ADVERTISEMENT

ಯಾದಗಿರಿ | ಮದುವೆ ಆಮಿಷ: ಬಾಲಕಿ ಮೇಲೆ ಅತ್ಯಾಚಾರ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 23:30 IST
Last Updated 28 ಅಕ್ಟೋಬರ್ 2025, 23:30 IST
<div class="paragraphs"><p><em>ಪೋಕ್ಸೊ</em></p></div>

ಪೋಕ್ಸೊ

   

(ಪ್ರಾತಿನಿಧಿಕ ಚಿತ್ರ)

ಯಾದಗಿರಿ: 18 ವರ್ಷ ತುಂಬಿದ ಬಳಿಕ ಮದುವೆ ಆಗುವುದಾಗಿ ನಂಬಿಸಿ 13 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜ್ಯನ್ಯ ಎಸಗಿದ್ದ ಆರೋಪದಡಿ ಬಾಲಕಿ ಸಂಬಂಧಿ ವಿರುದ್ಧ ಪ್ರಕರಣ ದಾಖಲಾಗಿದೆ.

ADVERTISEMENT

ಕೊಡೆಕಲ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ. ಬಾಲಕಿ ತಾಯಿ ಗಂಡನಿಂದ ದೂರವಿದ್ದು ದುಡಿಯಲು ಮಗನೊಂದಿಗೆ ಮುಂಬೈಗೆ ಹೋಗಿದ್ದರು. ಬಾಲಕಿಗೆ ಮನೆಯಲ್ಲಿ ಆಶ್ರಯ ನೀಡಿದ್ದ ಆರೋಪಿ ವಯಸ್ಕಳಾದ ಮದುವೆ ಆಗುವುದಾಗಿ ನಂಬಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 

‘ಸಂತ್ರಸ್ತೆ ತಾಯಿ ದಸರಾ ಹಬ್ಬಕ್ಕೆ ಗ್ರಾಮಕ್ಕೆ ಬಂದಿದ್ದರು. ಆಗ, ಬಾಲಕಿಯನ್ನು ಮನೆಯಿಂದ ಕಳುಹಿಸಿದ್ದ ಆರೋಪಿ ಮದುವೆ ಆಗುವುದಿಲ್ಲ ಎಂದು ಹೇಳಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.