
ವಡಗೇರಾ: ತಾಲ್ಲೂಕಿನ ಐಕೂರು ಗ್ರಾಮದಲ್ಲಿ ಶುಕ್ರವಾರ ಸಂಜೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯಲ್ಲಿ ಇದ್ದ ಧವಸ ಧಾನ್ಯ, ನಗದು ಹಾಗೂ ಬಂಗಾರದ ಆಭರಣಗಳು ಸುಟ್ಟು ಕರಕಲಾಗಿವೆ.
ತಾಲ್ಲೂಕಿನ ಐಕೂರ ಗ್ರಾಮದ ಮಹೆಬೂಬ ನಗರದ ನಿವಾಸಿ ಮೈನೋದ್ದಿನ್ ಮೈಹೆಬೂಬಸಾಬ್ ಮುಲ್ಲಾರವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿ ಮನೆಯಲ್ಲಿ ಇದ್ದ ಸಂಪೂರ್ಣ ವಸ್ತುಗಳು ಸುಟ್ಟು ಭಸ್ಮವಾಗಿವೆ.
ಈ ಘಟನೆಯಲ್ಲಿ ಇತ್ತೀಚಿಗೆ ಹತ್ತಿ ಮಾರಿ ತಂದು ಮನೆಯಲ್ಲಿ ಇಟ್ಟ ಹಾಗೂ ಮಕ್ಕಳು ಬೆಂಗಳೂರಿನಿಂದ ದುಡಿದು ಕಳುಹಿಸಿದ ಹಣ ಒಟ್ಟು ಸುಮಾರು ₹ 5 ಲಕ್ಷ ನಗದು, 20ಗ್ರಾಂ ಬಂಗಾರ ಹಾಗೂ ದಿನನಿತ್ಯದ ಅಗತ್ಯ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.
ಸುದ್ದಿ ತಿಳಿದ ತಕ್ಷಣ ಶಹಾಪುರದಿಂದ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಶ್ರಮಪಟ್ಟು ಬೆಂಕಿಯನ್ನು ನಂದಿಸಿದರು. ಈ ಘಟನೆಯಲ್ಲಿ ಅದೃಷ್ಟವಶಾತ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ
ಘಟನಾ ಸ್ಥಳಕ್ಕೆ ವಡಗೇರಾ ಪೊಲೀಸ್ ಠಾಣೆಯ ಪಿಎಸ್‌ಐ ಮಹೆಬೂಬ ಅಲಿ ಬೇಟಿ ಕೊಟ್ಟು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.