ADVERTISEMENT

ಸಿದ್ದಗಂಗಾಶ್ರೀ ಜೀವನ ಚೈತನ್ಯ ಶಕ್ತಿ; ಸಜ್ಜನಶೆಟ್ಟಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 3:50 IST
Last Updated 26 ಜನವರಿ 2022, 3:50 IST
ಸೈದಾಪುರ ಪಟ್ಟಣದ ವಿದ್ಯಾವರ್ಧಕ ಸಂಘದ ವಿವಿಧ ವಿಭಾಗಗಳ ವತಿಯಿಂದ ಡಾ.ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಜರುಗಿತು. ಮುಖ್ಯಶಿಕ್ಷಕ ಲಿಂಗಾರೆಡ್ಡಿ ನಾಯಕ, ಉಪನ್ಯಾಸಕ ಹಂಪಣ್ಣ ಸಜ್ಜನಶೆಟ್ಟಿ ಇದ್ದರು
ಸೈದಾಪುರ ಪಟ್ಟಣದ ವಿದ್ಯಾವರ್ಧಕ ಸಂಘದ ವಿವಿಧ ವಿಭಾಗಗಳ ವತಿಯಿಂದ ಡಾ.ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಜರುಗಿತು. ಮುಖ್ಯಶಿಕ್ಷಕ ಲಿಂಗಾರೆಡ್ಡಿ ನಾಯಕ, ಉಪನ್ಯಾಸಕ ಹಂಪಣ್ಣ ಸಜ್ಜನಶೆಟ್ಟಿ ಇದ್ದರು   

ಸೈದಾಪುರ: ಡಾ.ಶಿವಕುಮಾರ ಸ್ವಾಮೀಜಿಯ ಜೀವನ ಚೈತನ್ಯ ಶಕ್ತಿಯಾಗಿದೆ ಎಂದು ಉಪನ್ಯಾಸಕ ಹಂಪಣ್ಣ ಸಜ್ಜನಶೆಟ್ಟಿ ಹೇಳಿದರು.

ವಿದ್ಯಾವರ್ಧಕ ಸಂಘದ ವಿವಿಧ ವಿಭಾಗಗಳಿಂದ ಆಯೋಜಿಸಿದ ಡಾ. ಶಿವಕುಮಾರ ಸ್ವಾಮೀಜಿ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಖ್ಯಶಿಕ್ಷಕ ಲಿಂಗಾರೆಡ್ಡಿ ನಾಯಕ, ಶಿಕ್ಷರಾದ ಗೂಳಪ್ಪ.ಎಸ್.ಮಲ್ಹಾರ, ವಿಶ್ವನಾಥರೆಡ್ಡಿ ಪಾಟೀಲ ಕಣೇಕಲ, ರಾಜಶೇಖರ ಪಾಟೀಲ, ಅನುರಾಧ, ಕವಿತಾ, ತೋಟೇಂದ್ರ ಇದ್ದರು.

ADVERTISEMENT

ಪದಾಧಿಕಾರಿಗಳ ನೇಮಕ
ಅಚ್ಚೋಲ (ಯರಗೋಳ):
ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಘಟಕದ ಸಭೆ ತಾಲ್ಲೂಕಿನ ಚಾಮನಳ್ಳಿ ಗ್ರಾಮದಲ್ಲಿ ಶನಿವಾರ ಜಿಲ್ಲಾಧ್ಯಕ್ಷ ಶಿವರಾಜ ದಾಸನಕೇರಿ ಅಧ್ಯಕ್ಷತೆಯಲ್ಲಿ ಜರುಗಿತು.

ಪದಾಧಿಕಾರಿಗಳು: ಮೋನಪ್ಪ ಹೊನ್ನಪ್ಪ ತಳಕ (ಗೌರವಾಧ್ಯಕ್ಷ), ಸಾಬಣ್ಣ ಮಲ್ಲಪ್ಪ ಪೂಜಾರಿ (ಅಧ್ಯಕ್ಷ), ಶರಣಪ್ಪ ಬಸಪ್ಪ (ಕಾರ್ಯಾಧ್ಯಕ್ಷ), ಸಾಬಣ್ಣ ಸಾಮುವೆಲ್ ಮತ್ತು ಸಿದ್ದಪ್ಪ ಹೊನ್ನಪ್ಪ ಬನ್ನೆಟಿ (ಉಪಾಧ್ಯಕ್ಷ), ಶಿವಪ್ಪ ನಾಗಪ್ಪ (ಪ್ರಧಾನ ಕಾರ್ಯದರ್ಶಿ), ಸಾಬಣ್ಣ ಸಿದ್ದಪ್ಪ ಯಡ್ಡಳ್ಳಿ (ಸಂಘಟನಾ ಕಾರ್ಯದರ್ಶಿ), ಐಕುಮಾರ ಸಿಮೇನ್ (ಕಾರ್ಯದರ್ಶಿ), ಕಾಶಿನಾಥ ಸಲ್ಮನ್, ಸಾಬರೆಡ್ಡಿ ಸಿದ್ರಾಮಪ್ಪ (ಸಹ ಕಾರ್ಯದರ್ಶಿ), ಸಣ್ಣ ಭೀಮರಾಯ (ಖಜಾಂಚಿ).

ತಾ.ಪಂ ಮಾಜಿ ಸದಸ್ಯ ಹಣಮಂತ ಲಿಂಗೇರಿ, ತಾ.ಪಂ ಅಧ್ಯಕ್ಷ ಹಣಮಂತ ಅಚ್ಚೊಲಾ, ಬಂದಳ್ಳಿ ಗ್ರಾ.ಪಂ ಅಧ್ಯಕ್ಷ ನಾಗರಾಜ ಹಯ್ಯಾಳೋರ್, ಜಿಲ್ಲಾ ಉಪಾಧ್ಯಕ್ಷ ಸಾಬು ಹೋರುಂಚಿ, ಪ್ರ.ಕಾರ್ಯದರ್ಶಿ ಚಂದ್ರಶೇಖರ ಮುಂಡರಗಿ, ಕಾರ್ಯದರ್ಶಿ ಮಲ್ಲು ಬೆಳೆಗೇರಿ, ಗುರುಮಠಕಲ್ ತಾಲ್ಲೂಕು ಅಧ್ಯಕ್ಷ ನಾಗಪ್ಪ ಹೊಸಮನಿ ಇದ್ದರು.

ಕ್ರಿಕೆಟ್ ಟೂರ್ನಿ
ಯಾದಗಿರಿ:
ಕ್ರೀಡಾಪಟುಗಳು ಸೋಲು-ಗೆಲುವನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು ಎಂದು ಕಾಂಗ್ರೆಸ್ ಮುಖಂಡ ಶರಣಪ್ಪಗೌಡ ಮಾಲಿಪಾಟೀಲ ಕೌಳೂರ ಹೇಳಿದರು.

ತಾಲ್ಲೂಕಿನ ಜಿನಕೇರಾ ಗ್ರಾಮದಲ್ಲಿ ಯುವಕರ ಬಳಗ ಈಚೆಗೆ ಆಯೋಜಿಸಿದ್ದ ಗ್ರಾಮೀಣ ಮಟ್ಟದ ಕ್ರಿಕೆಟ್ ಟೂರ್ನಿ ಉದ್ಘಾಟಿಸಿ ಮಾತನಾಡಿದರು.

ಗ್ರಾ.ಪಂ ಅಧ್ಯಕ್ಷೆ ಪಾರ್ವತಮ್ಮ, ಸದಸ್ಯರಾದ ಲಕ್ಷ್ಮಣ ನಾಯಕ, ಸಾಬಣ್ಣ ನಾಟೇಕರ್, ಲಕ್ಷ್ಮಣ, ಮರಲಿಂಗ ಮಾಳಪ್ಪ ನೋರ, ಡಾ.ಆಂಜನೇಯ ಶೆಟ್ಟಗೇರಾ, ರಾಜಪ್ಪ ಠಾಣಗುಂದಿ, ಕಾಶಪ್ಪ ಹೊಸಮನಿ, ಶರಣಪ್ಪ ಬಡಿಗೇರ್, ವೆಂಕಟಪ್ಪ ಇದ್ದರು.

‘ಎಸ್‌ಡಿಎಂಸಿ ಪಾತ್ರ ಮಹತ್ವದ್ದು’

ಹುಣಸಗಿ: ಶಾಲೆಯ ಅಭಿವೃದ್ಧಿಯಲ್ಲಿ ಎಸ್‌ಡಿಎಂಸಿ ಪಾತ್ರ ಪ್ರಮುಖವಾಗಿದ್ದು, ಅಧ್ಯಕ್ಷರು ಸೇರಿದಂತೆ ಎಲ್ಲ ಸದಸ್ಯರು ಕಾಳಜಿ ಅಗತ್ಯ ಎಂದು ಸಂಪನ್ಮೂಲ ವ್ಯಕ್ತಿ ಅಕ್ಕಮಹಾದೇವಿ ದೇಶಮುಖ ಹೇಳಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ ತರ ಬೇತಿಯಲ್ಲಿ ಅವರು ಮಾತನಾಡಿದರು.

ಎಸ್‌ಡಿಎಂಸಿ ಅಧ್ಯಕ್ಷ ವಿರೇಶ ಚಿಂಚೋಳಿ, ಸದಸ್ಯರಾದ ಬಾಬು ರಾಠೋಡ, ದೇವಪ್ಪ ಪೂಜಾರಿ, ವಿಜಯಲಕ್ಷ್ಮಿ ಕುಂಬಾರ, ಯಂಕನಗೌಡ ಅರಕೇರಿ, ಲಲಿತಾ ಮಠ, ಸುಮಂಗಲಾ ನೂಲಿ, ಯಲಗುರೇಶ ಕುಲಕರ್ಣಿ, ಚನ್ನಪ್ಪ ಬಾಗೇವಾಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.