ಯಾದಗಿರಿ: ತರಕಾರಿ ಮತ್ತು ಸೊಪ್ಪುಗಳ ದರ ತುಸು ಇಳಿಕೆಯಾಗಿದೆ. ಈ ಬಾರಿ ಹಸಿ ಶುಂಠಿ, ಬೆಳ್ಳುಳ್ಳಿ ಬೆಲೆ ಗ್ರಾಹಕರಿಗೆ ಎಟುಕುವಂತೆ ಆಗಿದೆ. ಹಸಿ ಶುಂಠಿ ದರ ₹180ರಿಂದ ₹200, ಬೆಳ್ಳುಳ್ಳಿ ₹240 ರಿಂದ ₹260 ಆಗಿದೆ.
ಹಸಿ ಬಟಾಣಿ, ಈರುಳ್ಳಿ ಸೊಪ್ಪು ಕೆ.ಜಿಗೆ ತಲಾ ₹60 ದರವಿದ್ದು, ಕರಿಬೇವು ₹50–60ಗೆ ಒಂದು ಕೆ.ಜಿ ಬೆಲೆ ಇದೆ.
ಬದನೆಕಾಯಿ ಅಗ್ಗ: 10 ಕೆ.ಜಿಯ ಒಂದು ಟ್ರೇ ಬದನೆಕಾಯಿ ₹250ಕ್ಕೆ ಮಾರಾಟವಾಗುತ್ತಿದೆ. ಮಾರುಕಟ್ಟೆಗೆ ಬದನೆಕಾಯಿ ಆವಕ ಜಾಸ್ತಿ ಆಗಿದ್ದು, ಇದರಿಂದ ಬೆಲೆ ಇಳಿಕೆಯಾಗಿದೆ ಎಂದು ವ್ಯಾಪಾರಿಗಳು ಹೇಳುವ ಮಾತಾಗಿದೆ. ರಾಯಚೂರು, ಕಲಬುರಗಿ ಸೇರಿದಂತೆ ಸ್ಥಳೀಯವಾಗಿಯೂ ಬದನೆಕಾಯಿ ಆವಕವಾಗಿದ್ದರಿಂದ ಬೆಲೆಯಲ್ಲಿ ಕಳೆದ ತಿಂಗಳಿಗಿಂತ ₹50ರಿಂದ ₹60 ದರ ಇಳಿಕೆಯಾಗಿದೆ.
ಸೊಪ್ಪುಗಳ ದರ: ಸೊಪ್ಪುಗಳ ದರ ಈ ಬಾರಿ ತುಸು ಇಳಿಕೆಯಾಗಿದೆ. ಪಾಲಕ್, ಪುಂಡಿಪಲ್ಯೆ, ರಾಜಗಿರಿ ಸೊಪ್ಪು ಚಿಲ್ಲರೆ ಮತ್ತು ಸಗಟು ದರದಲ್ಲಿ ವ್ಯಾತ್ಯಾಸವಾಗಿದೆ. ₹10ಗೆ 1 ಕಟ್ಟು, ₹20ಗೆ ಮೂರು ಕಟ್ಟು ಮಾರಾಟ ಮಾಡಲಾಗುತ್ತಿದೆ.
ಕೊತ್ತಂಬರಿ, ಪುದೀನಾ ಸೊಪ್ಪು ₹15–₹20 ಒಂದು ದೊಡ್ಡ ಕಟ್ಟು ಮಾರಾಟ ಮಾಡಲಾಗಿದೆ. ಸಬ್ಬಸಗಿ ದೊಡ್ಡ ಕಟ್ಟು ₹15ರಿಂದ ₹20ಗೆ ಒಂದು ಮಾರಾಟ ಮಾಡಲಾಗುತ್ತಿದೆ.
ಒಂದು ತಿಂಗಳ ಹಿಂದೆ ತರಕಾರಿ ದರ ಅಧಿಕವಾಗಿದ್ದು ಈಗ ದರದಲ್ಲಿ ವ್ಯತ್ಯಾಸವಾಗಿದೆ. ಸದ್ಯಕ್ಕಂತೂ ಕೆಲ ತರಕಾರಿಗಳು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿವೆ
-ಮಲ್ಲಾರೆಡ್ಡಿ ಖಾನಾಪುರ ಗ್ರಾಹಕ
ಈ ತಿಂಗಳಲ್ಲಿ ತರಕಾರಿ ಸೊಪ್ಪುಗಳ ದರ ಸ್ವಲ್ಪಮಟ್ಟಿಗೆ ಇಳಿಕೆಯಾಗಿದೆ. ಅದರಲ್ಲೂ ಬದನೆಕಾಯಿ ಬೆಲೆ ತೀವ್ರ ಕುಸಿದಿದೆ
-ಮಹಾದೇವಪ್ಪ ಶೆಟ್ಟಗೇರಾ ತರಕಾರಿ ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.