ಯಾದಗಿರಿ: ವಿದ್ಯಾರ್ಥಿನಿಯ ಶಾಲಾ ದಾಖಲಾತಿ ಜಾತಿ ಕಾಲಂ ತಿದ್ದಿದ್ದ ಆರೋಪದಡಿ ಸುರಪುರ ತಾಲ್ಲೂಕಿನ ಕರಡಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಭಾರ ಮುಖ್ಯ ಶಿಕ್ಷಕ ಮನೋಹರ ಪತ್ತಾರ ಅವರನ್ನು ಡಿಡಿಪಿಐ ಅಮಾನತುಗೊಳಿಸಿದ್ದಾರೆ.
ವಿದ್ಯಾರ್ಥಿನಿ ಪೋಷಕರಿಂದ ಹಣ ಪಡೆದ ಮನೋಹರ, ಜಾತಿ ಕಾಲಂ ವೈಟ್‌ನರ್ ಹಚ್ಚಿದ್ದು, ಮೂಲಜಾತಿ ಬದಲಿಗೆ ‘ತಳವಾರ’ ಎಂದು ಬರೆದಿದ್ದರು ಎಂದು ದೂರು ದಾಖಲಾಗಿತ್ತು.
ಈ ಬಗ್ಗೆ ಸುರಪುರ ಬಿಇಒ ಅವರ ವರದಿ ಆಧರಿಸಿ ಕ್ರಮವಹಿಸಲಾಗಿದೆ ಎಂದು ಡಿಡಿಪಿಐ ಚನ್ನಬಸಪ್ಪ ಮುಧೋಳ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.