ADVERTISEMENT

ಯಾದಗಿರಿ: ಹಸಿ ಮೆಣಸಿಕಾಯಿಗೆ ಹೆಚ್ಚಿದ ಬೇಡಿಕೆ: ಸೊಪ್ಪು, ತರಕಾರಿ ದರ ಇಳಿಕೆ

ಬಿ.ಜಿ.ಪ್ರವೀಣಕುಮಾರ
Published 28 ಮಾರ್ಚ್ 2021, 3:44 IST
Last Updated 28 ಮಾರ್ಚ್ 2021, 3:44 IST
ಯಾದಗಿರಿಯ ಮಹಾತ್ಮ ಗಾಂಧಿ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಯುತ್ತಿರುವುದು 
ಯಾದಗಿರಿಯ ಮಹಾತ್ಮ ಗಾಂಧಿ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಯುತ್ತಿರುವುದು    

ಯಾದಗಿರಿ: ನಗರದ ವಿವಿಧ ತರಕಾರಿ ಮಾರುಕಟ್ಟೆಗಳಲ್ಲಿ ಈ ವಾರ ತರಕಾರಿ ದರ ಕಡಿಮೆಯಾಗಿದೆ. ಟೊಮೆಟೊ ಅತೀ ಕಡಿಮೆ ದರದಲ್ಲಿ ಮಾರಾಟವಾಗುತ್ತಿದೆ. ಕೆ.ಜಿ ಲೆಕ್ಕದಲ್ಲಿ ₹15 ಬೆಲೆ ಇದ್ದರೆ, ಒಂದು ದಡಿ (ಎರಡೂವರೆ ಕೆ.ಜಿ) ₹25 ದರ ಇದೆ.

ಭಾನುವಾರ, ಸೋಮವಾರ ಹೋಳಿ ಹುಣ್ಣಿಮೆ ಇದ್ದು, ಹೀಗಾಗಿ ಹೆಚ್ಚು ತರಕಾರಿ ಮಾರುಕಟ್ಟೆಗೆ ಬಂದಿಲ್ಲ. ಇದರಿಂದ ಹಸಿ ಮೆಣಸಿಕಾಯಿಗೆ ಬೆಲೆ ಇದೆ. ಈಗ ಹಬ್ಬದ ಸೀಸನ್‌ ಇರುವುದರಿಂದ ತರಕಾರಿಗಳ ಮಾರಾಟ ಹೆಚ್ಚಾಗಿದೆ ಎನ್ನುವುದು ತರಕಾರಿ ವ್ಯಾಪಾರಿಗಳ ಮಾತಾಗಿದೆ.

‘ಯಾದಗಿರಿ ತರಕಾರಿ ಮಾರುಕಟ್ಟೆಗೆ ಹೆಚ್ಚಾಗಿ ಹಸಿ ಮೆಣಸಿನಕಾಯಿ ಶಹಾಪುರ ತಾಲ್ಲೂಕಿನಿಂದ ಬರುತ್ತದೆ. ಅದರಲ್ಲೂ ಮುಖ್ಯವಾಗಿ ದೋರನಹಳ್ಳಿ ಭಾಗದಿಂದಬರುತ್ತದೆ. ಹಾಜಿಬಾಯಿ ಎನ್ನುವ ಗ್ರಾಮದಿಂದ ಮೆಣಸಿನಕಾಯಿ ಬರುತ್ತದೆ. ಶನಿವಾರ ಅಲ್ಲಿಂದ ತರಕಾರಿ ಬರದೆ ಇರುವ ಕಾರಣದಿಂದ ಮಾರುಕಟ್ಟೆಯಲ್ಲಿ ದರ ಏರುಪೇರಾಗಿದೆ’ ಎನ್ನುತ್ತಾರೆ ತರಕಾರಿ ವ್ಯಾಪಾರಿ ಮಹಮ್ಮದ್ ಜಾಕೀರ್.

ADVERTISEMENT

ತರಕಾರಿ, ಸೊಪ್ಪುಗಳ ಬೆಲೆಯಲ್ಲಿ ಸ್ಥಿರತೆ ಇರುವುದರಿಂದ ಗ್ರಾಹಕರಿಗೆ ಹೊರೆ ಎನಿಸುತ್ತಿಲ್ಲ. ಕೃಷಿಕರು ಹಳ್ಳಿಗಳಿಂದ ಆಟೊಗಳಲ್ಲಿ ತರುತ್ತಿದ್ದಾರೆ. ಇದರಿಂದ ತಕ್ಕ ಬೆಲೆ ಸಿಗುತ್ತಿಲ್ಲ ಎನ್ನುವುದು ರೈತರ ಆರೋಪವಾಗಿದೆ.

ಸೊಪ್ಪುಗಳ ದರ:

ಕೊತ್ತಂಬರಿ ಸೊಪ್ಪು ಬಹಳ ಅಗ್ಗವಾಗಿ ಸಿಗುತ್ತಿದೆ. ದೊಡ್ಡ ಕಟ್ಟು ₹15ಗೆ ಸಿಗುತ್ತಿದೆ.ಇನ್ನುಳಿದಂತೆಎಲ್ಲ ಸೊಪ್ಪುಗಳು ₹5ಕ್ಕೆ ಒಂದು ಕಟ್ಟಿನಂತೆ ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಈರುಳ್ಳಿ ಸೊಪ್ಪು ಕೆ.ಜಿಗೆ ₹40 ಇದೆ. ಸಿಹಿ ಗೆಣಸು ಸ್ಥಳೀಯವಾಗಿ ಲಭ್ಯವಿದ್ದು, ಕೆ.ಜಿಗೆ ₹30 ಇದೆ.

ಇನ್ನುಳಿದಂತೆ ಮೆಂತ್ಯೆ, ಪಾಲಕ್‌, ರಾಜಗಿರಿ, ಪುಂಡಿಪಲ್ಯೆಒಂದು ಕಟ್ಟು₹5ಗೆಸಿಗುತ್ತಿದೆ. ಪುದೀನಾ ಒಂದು ಕಟ್ಟು ₹10 ಇದೆ. ಸಣ್ಣಗಾತ್ರ 4 ನಿಂಬೆ ಹಣ್ಣು₹20, ದೊಡ್ಡ ಗಾತ್ರದು ₹10ಗೆಎರಡುಮಾರಾಟವಾಗುತ್ತಿವೆ.

* ಬಿಸಿಲಿನ ತಾಪದಿಂದ ಕೆಲ ತರಕಾರಿಗಳು ಒಣಗಿ ಹೋಗುತ್ತಿವೆ. ಹೋಳಿ ಹುಣ್ಣಿಮೆ ಇದ್ದುದ್ದರಿಂದ ಹಳ್ಳಿಗಳಿಂದ ಹೆಚ್ಚು ತರಕಾರಿ ಮಾರುಕಟ್ಟೆಗೆ ಬಂದಿಲ್ಲ.

–ಮಹಮ್ಮದ್ ಜಾಕೀರ್, ವ್ಯಾಪಾರಿ

* ತರಕಾರಿ, ಸೊಪ್ಪುಗಳ ದರದಲ್ಲಿ ಹೆಚ್ಚು ಏರಿಕೆಯಾಗಿಲ್ಲ. ಪಾಲಕ್‌, ಕೊತ್ತಂಬರಿ ಸೊಪ್ಪು ಬಹಳ ಸಸ್ತಾ ಆಗಿದೆ. ತರಕಾರಿಯೂ ಹೆಚ್ಚು ಬೆಲೆ ಇಲ್ಲ.

–ಮಹಮ್ಮದ್‌ ಸಿರಾಜುದ್ದೀನ್, ಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.