ವಡಗೇರಾ: ಡಿ.1 ರಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿದ್ದರಿಂದ ಹೆಲ್ಮೆಟ್‌ಗಳ ಮಾರಾಟ ಜೋರಾಗಿದೆ.
ಈಗಾಗಲೇ ಹೆದ್ದಾರಿ ಬಳಿ ಪೆಟ್ರೂಲ್ ಬಂಕ್ ಸಮೀಪ ಹೆಲ್ಮೆಟ್ ಮಾರಾಟ ಭರ್ಜರಿಯಾಗಿ ನಡೆದಿದೆ. ನೆರೆಯ ತೆಲಂಗಾಣದಿಂದ ಬಂದಿರುವ ವ್ಯಾಪಾರಿಗಳು ಐಎಸ್‌ಐ ಚಿಹ್ನೆಯುಳ್ಳ ಉತ್ತಮ ಗುಣಮಟ್ಟದ ಹೆಲ್ಮೆಟ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ.
‘ಒಂದು ಹೆಲ್ಮೆಟ್ ಬೆಲೆ ₹550–₹600 ಇದೆ. ದಿನಕ್ಕೆ 5–6 ಹೆಲ್ಮೆಟ್‌ಗಳು ಮಾರಾಟವಾಗುತ್ತಿವೆ. ಈ ಭಾಗದಲ್ಲಿ ಚನ್ನಾಗಿ ವ್ಯಾಪಾರವಾಗಬಹುದು ಎಂಬ ಆಶಾಭಾವನೆಯಿಂದ ಸಾವಿರಾರು ರೂಪಾಯಿ ಬಂಡವಾಳ ಹಾಕಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಹೆಲ್ಮೆಟ್‌ಗಳು ಮಾರಾಟವಾಗಬಹುದು’ ಎಂದು ವ್ಯಾಪಾರಿ ಪ್ರಕಾಶ ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ ಜಿಲ್ಲಾ ಪೊಲೀಸ್ ಇಲಾಖೆ ಮುಂಚಿತವಾಗಿಯೇ ವಾಹನ ಚಾಲಕರಲ್ಲಿ ಜಾಗೃತಿ ಮೂಡಿಸಿದೆ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡಿದರೆ ₹500 ದಂಡ ವಿಧಿಸಲಾಗುವದು ಎಂಬ ಸಂದೇಶ ಪತ್ರಿಕೆಗಳಲ್ಲಿ ಹಾಗೂ ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆ ಸಂದೇಶದಲ್ಲಿ ಸುರಕ್ಷಿತ ವಾಹನ ಚಾಲನೆಯ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ.
ಡಿ.1 ರಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೇಟ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಸರ್ಕಾರದ ನಿಯಮವನ್ನು ಪ್ರತಿಯೊಬ್ಬರು ಪಾಲಿಸಬೇಕು. ಇದರ ಬಗ್ಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆಮಹೇಬೂಬ್ ಅಲಿ ಪಿಎಸ್‌ಐ ವಡಗೇರಾ
ಪೊಲೀಸ್ ಇಲಾಖೆ ಹೆಲ್ಮೆಟ್ ಕಡ್ಡಾಯಗೊಳಿಸಿರುವುದು ಸ್ವಾಗತರ್ಹ. ಕಡ್ಡಾಯವಾಗಿ ಬೈಕ್ ಸವಾರರು ಹೆಲ್ಮೆಟ್ ಧರಿಸಿ ಪ್ರಯಾಿಸಬೇಕು. ದಂಡ ಕಟ್ಟುವುದರಿಂದ ಯಾವುದೇ ಪ್ರಯೋಜನ ಇಲ್ಲ.ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಿ ನಾಗಪ್ಪ ಕುಂಬಾರ ಪತ್ರಕರ್ತ
ನಮ್ಮ ಭಾಗದಲ್ಲಿ ಬಿಸಿಲು ಹೆಚ್ಚು ತಲೆಗೆ ಹೆಲ್ಮೆಟ್ ಹಾಕುವುದರಿಂದ ತಲೆಯಲ್ಲಿ ಗುಳ್ಳೆ ಆಗುತ್ತವೆ ಏಕಾಏಕಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿರುವುದರಿಂದ ಸಮಸ್ಯೆಗಳು ಆಗುತ್ತವೆಸುರೇಶ ಪೂಜಾರಿ ಬೆಂಡೆಬೆಂಬಳಿ ವಾಹನ ಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.