ADVERTISEMENT

ವಡವಟ್: ಭಗೀರಥ ಗ್ರಾಮ ಘಟಕ ಉದ್ಘಾಟನೆ; ಉಪ್ಪಾರ ಸಮಾಜದ ಸಂಘಟನೆಗೆ ಕರೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2022, 5:45 IST
Last Updated 17 ಫೆಬ್ರುವರಿ 2022, 5:45 IST
ಸೈದಾಪುರ ಸಮೀಪದ ವಡವಟ್ ಗ್ರಾಮದಲ್ಲಿ ಗುರುಬಸವ ರಾಜಗುರು ಸ್ವಾಮೀಜಿ ಹಾಗೂ ಜೆಡಿಎಸ್ ಮುಖಂಡ ಶರಣಗೌಡ ಕಂದಕೂರ ಅವರು ಭಗೀರಥ ಗ್ರಾಮ ಘಟಕದ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿದರು
ಸೈದಾಪುರ ಸಮೀಪದ ವಡವಟ್ ಗ್ರಾಮದಲ್ಲಿ ಗುರುಬಸವ ರಾಜಗುರು ಸ್ವಾಮೀಜಿ ಹಾಗೂ ಜೆಡಿಎಸ್ ಮುಖಂಡ ಶರಣಗೌಡ ಕಂದಕೂರ ಅವರು ಭಗೀರಥ ಗ್ರಾಮ ಘಟಕದ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿದರು   

ವಡವಟ್ (ಸೈದಾಪುರ): ಎಲ್ಲ ಜಾತಿ, ಧರ್ಮದವರನ್ನು ಸಮಾನವಾಗಿ ಕಾಣಬೇಕು. ಸಮಾಜದ ಜನರು ಮಕ್ಕಳಿಗೆ ಶಿಕ್ಷಣದ ಜತೆ ಸಂಸ್ಕಾರ ನೀಡಿ, ಮುಖ್ಯವಾಹಿನಿಗೆ ತರಬೇಕು ಎಂದು ಸುಕ್ಷೇತ್ರ ಮಲದಕಲ್‌ನ ಗುರುಬಸವ ರಾಜಗುರು ಸ್ವಾಮೀಜಿ ಹೇಳಿದರು.

ಸಮೀಪದ ವಡವಟ್ ಗ್ರಾಮದಲ್ಲಿ ಭಗೀರಥ ಉಪ್ಪಾರ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಭಗೀರಥ ವೃತ್ತ ಹಾಗೂ ಭಗೀರಥ ಗ್ರಾಮ ಘಟಕದ ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ವಿದ್ಯೆ ಉದ್ಯೋಗ ನೀಡಿದರೆ, ಸಂಸ್ಕಾರವು ಸನ್ಮಾರ್ಗ ತೋರಿಸುತ್ತದೆ. ಸೂರ್ಯವಂಶ ಕ್ಷತ್ರಿಯ ವಂಶಸ್ಥರಾದ ಭಗೀರಥ ಸಮಾಜದವರು ದುಶ್ಚಟ ಗಳಿಂದ ದೂರವಿದ್ದು, ಸಂಘಟನೆಗೆ ಒತ್ತು ನೀಡಬೇಕು ಎಂದರು.

ADVERTISEMENT

ಜೆಡಿಎಸ್ ಮುಖಂಡ ಶರಣಗೌಡ ಕಂದಕೂರ ಮಾತನಾಡಿ, ಉಪ್ಪಾರ ಸಮಾಜವರು ಪ್ರತಿ ಗ್ರಾಮದಲ್ಲಿ ಸಂಘಟನೆಯಾಗಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡಬೇಕು. ಮುಂದಿನ ದಿನಗಳಲ್ಲಿ ಸಮಾಜಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.

ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಉಪ್ಪಾರ ಸಮಾಜದವರನ್ನು ಸನ್ಮಾನಿಸಲಾಯಿತು.

ರಾಜ್ಯ ಉಪ್ಪಾರ ಸಂಘದ ನಿರ್ದೇಶಕ ರಾಮಣ್ಣ ಕೊಟಗೇರಾ ಬಳಿಚಕ್ರ, ಪ್ರಧಾನ ಕಾರ್ಯದರ್ಶಿ ಬನ್ನಪ್ಪ ಹುಲಿಬೆಟ್ಟ, ಕಾರ್ಯದರ್ಶಿ ನಿಜಗುಣ ಗುಂಟಿ ಸರ್ಜಾಪುರ, ವಲಯ ಘಟಕದ ಅಧ್ಯಕ್ಷ ಶಾಂತಪ್ಪ ಬೆಳಗುಂದಿ, ಬಿಜೆಪಿ ಮುಖಂಡ ಸಾಯಿಬಣ್ಣ ಬೋರಬಂಡ, ಗಣಪತಿ ಪೂಜಾರಿ, ಶ್ರೀನಿವಾಸ ಶೆಟ್ಟಿ, ಕೆ.ಆಚಿಜನೇಯ ಮಕ್ತಲ್, ಪ್ರವೀಣ್ ಕುಮಾರ ಗೋಗಿ, ಶರಣಪ್ಪ, ರಾಹುಲ್, ಭೀಮಣ್ಣ ಚಿಕ್ಕನಳ್ಳಿ, ರವಿಕುಮಾರ ಕೋಡ್ಲಾ, ಶೇಖರ್ ಸಾಗರ, ರಾಘವೇಂದ್ರರೆಡ್ಡಿ, ಗುರುನಾಥರೆಡ್ಡಿ, ಆನಂದರೆಡ್ಡಿ, ವೆಂಕಟರೆಡ್ಡಿ, ಜೀವನ ಕುಮಾರ, ಶ್ರೀಕಾಂತ, ಶ್ರೀನಿವಾಸ ಪೊರ್ಲಾ ಕಡೇಚೂರು, ನರಸಿಂಗಪ್ಪ ಮೊಗಸಟ್ಟ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.