ADVERTISEMENT

ಯಾದಗಿರಿ ವೀರಾಂಜನೇಯ ಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 15:47 IST
Last Updated 13 ಏಪ್ರಿಲ್ 2025, 15:47 IST
ಯಾದಗಿರಿ ತಾಲ್ಲೂಕಿನ ಠಾಣಾಗುಂದಿ (ವಿಶ್ವಾಸಪುರ ನಗರದ) ಆರಾಧ್ಯ ದೈವ ವೀರಾಂಜನೇಯ ಸ್ವಾಮಿಯ 16ನೇ ವರ್ಷದ ಜಾತ್ರಾ ಮಹೋತ್ಸವವು ಶನಿವಾರ ವಿಜೃಂಭಣೆಯಿಂದ ಜರುಗಿತು
ಯಾದಗಿರಿ ತಾಲ್ಲೂಕಿನ ಠಾಣಾಗುಂದಿ (ವಿಶ್ವಾಸಪುರ ನಗರದ) ಆರಾಧ್ಯ ದೈವ ವೀರಾಂಜನೇಯ ಸ್ವಾಮಿಯ 16ನೇ ವರ್ಷದ ಜಾತ್ರಾ ಮಹೋತ್ಸವವು ಶನಿವಾರ ವಿಜೃಂಭಣೆಯಿಂದ ಜರುಗಿತು   

ಯಾದಗಿರಿ: ತಾಲ್ಲೂಕಿನ ಠಾಣಾಗುಂದಿ (ವಿಶ್ವಾಸಪುರ ನಗರದ) ಆರಾಧ್ಯ ದೈವ ವೀರಾಂಜನೇಯ ಸ್ವಾಮಿಯ 16ನೇ ವರ್ಷದ ಜಾತ್ರಾ ಮಹೋತ್ಸವ ಶನಿವಾರ ವಿಜೃಂಭಣೆಯಿಂದ ಜರುಗಿತು.

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 7 ಗಂಟೆಗೆ ಸ್ವಾಮಿಗೆ ಚೆನ್ನವೀರಯ್ಯ ಸ್ವಾಮಿ, ಶರಣಪ್ಪ ಪೂಜಾರಿ, ಲಕ್ಷ್ಮಣ ಪವಾರ್ ಇವರಿಂದ ರುದ್ರಾಭಿಷೇಕ ನೆರವೇರಿತು. ನಂತರ ಬೆಳಿಗ್ಗೆ 8.30ಕ್ಕೆ ಹೇಳಿಕೆ ಕಾರ್ಯಕ್ರಮ ಜರುಗಿತು. ಸಂಜೆ 4-35ಕ್ಕೆ ಸುಮಂಗಲಿಯರಿಂದ ಪೂರ್ಣಕುಂಭ ಮೆರವಣಿಗೆಯ ಮಧ್ಯೆ ವೀರಾಂಜನೇಯಸ್ವಾಮಿ ಸ್ವಾಮಿಯ ಮೂರ್ತಿಯ ಭವ್ಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿತು.

ವಾದ್ಯ ಮೇಳಗಳೊಂದಿಗೆ ಸಂಜೆ 6 ಗಂಟೆಗೆ ರಥೋತ್ಸವ ಜರುಗಿತು. ನಂತರ ಅನ್ನದಾಸೋಹ ಪ್ರಸಾದ ಜರುಗಿದ್ದವು. ತದನಂತ ಧರ್ಮಸಭೆ ಜರುಗಿತು. ಸಭೆಯಲ್ಲಿ ರೆಡ್ಡಿ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಶರಣಪ್ಪ ಪೂಜಾರಿ ಠಾಣಾಗುಂದಿ, ಗೋವಿಂದಪ್ಪ ಭಾಗವಹಿಸಿದ್ದರು.

ADVERTISEMENT

ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಮುದ್ನಾಳ ಅವರು 16 ನೇ ವರ್ಷದ ರಥೋತ್ಸವ ಅದ್ಧೂರಿಯಾಗಿ ಜರುಗಿತು. ಈ ಪುಣ್ಯ ಕ್ಷೇತ್ರಕ್ಕೆ ಸರ್ಕಾರದ ಸೌಲಭ್ಯ ಸಿಗಬೇಕು. ಮುಂದಿನ ದಿನಗಳಲ್ಲಿ ಸಾಮೂಹಿಕ ವಿವಾಹ ಆದರೆ ಬಡವರಿಗೆ ಅನುಕೂಲ ಆಗುತ್ತೆಂಬ ಭಾವನೆ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಖೇಮ್ ಸಿಂಗ್, ಲಕ್ಷ್ಮಣ್, ರವಿ, ಭೀಮಸಿಂಗ್ ಮನೋಹರ್, ಬೋಜು, ಶರಣು ಗೋಪಾಲ್ ಸೇರಿ ಅನೇಕ ಸಾರ್ವಜನಿಕರು ಜಾತ್ರೆಯಲ್ಲಿ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.