ADVERTISEMENT

ಯರಗೋಳ: ಜಿಟಿ ಜಿಟಿ ಮಳೆ, ಕೆರೆಯಲ್ಲಿ ನೀರು ಸಂಗ್ರಹ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 13:17 IST
Last Updated 15 ಜುಲೈ 2021, 13:17 IST
ಯರಗೋಳ ಗ್ರಾಮದ ದೊಡ್ಡ ಕೆರೆಯಲ್ಲಿ ನೀರು ಸಂಗ್ರಹವಾಗಿರುವುದು
ಯರಗೋಳ ಗ್ರಾಮದ ದೊಡ್ಡ ಕೆರೆಯಲ್ಲಿ ನೀರು ಸಂಗ್ರಹವಾಗಿರುವುದು   

ಯರಗೋಳ: ಸುತ್ತಲಿನ ಹಳ್ಳಿಗಳಲ್ಲಿ ಗುರುವಾರ ಬೆಳಿಗ್ಗೆ ಜಿಟಿ ಜಿಟಿ ಮಳೆಯಾಯಿತು.

ಮುದ್ನಾಳ, ಠಾಣಗುಂದಿ, ಬೊಮ್ಮಚಟ್ನಳ್ಳಿ, ಮಲಕಪ್ಪನಳ್ಳಿ, ವಡ್ನಳ್ಳಿ, ಎಸ್.ಹೊಸಳ್ಳಿ, ಮೋಟ್ನಳ್ಳಿ, ಕೋಟಗೇರಾ, ಚಿಂತಕುಂಟ, ಹೆಡಗಿಮದ್ರ, ಹೊನಗೇರಾ, ಹತ್ತಿ ಕುಣಿ, ಸಮಣಪುರ, ಬಂದಳ್ಳಿ, ಯಡ್ಡಳ್ಳಿ, ಬೆಳಗೇರಾ, ಖಾನಳ್ಳಿ, ಅರಿಕೇರಾ .ಬಿ, ಬಸವಂತಪುರ, ಕ್ಯಾಸಪನಳ್ಳಿ, ಹೋರುಣಚ, ಅಚ್ಚೋಲ, ಗುಲಗುಂದಿ, ಕಂಚಗಾರ ಹಳ್ಳಿ, ಅಬ್ಬೆತುಮಕೂರು, ಬಾಚವಾರ ಹಾಗೂ ಕಟ್ಟಿಗೆ ಶಾಹಾಪುರ ಗ್ರಾಮಗಳಲ್ಲಿ ಮಳೆಯಾಗಿದೆ.

ಹೆಸರು, ತೊಗರಿ, ಹತ್ತಿ ಬೆಳೆಗಳಿಗೆ ಆಸರೆಯಾಗಿದೆ. ಭತ್ತ ನಾಟಿಯು ನಡೆಯುತ್ತಿದೆ. ಕೆರೆ, ಹಳ್ಳ, ಬಾವಿ, ಕೊಳವೆ ಬಾವಿಗಳಲ್ಲಿಯು ನೀರು ಸಂಗ್ರಹವಾಗುತ್ತಿದೆ. ಮಳೆಯಿಂದಾಗಿ ಹಲವು ಗ್ರಾಮದ ರಸ್ತೆಗಳು ಕೆಸರು ಗದ್ದೆಯಂತಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.