ADVERTISEMENT

ಯಾದಗಿರಿ: ‘ಅಪೌಷ್ಟಿಕತೆ ನಿವಾರಣೆ ತುರ್ತು ಅವಶ್ಯ’

ಶಿಶು ಮತ್ತು ಚಿಕ್ಕ ಮಕ್ಕಳ ಆಹಾರ; ಒಂದು ದಿನದ ಸಂವೇದನಾ ಐವೈಸಿಎಫ್ ಕೌಶಲ ತರಬೇತಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2022, 4:48 IST
Last Updated 12 ಸೆಪ್ಟೆಂಬರ್ 2022, 4:48 IST
ಯಾದಗಿರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಶಿಶು ಮತ್ತು ಚಿಕ್ಕ ಮಕ್ಕಳ ಆಹಾರ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಅಧಿಕಾರಿಗಳು
ಯಾದಗಿರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಶಿಶು ಮತ್ತು ಚಿಕ್ಕ ಮಕ್ಕಳ ಆಹಾರ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಅಧಿಕಾರಿಗಳು   

ಯಾದಗಿರಿ: ಅಪೌಷ್ಟಿಕತೆ ನಿವಾರಣೆಯತ್ತ ಹೆಚ್ಚು ಗಮನಹರಿಸುವುದು ಇಂದಿನ ತುರ್ತು ಅವಶ್ಯವಾಗಿದೆ ಎಂದು ಮಾಜಿ ಶಾಸಕ ಡಾ.ವೀರಬಸವಂತ ರೆಡ್ಡಿ ಹೇಳಿದರು.

ಜಿ.ಪಂ. ಸಭಾಂಗಣದಲ್ಲಿ ಆರೋಗ್ಯ ಇಲಾಖೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಶಿಶು ಮತ್ತು ಚಿಕ್ಕ ಮಕ್ಕಳ ಆಹಾರ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ತಾಯಿ ಎದೆಹಾಲು ಶಿಶುವಿಗೆ ಅಮೃತದ ಸಮಾನ. ಮಕ್ಕಳ ಪೌಷ್ಟಿಕಾಂಶ ಕೊರತೆ ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತಾಯಿಂದಿರು, ಮಗು ಜನಿಸಿದ 6 ತಿಂಗಳವರೆಗೆ ಎದೆ ಹಾಲು ನೀಡಬೇಕು ಎಂದು ಸಲಹೆ ನೀಡಿದರು.

ADVERTISEMENT

ಡಾ.ಲಕ್ಷ್ಮಿಕಾಂತ ಮಾತನಾಡಿ, ಶಿಶು ಆರೋಗ್ಯವಂತರಾಗಿರಲು ತಾಯಿ ಹಾಲು ಅತಿಮುಖ್ಯ ಎಂದರು.

ಐವೈಸಿಎಫ್ ಅಧ್ಯಯನ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಡಾ. ಸಿ.ಆರ್. ಬನಾಪುರಮಠ ಮಾತನಾಡಿ, ಮಹಿಳೆಯರು ತಾವು ಆರೋಗ್ಯವಂತರಾಗಿ ಮಗುವಿನ ಆರೋಗ್ಯಕ್ಕೂ ಗಮನ ನೀಡಬೇಕು. ಗರ್ಭಿಣಿಯರು ಹೆಚ್ಚು ಕಾಳಜಿ ವಹಿಸಿದಲ್ಲಿ ತಾಯಿ-ಮಗು ಆರೋಗ್ಯವಂತರಾಗಿರಲು ಸಾಧ್ಯ ಎಂದು ಹೇಳಿದರು.

ಶಿಶುಗಳಿಗೆ ಸಾಂಪ್ರದಾಯಿಕ ತಾಯಿ ಬೇಕು. ಶಿಶುಗಳಿಗೆ ಹೆಚ್ಚಿನ ಪೋಷಣೆ, ವಾತ್ಸಲ್ಯ ಮತ್ತು ರಕ್ಷಣೆಯ ಅಗತ್ಯವಿರುತ್ತದೆ. ಮಗುವಿಗೆ ಜೀವನದಲ್ಲಿ ಉತ್ತಮ ಆರಂಭ ನೀಡಲು ಸ್ತನ್ಯಪಾನವು ಎಲ್ಲ ಅಗತ್ಯ ಪೂರೈಸುತ್ತದೆ. ಸ್ತನ್ಯಪಾನದ ಮಹತ್ವ ಕುರಿತು ಸರಿಯಾದ ಮಾಹಿತಿ ನೀಡಬೇಕು. ಈ ಬಗ್ಗೆ ವಿವಿಧ ತಪ್ಪುಗ್ರಹಿಕೆಗಳು ಮತ್ತು ಅಜ್ಞಾನ ಹಾನಿಕಾರಕ ಎಂದರು.

ಅಸಾಂಪ್ರದಾಯಿಕ ಅಭ್ಯಾಸಗಳು ತಾಯಿಯ ಅನಾರೋಗ್ಯ, ಆತಂಕಕ್ಕೆ ವಿವಿಧ ನವಜಾತ ಶಿಶುಗಳ ಸಮಸ್ಯೆಗಳಿಗೆ ಕಾರಣವಾಗುತ್ತವೆ. ತರಬೇತಿ ಪಡೆದ ಆರೋಗ್ಯ, ವೃತ್ತಿಪರರ ಸಮಯೋಚಿತ ಸಲಹೆ ಮತ್ತು ಬೆಂಬಲವು ಸ್ತನ್ಯಪಾನದ ತೊಂದರೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಸಮಸ್ಯೆಗಳ ಬಗ್ಗೆ ಎಚ್ಚರಿಕೆಯಿಂದ ಗಮನಹರಿಸುವುದು ಮತ್ತು ಅವುಗಳನ್ನು ಸರಿಪಡಿಸಲು ಹಂತ-ಹಂತದ ಕ್ರಮಗಳು ಸಹಕಾರಿ‘ ಎಂದರು.

ಹೆರಿಗೆಯ ನಂತರ ಮಗುವನ್ನು ತಾಯಿಯಿಂದ ಬೇರ್ಪಡಿಸುವುದು, ಆ ಮೂಲಕ ಶಿಶುವಿಗೆ ಆರಂಭಿಕ ಸಂಪರ್ಕ ಮತ್ತು ಆರಂಭಿಕ ಸ್ತನ್ಯಪಾನ ನಿರಾಕರಿಸುವುದು, ಬಾಟಲ್-ಫೀಡಿಂಗ್ ಸಂಸ್ಕೃತಿಯ ಸ್ಥಾಪನೆಗೆ ಅನುಕೂಲಕರವಾಗಿವೆ‘ ಎಂದು ತಿಳಿಸಿದರು.

‘ತಾಯಿ ಮತ್ತು ಮಗುವಿನ ನಡುವಿನ ಆರಂಭಿಕ ಸಂಪರ್ಕ, ವಿಶೇಷ. ಸ್ತನ್ಯಪಾನ, ಆಹಾರ ತ್ಯಜಿಸುವುದು ಸರಿಯಲ್ಲ. ತರ್ಕಬದ್ಧ ಆಹಾರ ಪದ್ಧತಿಗಳನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ವೃತ್ತಿಪರರು ಮತ್ತು ಸಂಸ್ಥೆಗಳಿಂದ ತಾಯಂದಿರನ್ನು ಬೆಂಬಲಿಸಬೇಕು‘ ಎಂದರು.

ಐವೈಸಿಎಫ್‌ ಕೋರ್ಸ್‌ಗಳ ಸಂಸ್ಥಾಪಕ ಕಾರ್ಯದರ್ಶಿ ಡಾ.ಎಚ್.ಬಿ.ಮಲ್ಲಿಕಾರ್ಜುನ ಮಾತನಾಡಿದರು.

ದಾವಣಗೆರೆ ಎಸ್‌ಎಸ್‌ಐಎಂಎಸ್ ಪ್ರೊ ಡಾ.ಲತಾ, ಡಾ.ಶಾಂತಿಲಾಲ, ಐವೈಸಿಎಫ್ ರಾಷ್ಟ್ರೀಯ ತರಬೇತಿದಾರರು ಡಾ.ದಿನಕರ ಮೋರೆ, ಡಿಎಚ್‌ಒ ಡಾ.ಗುರುರಾಜ ಹಿರೇಗೌಡ, ಆರ್‌ಸಿಎಚ್ ಅಧಿಕಾರಿ ಡಾ.ಮಲ್ಲಪ್ಪ ಕಣಜಿಕರ, ಡಾ.ಶರಣ ಬುಳ್ಳಾ ಇದ್ದರು.

ಡಾ.ರಾಘವೇಂದ್ರ ನಿರ್ವಹಿಸಿದರು. ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಸಿಬ್ಬಂದಿ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.