ADVERTISEMENT

ವಿಶ್ವಾರಾಧ್ಯರ ಜಾತ್ರೆ ಸಂಪನ್ನ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 7:26 IST
Last Updated 1 ಮಾರ್ಚ್ 2026, 7:26 IST
ಯಾದಗಿರಿ ತಾಲ್ಲೂಕಿನ ಅಬ್ಬೆ ತುಮಕೂರಿನಲ್ಲಿ ಈಚೆಗೆ ಜಾತ್ರೆಯ ಅಂಗವಾಗಿ ನಡೆದ ರಥೋತ್ಸವದ ಕಳಸ ಅವರೋಹಣದಲ್ಲಿ ಗಂಗಾಧರ ಶಿವಾಚಾರ್ಯರು, ಕಿರಿಯ ಸ್ವಾಮೀಜಿ ಶಿವಶೇಖರ ಶಿವಾಚಾರ್ಯರು ಉಪಸ್ಥಿತರಿದ್ದರು
ಯಾದಗಿರಿ ತಾಲ್ಲೂಕಿನ ಅಬ್ಬೆ ತುಮಕೂರಿನಲ್ಲಿ ಈಚೆಗೆ ಜಾತ್ರೆಯ ಅಂಗವಾಗಿ ನಡೆದ ರಥೋತ್ಸವದ ಕಳಸ ಅವರೋಹಣದಲ್ಲಿ ಗಂಗಾಧರ ಶಿವಾಚಾರ್ಯರು, ಕಿರಿಯ ಸ್ವಾಮೀಜಿ ಶಿವಶೇಖರ ಶಿವಾಚಾರ್ಯರು ಉಪಸ್ಥಿತರಿದ್ದರು   

ಯಾದಗಿರಿ: ತಾಲ್ಲೂಕಿನ ಅಬ್ಬೆತುಮಕೂರಿನ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವವು ರಥೋತ್ಸವದ ಕಳಸ ಅವರೋಹಣದೊಂದಿಗೆ ಈಚೆಗೆ ಸಂಪನ್ನಗೊಂಡಿತು.

ವಿಶ್ವಾರಾಧ್ಯರ ಕರ್ತೃ ಗದ್ದುಗೆಗೆ ಗೋರಟಾ ಅರ್ಚಕರಿಂದ ಸಂಗೀತ ಸೇವೆಯೊಂದಿಗೆ ಮಹಾ ರುದ್ರಾಭೀಷೇಕ ಜರುಗಿತು. 

ಹಲಗೆ, ಬಾಜಾ ಭಜಂತ್ರಿ, ಡೊಳ್ಳು ಮುಂತಾದ ಮಂಗಲವಾದ್ಯಗಳು ಮೊಳಗಿದವು. ಪೀಠಾಧಿಪತಿ ಗಂಗಾಧರ ಶಿವಾಚಾರ್ಯರು, ಮಠದ ಕಿರಿಯ ಸ್ವಾಮೀಜಿ ಶಿವಶೇಖರ ಶಿವಾಚಾರ್ಯರ ಸಮೇತ ವಿಶ್ವಾರಾಧ್ಯರ ದರ್ಶನವನ್ನು ಪಡೆದು ತೇರಿನ ಮುಂಭಾಗದಲ್ಲಿ ಪೂಜೆ ಸಲ್ಲಿಸಲಾಯಿತು. ಮಹಾ ಮಂಗಳಾರತಿಯ ನಂತರ ಕಳಸವನ್ನು ಅವರೋಹಣ ಮಾಡಲಾಯಿತು.

ADVERTISEMENT

ಈ ವೇಳೆ  ಸುಭಾಶ್ಚಂದ್ರ ಕೌಲಗಿ, ವೆಂಕಟರೆಡ್ಡಿ ಮಾಲಿ ಪಾಟೀಲ, ನರಸಣಗೌಡ ರಾಯಚೂರು ಸೇರಿದಂತೆ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.

ಯಶಸ್ಸಿಗೆ ಸರ್ವರೂ ಕಾರಣಕರ್ತರು‌: ‘ವಿಶ್ವಾರಾಧ್ಯರ ಜಾತ್ರೆಯು ಅತ್ಯಂತ ಯಶಸ್ವಿಯಾಗಿ ಜರಗಲು ಕಾರಣಿಕರ್ತರಾದ ಸರ್ವರಿಗೂ ಶ್ರೇಯಸ್ಸು ಉಂಟಾಗಲಿ’ ಎಂದು ಪೀಠಾಧಿಪತಿ  ಗಂಗಾಧರ ಶಿವಾಚಾರ್ಯ ಹೇಳಿದ್ದಾರೆ.

ಅಸಂಖ್ಯಾತ ಭಕ್ತರು ಸೇರುವ ದೊಡ್ಡ ಜಾತ್ರೆ ಸಾಂಗೋಪಾಗವಾಗಿ ನಡೆಯಲು ಕಾರಣರಾದ ಸಮಸ್ತ ಭಕ್ತ ವೃಂದಕ್ಕೆ ಒಳಿತಾಗಲಿ. ಜನ ಸಂದಣಿಯನ್ನು ಎಸ್‌ಪಿ ಪೃಥ್ವಿಕ್ ಶಂಕರ್ ಮಾರ್ಗದರ್ಶನದಲ್ಲಿ ಪೊಲೀಸ್ ಸಿಬ್ಬಂದಿ ಸಮರ್ಥವಾಗಿ ನಿಯಂತ್ರಿಸಿದ್ದಾರೆ. ಅನೇಕ ಜನ ದಾಸೋಹಿಗಳು ವಿವಿಧ ರೀತಿಯ ದಾಸೋಹ ಕೈಂಕರ್ಯವನ್ನು ಕೈಗೊಂಡಿದ್ದಾರೆ. ನೂರಾರು ಜನ ಸೇವಾ ಧಾರಿಗಳು ಸೇವಾ ಭಾವನೆಯನ್ನು ಮೆರೆದಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.