ಯಾದಗಿರಿ: ಉದ್ಯಾನ್ ಏಕ್ಸ್ ಪ್ರೆಸ್ ಮೂಲಕ ಸೋಮವಾರ ರಾತ್ರಿ ನಗರದ ರೈಲು ನಿಲ್ದಾಣಕ್ಕೆ ಆಗಮಿಸಿದ 120 ವಿದ್ಯಾರ್ಥಿ, ವಲಸಿಗ ಕಾರ್ಮಿಕರನ್ನು ತಾಲ್ಲೂಕಿನ ಸೈದಾಪುರದಲ್ಲಿ ಕ್ವಾರಂಟೈನ್ ಮಾಡಲಾಯಿತು.
ರೈಲು ನಿಲ್ದಾಣದಿಂದ 4 ಬಸ್‌ಗಳ ಮೂಲಕ ರಾಣಿ ಕಿತ್ತೂರ ಚನ್ನಮ್ಮ ವಸತಿ ಶಾಲೆಯ ದಿಗ್ಬಂಧನ ಕೇಂದ್ರಕ್ಕೆ ವಲಸಿಗರನ್ನು ಕಳಿಸಿಕೊಡಲಾಯಿತು.
'ರೈಲು ನಿಲ್ದಾಣದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮಾಡಿ ವಲಸಿಗರನ್ನು ಕಳಿಸಿಕೊಡಲಾಯಿತು' ಎಂದು ಯಾದಗಿರಿ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.