾದಾರ ಗೋಗಿ ಠಾಣೆಗೆ ಹಾಜರಾಗಿ ‘ನನ್ನ ತಂಗಿ ಅವರ ಮದುವೆ 2023 ಮೇ 30ರಂದು ಹುಣಸಗಿಯ ಭೀಮಣ್ಣ ಬಾಗಲೇರ ಜೊತೆ ಆಗಿತ್ತು. ಕೆಲ ದಿನ ಬಳಿಕ ನನ್ನ ತಂಗಿಗೆ ಕಿರುಕುಳ ನೀಡುತ್ತಾ ನನಗೆ ಸಾಲ ಜಾಸ್ತಿಯಾಗಿದೆ. ನೀನು ಬೇರೆಯವರ ಜೊತೆ ಹೋಗಬೇಕು. ಅವರು ಹೇಗೆ ಹೇಳುತ್ತಾರೆ. ಹಾಗೆ ಅವರೊಂದಿಗೆ ಸಹಕರಿಸಬೇಕು’ ಎಂದು ಲೈಂಗಿಕ ಕಿರುಕುಳ ನೀಡತೊಡಗಿದ ಎಂದು ದೂರಿನಲ್ಲಿ ನಮೂದಿಸಿದ್ದಾರೆ.

‘ನಂತರ ನನ್ನ ತಂಗಿಯ ಮೊಬೈಲ್ ಸಿಕ್ಕಿದ್ದು, ಅದರಲ್ಲಿ ಕಾಲ್‌ ರಿಕಾಡಿಂಗ್ ನೋಡಿ ಕೇಳಿದಾಗ ಭೀಮಣ್ಣ ಬಾಗಲೇರ ಈತನು ನೀನು ಬೇರೆಯವರ ಜೊತೆ ಮಲಗಬೇಕು. ಅದರಿಂದ ನನಗೆ ಖುಷಿಯಾಗುತ್ತದೆ. ಮಕ್ಕಳು ಆಗುತ್ತವೆ ಹಾಗೂ ದುಡ್ಡು ಬರುತ್ತದೆ. ಸಾಲ ಮುಟ್ಟುತ್ತದೆ (ಲೈಂಗಿಕವಾಗಿ ಹಾಸಿಗೆ ಹಂಚಿಕೊಳ್ಳಬೇಕು) ಎಂದು ಲೈಂಗಿಕವಾಗಿ ಕಿರುಕುಳ ನೀಡಿರುತ್ತಾರೆ. ನೀನು ಬೇರೆಯವರ ಜೊತೆ ಹಾಸಿಗೆ ಹಂಚಿಕೊಳ್ಳದಿದ್ದರೆ ನಿಮ್ಮ ಊರಲ್ಲಿ (ಗಂಗನಾಳ) ಬಂದು ಕೊಲೆ ಮಾಡುವುದಾಗಿ ಹೇಳಿದ್ದಾನೆ. ಅದರಂತೆ ಜುಲೈ 25ರಂದು ಕೊಲೆ ಮಾಡಿದ್ದಾನೆ. ಇದಕ್ಕೆ ಉಳಿದ ಜನರು ಕೊಲೆ ಮಾಡಲು ಕಾರಣರಾಗಿದ್ದಾರೆ’ ಎಂದು ದೂರಿನಲ್ಲಿ ಅಂಬಲಪ್ಪ ಆರೋಪಿಸಿದ್ದಾರೆ.

ಗೋಗಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

***

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಭೀಮಣ್ಣ ಬಾಗಲೇರ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಇನ್ನುಳಿದ ಆರೋಪಿಗಳ ಪತ್ತೆ ನಡೆದಿದೆ

–ದೇವೇಂದ್ರ ರೆಡ್ಡಿ, ಪಿಎಸ್‌ಐ ಗೋಗಿ ಠಾಣೆ, ಶಹಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.