ADVERTISEMENT

ವಚನ ಸಾಹಿತ್ಯ ಅರಿವಿನ ಬೆಳಕು ವಿಸ್ತರಿಸುತ್ತದೆ: ವಿಠಲ ಯಾದವ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 8:13 IST
Last Updated 28 ಡಿಸೆಂಬರ್ 2025, 8:13 IST
ಶಹಾಪುರ ನಗರದ ಬಸವ ಮಾರ್ಗ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಬಸವ ಬೆಳಕು-125 ಕಾರ್ಯಕ್ರಮವನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠಲ ಯಾದವ ಉದ್ಘಾಟಿಸಿದರು. ಗಣ್ಯರು ಉಪಸ್ಥಿತರಿದ್ದರು
ಶಹಾಪುರ ನಗರದ ಬಸವ ಮಾರ್ಗ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಬಸವ ಬೆಳಕು-125 ಕಾರ್ಯಕ್ರಮವನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠಲ ಯಾದವ ಉದ್ಘಾಟಿಸಿದರು. ಗಣ್ಯರು ಉಪಸ್ಥಿತರಿದ್ದರು   

ಶಹಾಪುರ: ‘ಶರಣ ಸಾಹಿತಿ ದಿ.ಲಿಂಗಣ್ಣ ಸತ್ಯಂಪೇಟೆ ಅವರ ಪ್ರಭಾವ ನನ್ನ ಮೇಲೆ ದಟ್ಟವಾಗಿದೆ. ವಚನ ಸಾಹಿತ್ಯವನ್ನು ನಿತ್ಯ ಓದಬೇಕು ಎಂಬ ಅವರ ಪ್ರೇರಣೆಯಿಂದ ಸಾಮಾಜಿಕ ಕಾಳಜಿಗೆ ಕಾರಣವಾಗಿದೆ. ವಚನ ಸಾಹಿತ್ಯ ನಮ್ಮ ಅರಿವಿನ ಬೆಳಕು ವಿಸ್ತರಿಸುತ್ತದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠಲ ಯಾದವ ತಿಳಿಸಿದರು.

ಇಲ್ಲಿನ ಬಸವ ಮಾರ್ಗ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಬಸವ ಬೆಳಕು-125 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯ ಸಿದ್ದರಾಮ ಹೊನ್ಕಲ್ ಮಾತನಾಡಿ, ‘ಬಸವಾದಿ ಶರಣರ ವಚನ ಸಾಹಿತ್ಯ ಮಾನವೀಯ ಮೌಲ್ಯಗಳ ತಳಹದಿಯ ಮೇಲೆ ರಚಿತವಾಗಿವೆ. ಶರಣ ಬದುಕು ಹಾಗೂ ಬೋಧನೆ ಜನಮುಖಿಯಾಗಿವೆ. ಶರಣರು ಕಟ್ಟಿದ ಧರ್ಮ ಅದು ಮೊದಲ ಧರ್ಮವಾಗಿದೆ’ ಎಂದರು.

ಪ್ರತಿಷ್ಠಾನದ ಸಂಚಾಲಕ ವಿಶ್ವಾರಾಧ್ಯ ಸತ್ಯಂಪೇಟೆ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ ಸಜ್ಜನ, ಶರಣು ಗದ್ದುಗೆ, ಆಹಾರ ನಿರೀಕ್ಷಕ ನಿವೃತ್ತ ಅಧಿಕಾರಿ ವಿಶ್ವಾರಾಧ್ಯ ಸತ್ಯಂಪೇಟ, ಸಿದ್ದಲಿಂಗಣ್ಣ ಆನೇಗುಂದಿ, ರಾಜಶೇಖರ ನಗನೂರ, ಶಿವಯೋಗಪ್ಪ ಮುಡಬೂಳ, ಮರೆಪ್ಪ ಅಣಬಿ, ಲಕ್ಷ್ಮಣ ಲಾಳಸೇರಿ, ಶರಾವತಿ ಸತ್ಯಂಪೇಟೆ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.