ಸರ್ಕಾರಿ ಉದ್ಯೋಗ ಪಡೆಯಬೇಕು ಎಂಬುವವರಿಗೆ ಭಾರತೀಯ ರೈಲ್ವೆ ಇಲಾಖೆ ಸುವರ್ಣಾವಕಾಶ ನೀಡಿದೆ. ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 8850 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಪದವಿ ಹಾಗೂ ಪಿಯುಸಿ ಮುಗಿಸಿದವರು ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳೇನು? ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿ ತಿಳಿಯೋಣ.
ಅರ್ಜಿ ಸಲ್ಲಿಸುವ ದಿನಾಂಕ:
ಪದವೀಧರ ಅಭ್ಯರ್ಥಿಗಳು ನವೆಂಬರ್ 20ರೊಳಗೆ ಅರ್ಜಿ ಸಲ್ಲಿಸಬೇಕು.
ಪಿಯುಸಿ ಅಭ್ಯರ್ಥಿಗಳು ನವೆಂಬರ್ 27ರೊಳಗೆ ಅರ್ಜಿ ಸಲ್ಲಿಸಬೇಕು.
ಹುದ್ದೆಗಳು ವಿವರ:
ಒಟ್ಟು ಹುದ್ದೆಗಳು – 8850
ಪದವೀಧರ ಅಭ್ಯರ್ಥಿಗಳಿಗೆ – 5817
ಪದವಿಪೂರ್ವ ಅಭ್ಯರ್ಥಿಗಳಿಗೆ – 3058
ವೇತನ:
ಸ್ಟೇಷನ್ ಮಾಸ್ಟರ್ ಹಾಗೂ ಮುಖ್ಯ ವಾಣಿಜ್ಯ ಮೇಲ್ವಿಚಾರಕ ಹುದ್ದೆಗಳಿಗೆ – ₹35,400 ಸಿಗಲಿದೆ.
ಹಿರಿಯ ಗುಮಾಸ್ತ ಕಮ್ ಟೈಪಿಸ್ಟ್ ಹುದ್ದೆಗೆ – ₹29,200 ಸಿಗಲಿದೆ.
ಸಂಚಾರ ಸಹಾಯಕ ಹುದ್ದೆಗೆ – ₹25,500 ಸಿಗಲಿದೆ.
ವಾಣಿಜ್ಯ ಮತ್ತು ಟಿಕೆಟ್ ಗುಮಾಸ್ತ ಹುದ್ದೆಗೆ – ₹21,700 ಸಿಗಲಿದೆ.
ಕಿರಿಯ ಗುಮಾಸ್ತ ಕಮ್ ಟೈಪಿಸ್ಟ್ ಹುದ್ದೆಗೆ – ₹19,900 ಸಿಗಲಿದೆ.
ವಯೋಮಿತಿ :
ಪದವೀಧರ ಹುದ್ದೆಗಳಿಗೆ 18 ರಿಂದ 33 ವರ್ಷ
ಪಿಯುಸಿ ಹುದ್ದೆಗಳಿಗೆ 18 ರಿಂದ 30 ವರ್ಷ
ಮೀಸಲು ವರ್ಗಕ್ಕೆ ವಯೋಮಿತಿಯ ಸಡಿಲಿಕೆಯನ್ನು ಕಲ್ಪಿಸಲಾಗಿದೆ.
ಅರ್ಜಿ ಶುಲ್ಕ:
ಓಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ₹500
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಮಹಿಳಾ, ದಿವ್ಯಾಂಗ ಹಾಗೂ ಮಾಜಿ ಸೈನಿಕರಿಗೆ ಅರ್ಜಿ ಶುಲ್ಕ ₹250.
ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಪಾವತಿಸಿದ ಶುಲ್ಕದ ಒಂದು ಭಾಗವನ್ನು ಮರುಪಾವತಿ ಮಾಡಲಾಗುವುದು ಎಂದು ಇಲಾಖೆಯು ತಿಳಿಸಿದೆ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಅಧಿಸೂಚಿ ಇಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.