ADVERTISEMENT

ರೈಲ್ವೆಯಲ್ಲಿ 5,696 ಸಹಾಯಕ ಲೊಕೊ ಪೈಲಟ್‌ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ

ರೈಲ್ವೆ ಮಂಡಳಿಗಳಿಂದ ನೇಮಕಾತಿ ಪ್ರಕ್ರಿಯೆ ಆರಂಭ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಜನವರಿ 2024, 11:04 IST
Last Updated 20 ಜನವರಿ 2024, 11:04 IST
<div class="paragraphs"><p>ರೈಲು</p></div>

ರೈಲು

   

ಬೆಂಗಳೂರು: ರೈಲ್ವೆ ಇಲಾಖೆಯ ‘ರೈಲ್ವೆ ನೇಮಕಾತಿ ಮಂಡಳಿಗಳಿಂದ‘(RRBs) 5,696 ಸಹಾಯಕ ಲೊಕೊ ಪೈಲಟ್‌ಗಳ (ALP) ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಪುರುಷ, ಮಹಿಳೆ, ಲಿಂಗತ್ವ ಅಲ್ಪಸಂಖ್ಯಾತರು ಅರ್ಜಿ ಸಲ್ಲಿಸಬಹುದು.

ಇಂದಿನಿಂದ (ಜನವರಿ 20) ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಫೆಬ್ರುವರಿ 19 ಕಡೆಯ ದಿನ.

ADVERTISEMENT

ಮೆಟ್ರಿಕುಲೇಷನ್ (ಎಸ್‌ಎಸ್‌ಎಲ್‌ಸಿ) ಜೊತೆಗೆ ಐಟಿಐ ಮಾಡಿದವರು ಅಥವಾ ಮೆಟ್ರಿಕುಲೇಷನ್ ಜೊತೆಗೆ ಡಿಪ್ಲೊಮಾ ಮಾಡಿದವರು ಅರ್ಜಿ ಸಲ್ಲಿಸಲು ಅರ್ಹ. ಆರಂಭಿಕ ವೇತನ ₹19,900.

18 ರಿಂದ 30 ವರ್ಷ ವಯೋಮಾನದವರು ಅರ್ಜಿ ಸಲ್ಲಿಸಲು ಅರ್ಹರು. ಎಸ್‌.ಸಿ/ಎಸ್‌ಟಿ ಅವರಿಗೆ 5 ವರ್ಷ ಮತ್ತು ಒಬಿಸಿ ಅವರಿಗೆ 3 ವರ್ಷ ವಯೋಮಾನದಲ್ಲಿ ಸಡಿಲಿಕೆ ಇದೆ. ನಿವೃತ್ತ ಸೈನಿಕರಿಗೂ ಸಡಿಲಿಕೆ ಇದೆ.

ಅರ್ಜಿ ಸಲ್ಲಿಸಿದವರಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ನಡೆಯಲಿದ್ದು, ದೈಹಿಕ ಅರ್ಹತೆ ಜೊತೆ ವೈದ್ಯಕೀಯ ಪರೀಕ್ಷೆ ಇರಲಿದೆ.

ಈ ನೇಮಕಾತಿಯು 21 ರೈಲ್ವೆ ನೇಮಕಾತಿ ಮಂಡಳಿಗಳಿಂದ ನಡೆಯುತ್ತಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ವ್ಯಾಪ್ತಿಯ ಮಂಡಳಿಯ ವೆಬ್‌ಸೈಟ್‌ಗಳಿಗೆ ಹೋಗಿ (ಬೆಂಗಳೂರು– www.rrbbnc.gov.in) ಹುದ್ದೆಗಳ ವರ್ಗೀಕರಣ, ಸಂಪೂರ್ಣ ಅಧಿಸೂಚನೆ ನೋಡಿಕೊಂಡು ಅರ್ಜಿ ಸಲ್ಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.