
ಯಾದಗಿರಿ: ‘ಮಹಾಯೋಗಿ ವೇಮನ ಅವರು ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದ ಸಮಾಜ ಸುಧಾರಕರಾಗಿದ್ದಾರೆ’ ಎಂದು ಉಪನ್ಯಾಸಕ ಸಿದ್ಧರಾಜರೆಡ್ಡಿ ಹೇಳಿದರು.
ನಗರದ ಜಿಲ್ಲಾ ಕಸಾಪ ಸಭಾಂಗಣದಲ್ಲಿ ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವೇಮನರು ಜನ ಸಾಮಾನ್ಯರ ಕವಿ. ಜಾತೀಯತೆ, ಅಂಧಶ್ರದ್ದೆ, ಮೇಲು-ಕೀಳುಗಳನ್ನು ತಮ್ಮ ಪದ್ಯಗಳ ಮೂಲಕ ಧಿಕ್ಕರಿಸಿದ್ದರು’ ಎಂದರು.
‘ಕನ್ನಡದಲ್ಲಿ ಸರ್ವಜ್ಞ, ತಮಿಳಿನ ತಿರುವಳ್ಳುವರ್ ಅವರಂತೆ ತೆಲುಗು ಸಾಹಿತ್ಯಕ್ಕೆ ಮಹಾಯೋಗಿ ವೇಮನ. ಅವರ ಪದ್ಯಗಳ ಕುರಿತು ಮೊದಲು ಬೆಳಕು ಚೆಲ್ಲಿದ್ದು ಸಿ.ಪಿ.ಬ್ರೌನ್. ವೇಮನ ಪದ್ಯಗಳನ್ನು ತೆಲುಗಿನಿಂದ ಇಂಗ್ಲೀಷ್‌ಗೆ ಅನುವಾದ ಮಾಡಿದ್ದಾರೆ. ವೇಮನರ ಪದ್ಯಗಳು ವಿಶ್ವಾದ್ಯಂತ ಜನಪ್ರಿಯವಾಗಿವೆ’ ಎಂದರು.
‘ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೊಂಡವೀಡು ಗ್ರಾಮದಲ್ಲಿ ವೇಮನ ಜನಿಸಿದರು. ರಾಜ ಕುಟುಂಬದವರಾದರೂ ವೇಮನರು ಸುಖ, ಸಂಪತ್ತನ್ನು ತ್ಯಜಿಸಿದರು. ವಿಶ್ವದಾಭಿರಾಮ ಕೇಳು ವೇಮ ಎನ್ನುವ ಅಂಕಿತದೊಂದಿಗೆ ಸಮಾಜದ ಸಮಸ್ಯೆಗಳಿಗೆ ಪರಿಹಾರ ಒದಗಿಸಿದರು’ ಎಂದು ಅಭಿಪ್ರಾಯಪಟ್ಟರು.
ತಹಶಿಲ್ದಾರ್ ಸುರೇಶ ಅಂಕಲಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ ಕಾಡ್ಲೂರ, ಮುಖಂಡರಾದ ರಾಚನಗೌಡ ಮುದ್ನಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಡಿ ಉತ್ತರಾದೇವಿ ಮಠಪತಿ, ಭೀಮನಗೌಡ ಕ್ಯಾತ್ನಾಳ, ರೆಡ್ಡಿ ಸಮಾಜದ ಕೋಶಾಧ್ಯಕ್ಷ ಮಲ್ಲನಗೌಡ ಹಳಿಮನಿ ಕೌಳೂರ, ಆರ್.ಮಹಾದೇವಪ್ಪ ಅಬ್ಬೆತುಮಕೂರ, ಶಿವಪುತ್ರರೆಡ್ಡಿ ಪಾಟೀಲ ಚಟ್ನಳ್ಳಿ, ಸಿದ್ರಾಮರೆಡ್ಡಿ ತಿಪ್ಪರೆಡ್ಡಿ, ಸಿದ್ರಾಮರೆಡ್ಡಿ ಯಲ್ಹೇರಿ, ಲಿಂಗಾರೆಡ್ಡಿ ಯಡ್ಡಳ್ಳಿ, ರುದ್ರಗೌಡ ಪಾಟೀಲ ಗುರಸುಣಿಗಿ, ಶರಣಗೌಡ ಯಡ್ಡಳ್ಳಿ, ಸೋಮನಾಥರೆಡ್ಡಿ ಯಲ್ಹೇರಿ, ಎ.ವಿಶ್ವನಾಥರೆಡ್ಡಿ, ರಾಜಶೇಖರ ಪಾಟೀಲ, ಅಶೋಕರೆಡ್ಡಿ ಹೊನಗೇರಾ ಉಪಸ್ಥಿತರಿದ್ದರು.
ಗುರುಪ್ರಸಾದ ವೈದ್ಯ ನಿರ್ವಹಿಸಿ, ಶರಣಬಸವ ಯಾಳಗಿ ಪ್ರಾರ್ಥಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.