ಯಾದಗಿರಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕೊರೊನಾ ವೈರಸ್ಗೆ ಸಂಬಂಧಪಟ್ಟಂತೆ ಯಾದಗಿರಿ, ಗುರುಮಠಕಲ್, ಶಹಾಪುರ, ಸುರಪುರ ಹಾಗೂ ಹುಣಸಗಿ ತಾಲ್ಲೂಕುಗಳಲ್ಲಿ ಭಾನುವಾರ 606 ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ 69 ಪಾಸಿಟಿವ್ ಮತ್ತು 537 ನೆಗೆಟಿವ್ ವರದಿ ಬಂದಿವೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾದಗಿರಿ ನಗರದ ಲಕ್ಷ್ಮಿನಗರದಲ್ಲಿ ನಡೆಸಿದ 67 ಪರೀಕ್ಷೆಗಳಲ್ಲಿ ಪೈಕಿ 6 ಪಾಸಿಟಿವ್, 61 ನೆಗೆಟಿವ್ ಬಂದಿವೆ. ಅಜೀಜ್ ಕಾಲೊನಿಯಲ್ಲಿ 45ರಲ್ಲಿ ಪೈಕಿ 7 ಪಾಸಿಟಿವ್, 38 ನೆಗೆಟಿವ್ ಬಂದಿವೆ. ಕೋಲಿವಾಡದಲ್ಲಿ 88ರಲ್ಲಿ 9 ಪಾಸಿಟಿವ್, 79 ನೆಗೆಟಿವ್ ಬಂದಿವೆ. ಗುರುಮಠಕಲ್ನ ಪಂಚಾಯಿತಿಮೊಹಲ್ಲಾದಲ್ಲಿ ಎಲ್ಲ 52 ಟೆಸ್ಟ್ಗಳುನೆಗೆಟಿವ್ ಬಂದಿವೆ.
ಶಹಾಪುರದ ಆನೆಗುಂದಿ ಓಣಿಯಲ್ಲಿ ಎಲ್ಲ 31 ಟೆಸ್ಟ್ಗಳು ನೆಗೆಟಿವ್ ಬಂದಿವೆ. ವಿದ್ಯಾನಗರದಲ್ಲಿ 65ರಲ್ಲಿ 9 ಪಾಸಿಟಿವ್, 56 ನೆಗೆಟಿವ್ ಬಂದಿವೆ. ಆಶ್ರಯ ಕಾಲೊನಿಯಲ್ಲಿ 37ರಲ್ಲಿ 2 ಪಾಸಿಟಿವ್, 35 ನೆಗೆಟಿವ್ ಬಂದಿವೆ.
ಸುರಪುರದ ರಂಗಂಪೇಟನಲ್ಲಿ 89ರಲ್ಲಿ 16 ಪಾಸಿಟಿವ್, 73 ನೆಗೆಟಿವ್ ಬಂದಿವೆ. ದಿವಳಗುಡ್ಡದಲ್ಲಿ 10ರಲ್ಲಿ 1 ಪಾಸಿಟಿವ್, 9 ನೆಗೆಟಿವ್ ಬಂದಿವೆ. ಗೋಗಿಕೇರಾದಲ್ಲಿ 30ರಲ್ಲಿ 12 ಪಾಸಿಟಿವ್, 18 ನೆಗೆಟಿವ್ ಬಂದಿವೆ.
ಹುಣಸಗಿ ತಾಲ್ಲೂಕಿನ ಕೊಡೇಕಲ್ನಲ್ಲಿ 92ರಲ್ಲಿ 7 ಪಾಸಿಟಿವ್, 85 ನೆಗೆಟಿವ್ ಬಂದಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.