ಯರಗೋಳ (ಯಾದಗಿರಿ ಜಿಲ್ಲೆ): ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ಸಿಡಿಲು ಬಡಿದು ಎರಡು ಎತ್ತುಗಳು ಸಾವನ್ನಪ್ಪಿವೆ. ಸುಮಾರು ಒಂದೂವರೆ ಲಕ್ಷ ಮೌಲ್ಯದ ಎತ್ತುಗಳು ಎಂದು ಅಂದಾಜಿಸಲಾಗಿದೆ.
ರೈತ ಹಣಮಂತ ನಾಗಪ್ಪ ಚಿಕ್ಕಬಾನರ ಅವರಿಗೆ ಸೇರಿದ ಎರಡು ಎತ್ತುಗಳು ಕೊಟ್ಟಿಗೆಯಲ್ಲಿ ಸಾವನ್ನಪ್ಪಿವೆ.
ಗ್ರಾಮದ ಮಲಕಪ್ಪನಳ್ಳಿ ರಸ್ತೆಯ ಬಳಿ ಇರುವ ಹೊಲದಲ್ಲಿ ಎತ್ತುಗಳು ಇದ್ದವು.
ಸ್ಥಳಕ್ಕೆ ಪೊಲೀಸ್ ಸಿಬ್ಬಂದಿಗಳಾದ ರಾಜು ಬಾಗೋಡಿ, ಶೇಖ ಹಜರತ್, ಪಶು ಇಲಾಖೆಯ ಮಲ್ಲಿಕಾರ್ಜುನ ಸುಬೇದಾರ್ ಭೇಟಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.