ADVERTISEMENT

ಎರಡು ವರ್ಷ ಯಡಿಯೂರಪ್ಪ ಅವರೇ ಸಿಎಂ: ಆರ್‌.ಶಂಕರ್‌

​ಪ್ರಜಾವಾಣಿ ವಾರ್ತೆ
Published 28 ಮೇ 2021, 16:34 IST
Last Updated 28 ಮೇ 2021, 16:34 IST
ಆರ್.ಶಂಕರ್‌
ಆರ್.ಶಂಕರ್‌   

ಯಾದಗಿರಿ: ಉಳಿದ ಎರಡು ವರ್ಷಗಳ ಕಾಲ ಬಿ.ಎಸ್‌.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಬಿಜೆಪಿಯಲ್ಲಿ ಯಾವುದೇ ಗುಂಪುಗಳು ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಶಂಕರ್‌ ಹೇಳಿದರು.

ನಗರದ ಎಪಿಎಂಸಿ ಆವರಣದಲ್ಲಿ ಸಿಬ್ಬಂದಿಗೆ ಲಸಿಕೆಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಗೆ ಹೋದ ಕೂಡಲೇ ನಾಯಕತ್ವ ಬದಲಾದರೆ ದಿನಕ್ಕೊಬ್ಬರು ಸಿಎಂ ಆಗ್ಬೇಕಾಗುತ್ತದೆ. ಬಿಜೆಪಿಯಲ್ಲಿ ಯಾವುದೇ ಗುಂಪುಗಳು ಇಲ್ಲ. ಮೂರು ಗುಂಪುಗಳ ಸರ್ಕಾರ ಇಲ್ಲ. ನಾವು ಒಂದೇ ವೇದಿಕೆಯಲ್ಲಿ ಒಂದೆ ಪಕ್ಷದ ಅಡಿಯಲ್ಲಿದ್ದೇವೆ. ಬಿಜೆಪಿಯಿಂದ ಎಲ್ಲರೂ ಶಾಸಕರು ಮತ್ತು ಮಂತ್ರಿಗಳು ಆಗಿದ್ದೇವೆ. ಮೂರು ಗುಂಪು ಇಲ್ಲ ಮೂವತ್ತಾರು ಗುಂಪು ಇಲ್ಲ. ಬಿಜೆಪಿ ಒಂದೇ ಗುಂಪು ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್‌ ಬಗ್ಗೆ ಸಚಿವ ಶಂಕರ್ ಪ್ರತಿಕ್ರಿಯೆ ನೀಡಿದರು.

ನಾನು ಸಚಿವನಾಗಿ ಐದು ತಿಂಗಳು ಆಗಿದೆ. ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರು ಯಾವುದ್ದರಲ್ಲೂ ಕೈ ಹಾಕಿಲ್ಲ. ಯೋಗೇಶ್ವರ್‌ ಅವರು ನಿನ್ನೆ ನನ್ನ ಪಕ್ಕದಲ್ಲೇ ಇದ್ದರು. ಅವರಲ್ಲಿ ಆ ತರಹ ಭಾವನೆಗಳು ಕಂಡು ಬಂದಿಲ್ಲ. ಆ ತರಹದ ಸುಳಿವೂ ಕೊಟ್ಟಿಲ್ಲ. ನಾಯಕತ್ವ ಬದಲಾವಣೆಯ ಸುಳಿವು ಇಲ್ಲ. ಇದು ಸುಮ್ಮನೆ ಪ್ರಚಾರ ಆಗಿದೆ. ಈಗಾಗಲೇ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ. ಮುಂದಿನ ಸಾರ್ವತ್ರಿಕ ಚುನಾವಣೆಯೂ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತದೆ. ಇಂಥ ಹೇಳಿಕೆಗಳಿಗೆ ವೈಯಕ್ತಿಕವಾಗಿ ಬೆಲೆ ಕೊಡುವ ಅಗತ್ಯ ಇಲ್ಲ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.