ಶಹಾಪುರ: ‘ರಾಮಾಯಣ ಮಹಾಕಾವ್ಯದ ಮೂಲಕ ಜೀವನದ ಎಲ್ಲ ಪಾಠವನ್ನು ಬೋಧಿಸಿದ ಮಹರ್ಷಿ ವಾಲ್ಮೀಕಿ ಮನು ಕುಲದ ಬಾಳ್ವೆಯ ದಿಕ್ಸೂಚಿಯಾಗಿದ್ದಾರೆ’ ಎಂದು ವಾಲ್ಮೀಕಿ ನಾಯಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರೆಪ್ಪ ಪ್ಯಾಟಿ ಶಿರವಾಳ ತಿಳಿಸಿದರು.
ನಗರದ ನಗರಸಭೆ ಆವರಣದಲ್ಲಿ ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಹಾಗೂ ನಗರಸಭೆ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಾವೆಲ್ಲರೂ ಶಿಕ್ಷಣದ ಕ್ರಾಂತಿ ನಡೆಸಿದರೆ ಸಾಕು ಜೀವನ ಪಾವನವಾಗುತ್ತದೆ. ಸರ್ಕಾರ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ವಸತಿನಿಲಯ ಹಾಗೂ ಅಗತ್ಯ ಸೌಲಭ್ಯ ನೀಡಬೇಕು’ ಎಂದು ಮನವಿ ಮಾಡಿದರು.
ಶಿಕ್ಷಕಿ ಭಾಗ್ಯ ದೊರಿ ವಿಶೇಷ ಉಪನ್ಯಾಸ ನೀಡಿದರು.
ತಹಶೀಲ್ದಾರ್ ಸಿದ್ದಾರೂಢ ಬನ್ನಿಕೊಪ್ಪ, ನಗರಸಭೆ ಅಧ್ಯಕ್ಷೆ ಮಹೆರುನ್ನೀಸಾ ಬೇಗಂ, ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ, ಉಪ ಖಜಾನೆ ಅಧಿಕಾರಿ ಮೋನಪ್ಪ ಶಿರವಾಳ, ಬಿಸಿಎಂ ಅಧಿಕಾರಿ ಚನ್ನಪ್ಪಗೌಡ ಚೌಧರಿ, ಬಾಲರಾಜ ಕೋರವಾರ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ರಾಯಪ್ಪಗೌಡ ಹುಡೇದ, ಶಾಂತಪ್ಪ ಕಟ್ಟಿಮನಿ, ಸಯ್ಯದ್ ಮುಸ್ತಾಫ್ ದರ್ಬಾನ್ ಹಾಗೂ ವಾಲ್ಮೀಕಿ ಸಮುದಾಯದ ಮುಖಂಡರಾದ ಹಣಮಂತರಾಯ ದೊರೆ ದಳಪತಿ, ಭಾಗ್ಯ ದೊರೆ, ಶೇಖರ ದೊರೆ, ಅಶೋಕ ನಾಯಕ ಹಳಿಸಗರ, ಶಿವರಾಜ ಹವಲ್ದಾರ, ಶ್ರೀನಿವಾಸ ಯಕ್ಷಿಂತಿ, ಸಿದ್ದಣ್ಣ ಮಾಣಸುಣಗಿ, ಶರಣಪ್ಪ ಪ್ಯಾಟಿ, ವಿನೋದ ದೊರೆ, ಅಮರೇಶ ಇಟಗಿ, ಭೀಮಣ್ಣ ನಾಯಕ, ಸಣ್ಣಸೈದಪ್ಪ ಬಾಣತಿಹಾಳ,ಸಂಗಣ್ಣ ಸೈದಾಪುರ, ರಾಘವೇಂದ್ರ ಯಕ್ಷಿಂತಿ, ಶಿವರಾಜ ಮೂಡಬೂಳ, ವಿಷ್ಣು ಶಿರವಾಳ, ಬಸವರಾಜ ವನದುರ್ಗ ಭಾಗಹಹಿಸಿದ್ದರು.
ಇದಕ್ಕೂ ಮೊದಲು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ನಗರದ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.