ADVERTISEMENT

ಯಾದಗಿರಿ: ಜಿಲ್ಲೆಯಾದ್ಯಂತ ಗ್ರಾಮೀಣ ಬ್ಯಾಂಕ್ ನೌಕರರ ಮುಷ್ಕರ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 6:34 IST
Last Updated 28 ಜನವರಿ 2026, 6:34 IST
ಯಾದಗಿರಿ ನಗರದ ಹೊಸಳ್ಳಿ ಕ್ರಾಸ್ ಹತ್ತಿರದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಎದಿರುಗಡೆ ಮಂಗಳವಾರ ಬ್ಯಾಂಕ್ ನೌಕರರು ಮುಷ್ಕರ ನಡೆಸಿದರು
ಯಾದಗಿರಿ ನಗರದ ಹೊಸಳ್ಳಿ ಕ್ರಾಸ್ ಹತ್ತಿರದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಎದಿರುಗಡೆ ಮಂಗಳವಾರ ಬ್ಯಾಂಕ್ ನೌಕರರು ಮುಷ್ಕರ ನಡೆಸಿದರು   

ಯಾದಗಿರಿ: ದೇಶಾದ್ಯಂತ ಬ್ಯಾಂಕ್‌ಗಳ ಮುಷ್ಕರ ಹಾಗೂ ಕೆಜಿಬಿ ಒಕ್ಕೂಟಗಳ ಜಂಟಿ ವೇದಿಕೆಯಿಂದ ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಂಗಳವಾರ ಬ್ಯಾಂಕ್ ನೌಕರರು ಹಾಗೂ ಸಿಬ್ಬಂದಿ ಮುಷ್ಕರ ನಡೆಸಿದರು.

ಬ್ಯಾಂಕ್‌ಗಳಿಗೆ ವಿವಿಧ ಗ್ರಾಮಗಳಿಂದ ಬಂದಿದ್ದ ಜನತೆ ಖಾಲಿ ಕೈಯಲ್ಲಿ ಮನೆಗಳಿಗೆ ಹಿಂದಿರುಗಿದ್ದು ಕಂಡು ಬಂದಿತು.

ಬ್ಯಾಂಕ್ ನೌಕರರ ಮುಷ್ಕರದಿಂದಾಗಿ ಹಲವು ಕೆಲಸಗಳಿಗೆಂದು ಬ್ಯಾಂಕ್ ಹತ್ತಿರ ಬಂದವರಿಗೆ ಬ್ಯಾಂಕ್ ಗಳ ‘ಮುಚ್ಚಿದ ಬಾಗಿಲು’ ನಿರಾಸೆ ಮೂಡಿಸುವ ಜತೆಗೆ ಚಿಂತೆಗೀಡು ಮಾಡಿದೆ ಎಂದು ಗ್ರಾಹಕರು ಅವಲತ್ತುಕೊಂಡರು.

ADVERTISEMENT

ಹಲವು ದಿನಗಳಿಂದ ಮನವಿ ಮಾಡುತ್ತಿದ್ದೇವೆ. ಈಗ ಪ್ರತಿಭಟನೆ ನಡೆಸುತ್ತಿದ್ದು, ನಮ್ಮ ಪ್ರಮುಖ ಬೇಡಿಕೆಯಾದ ವಾರದ 5 ದಿನಗಳು ಮಾತ್ರ ಬ್ಯಾಂಕ್‌ ಕಾರ್ಯನಿರ್ವಹಿಸುವ ನೀತಿಯನ್ನು ತಕ್ಷಣ ಜಾರಿಗೊಳಿಸಬೇಕು. ಜತೆಗೆ ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಆಗ್ರಹಿಸಿದರು.

ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಸಂಜೀವಕುಮಾರ ರಾವೂರ, ಎ.ಜಿ. ಎಸ್.ಸೂರ್ಯಕಾಂತ ಶಿವಪುರ, ಶಿವಕಾಂತ ಬಿರಾದಾರ, ಸುಭಾಶ್ಚಂದ್ರ, ವರುಣಕುಮಾರ, ಶಶಿಕಾಂತ, ಅಶೋಕಕುಮಾರ ಸಾಹು, ಷಣ್ಮುಖ ದುಂಪಲ, ವಿಶ್ವನಾಥ ಗಣಾಚಾರಿ, ಜಗದೀಶರೆಡ್ಡಿ, ಶ್ರೀನಾಥ, ರಮೇಶ, ಸುರೇಶ, ಹರೀಶ, ನೌಕರರ ಸಂಘದ ಪದಾಧಿಕಾರಿಗಳಾದ ಪ್ರಶಾಂತ, ನರಸಿಂಹರೆಡ್ಡಿ, ಎಸ್ತರಮ್ಮ, ಅಂಬೇಡ್ಕರ್, ಬಾಲದಂಡಪ್ಪ, ಸಿದ್ದಣ್ಣ, ಮಂಜುನಾಥ, ಸೋಫಿಸಾಬ್, ಮಲ್ಲಿಕಾರ್ಜುನ ಇನ್ನಿತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.