
ಪ್ರಜಾವಾಣಿ ವಾರ್ತೆ
ವಂಚನೆ
ಯಾದಗಿರಿ: ಹುಣಸಗಿ ತಾಲ್ಲೂಕಿನ 34 ರೈತರಿಂದ 10,603 ಭತ್ತದ ಮೂಟೆಗಳನ್ನು ಖರೀದಿಸಿ ₹1.34 ಕೋಟಿ ಕೊಡದೆ ವಂಚಿಸಿದ ಆರೋಪದಡಿ ಐವರ ವಿರುದ್ಧ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈತ ಪ್ರಕಾಶ ಸಣ್ಣ ಭೀಮಪ್ಪ ನೀಡಿದ ದೂರಿನ ಅನ್ವಯ ಕನ್ನೆಳ್ಳಿ ಕ್ಯಾಂಪ್‌ನ ಶ್ರೀನಿವಾಸರೆಡ್ಡಿ, ಪ್ರಸಾದ್, ಟಿ.ಸಿ.ಕೊಂಡಯ್ಯ, ತ್ರಿಮೂರ್ತಿ ಹಾಗೂ ಕರಡಕಲ್ಲ ಕ್ಯಾಂಪ್‌ನ ಪ್ರೇಮಕುಮಾರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಐವರು ವ್ಯಾಪಾರಿಗಳು ಕೆಲ ವರ್ಷಗಳಿಂದ ಪಾಲುದಾರಿಕೆಯಲ್ಲಿ ಭತ್ತದ ವ್ಯಾಪಾರ ಮಾಡುತ್ತಿದ್ದರು. ಬೈಚಬಾಳ ಮತ್ತು ಕರಡಕಲ್ಲ ಗ್ರಾಮಗಳ 34 ರೈತರು 75 ಕೆ.ಜಿ. ತೂಕದ 10,603 ಮೂಟೆಗಳನ್ನು ಇವರಿಗೆ ಮಾರಿದ್ದರು. ₹1.73 ಕೋಟಿ ಪೈಕಿ ₹39.50 ಲಕ್ಷ ಮಾತ್ರ ಕೊಟ್ಟು ಭತ್ತ ಒಯ್ದಿದ್ದರು’ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.