ADVERTISEMENT

ಯಾದಗಿರಿ: ದೆಹಲಿ ನಿಜಾಮುದ್ದೀನ್ ಮಸೀದಿಗೆ ತೆರಳಿದ್ದ ಜಿಲ್ಲೆಯ ಐವರಿಗೆ ಕ್ವಾರಂಟೈನ್

ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳಿಲ್ಲ: ಡಿಎಚ್ಒ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 16:09 IST
Last Updated 1 ಏಪ್ರಿಲ್ 2020, 16:09 IST
ಎಂ.ಎಸ್‌.ಪಾಟೀಲ, ಡಿಎಚ್‌ಒ
ಎಂ.ಎಸ್‌.ಪಾಟೀಲ, ಡಿಎಚ್‌ಒ   

ಯಾದಗಿರಿ: ‘ಜಿಲ್ಲೆಯ ಐವರು ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿರುವ ಮಸೀದಿಗೆ ಮಾರ್ಚ್ 13ರಂದು ತೆರಳಿದ್ದರು. ಮಾರ್ಚ್ 17 ಮತ್ತು 19ರಂದು ಮರಳಿ ಬಂದಿದ್ದಾರೆ. ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಎಂ.ಎಸ್.ಪಾಟೀಲ ತಿಳಿಸಿದ್ದಾರೆ.

‘ಯಾದಗಿರಿಯ ಇಬ್ಬರು, ಸುರಪುರದ ಇಬ್ಬರು, ಶಹಾಪುರದ ಒಬ್ಬರು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಿಲ್ಲೆಗೆ ಹಿಂತಿರುಗಿ ಬಂದಿದ್ದಾರೆ. ಅವರನ್ನು ಗುರುಮಠಕಲ್‌ ತಾಲ್ಲೂಕಿನ ಅರಕೇರಾ (ಕೆ) ಗ್ರಾಮದಲ್ಲಿ ತೆಗೆದಿರುವ ಕ್ವಾರಂಟೈನ್‌ನಲ್ಲಿ ನಿಗಾ ಇರಿಸಿ ಎರಡು ಬಾರಿ ವೈದ್ಯಕೀಯ ಪರೀಕ್ಷೆ ಮಾಡಲಾಗುತ್ತಿದೆ. ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ’ ಎಂದು ತಿಳಿಸಿದರು.

ADVERTISEMENT

‘ಮಾರ್ಚ್‌ 13 ರಂದು ದೆಹಲಿಗೆ ತೆರಳಿ ಸಭೆಯಲ್ಲಿ ಭಾಗಿಯಾಗಿದ್ದಾರೆ. ಮೂವರು ಇದೇ 17 ರಂದು, ಇನ್ನಿಬ್ಬರು 19ರಂದು ‌ಜಿಲ್ಲೆಗೆ ವಾಪಸ್‌ ಆಗಮಿಸಿದ್ದಾರೆ. 5 ಜನರ ಮೇಲೆ ಆರೋಗ್ಯ ಅಧಿಕಾರಿಗಳು ನಿಗಾ ಇರಿಸಿ ಗುರುವಾರ ಸ್ಯಾಂಪಲ್ ಮಾದರಿ ತೆಗೆದು ಲ್ಯಾಬಿಗೆ ಕಳಿಸಲಾಗುವುದು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.