ADVERTISEMENT

ಯಾದಗಿರಿ: ಮೀಟರ್ ಬಡ್ಡಿ ಸಾಲಬಾಧೆ; ನೇಣು ಬಿಗಿದು ಆತ್ಮಹತ್ಯೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2025, 15:39 IST
Last Updated 5 ಫೆಬ್ರುವರಿ 2025, 15:39 IST
<div class="paragraphs"><p>&nbsp;ಆತ್ಮಹತ್ಯೆಗೆ ಯತ್ನ</p></div>

 ಆತ್ಮಹತ್ಯೆಗೆ ಯತ್ನ

   

ಯಾದಗಿರಿ: ಮೀಟರ್ ಬಡ್ಡಿ ಸಾಲಬಾಧೆ ತಾಳದೆ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ‌.

ನಗರದ ವಿವೇಕಾನಂದ ನಗರ ನಿವಾಸಿ ಅಂಜು ಪೂಜಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.‌

ADVERTISEMENT

ಕೈಗಡವಾಗಿ ಸುಮಾರು ₹10 ಲಕ್ಷ ಸಾಲ ಮಾಡಿರುವುದರಿಂದ ಸಾಲ ಕೊಟ್ಟವರು ಮನ ಬಂದಂತೆ ನಿಂದಿಸಿದ್ದಾರೆ. ಇದರಿಂದ ಮನನೊಂದ ಪೂಜಾರಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನು ನೋಡಿದ ಮನೆಯವರು ಚಿರಾಡಿದ್ದರಿಂದ ಸ್ನೇಹಿತರು ಬಂದು ರಕ್ಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

'ನನಗೆ ಜೀವದ ಭಯ ಇದೆ. ಸಾಲ ಕೊಟ್ಟವರು ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಇದರಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದೇನೆ‌. ನನಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.