ADVERTISEMENT

ಭಾಗ -14: ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 19:30 IST
Last Updated 28 ಜೂನ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

186. ಕೆಂಪಂಗಿ ಚಳವಳಿ ಪ್ರಾರಂಭಿಸಿದವರು ಯಾರು?

ಎ) ಮಹಮ್ಮದ್ ಅಲಿ ಜಿನ್ನಾ

ಬಿ) ಖಾನ್ ಅಬ್ದುಲ್ ಗಫಾರ್ ಖಾನ್

ADVERTISEMENT

ಸಿ) ಸರ್ ಮಹಮ್ಮದ್ ಇಕ್ಬಾಲ್

ಡಿ) ಸರ್ ಮನ್ಸೂರ್ ಅಹಮ್ಮದ್

187. ಸರ್ ಸ್ಟಾಫರ್ಡ್ ಕ್ರಿಪ್ಸ್ ಅವರ ಆಯೋಗ ಭಾರತಕ್ಕೆ ಬಂದ ವರ್ಷ ಯಾವುದು?

ಎ) 1940

ಬಿ) 1941

ಸಿ) 1942

ಡಿ) 1943

188. 1937 ರಲ್ಲಿ ನಡೆದ ಚುನಾವಣೆಯಲ್ಲಿ ಈ ಕೆಳಗಿನ ಯಾವ ಎರಡು ಪ್ರಾಂತ್ಯಗಳಲ್ಲಿ ಕಾಂಗ್ರೆಸ್‌ ಸರ್ಕಾರ ಇರಲಿಲ್ಲ?

ಎ) ಬಂಗಾಳ ಮತ್ತು ಪಂಜಾಬ್

ಬಿ) ಮಹಾರಾಷ್ಟ್ರ ಮತ್ತು ಕರ್ನಾಟಕ

ಸಿ) ಕೇರಳ ಮತ್ತು ಆಂಧ್ರಪ್ರದೇಶ

ಡಿ) ಪಂಜಾಬ್ ಮತ್ತು ಹರಿಯಾಣ

189. ನೀವು ಒಂದರಿಂದ ನೂರರವರೆಗೆ ಎಲ್ಲಾ ಸಂಖ್ಯೆಗಳನ್ನು ಬರೆದರೆ, 4 ನ್ನು ಎಷ್ಟು ಸಲ ಬಳಸುತ್ತೀರಿ?

ಎ) 19

ಬಿ) 18

ಸಿ) 11

ಡಿ) 1

190. ‘ಎ’ ಯು ‘ಬಿ’ ನ ಸಹೋದರಿ, ‘ಸಿ’ ಯು ‘ಬಿ’ ನ ತಾಯಿ, ‘ಡಿ’ ಯು ‘ಸಿ’ ನ ತಂದೆ, ‘ಇ’ ಯು ‘ಡಿ’ ಯ ತಾಯಿ, ಹಾಗಿದ್ದಲ್ಲಿ ‘ಎ’ ಯು ‘ಡಿ’ ಗೆ ಏನಾಗಬೇಕು?

ಎ) ಅಜ್ಜ

ಬಿ) ಅಜ್ಜಿ

ಸಿ) ಮಗಳು

ಡಿ) ಮೊಮ್ಮಗಳು

191. ‘ಈ ಹುಡುಗಿಯು, ನನ್ನ ತಾಯಿಯ ಮೊಮ್ಮಗನ ಪತ್ನಿಯಾಗಬೇಕು’ ಎಂದು ನಾಗರಾಜ ಹೇಳಿದರೆ, ಗುರು ಹುಡುಗಿಗೆ ಏನಾಗಬೇಕು?

ಎ) ತಂದೆ

ಬಿ) ಅಜ್ಜ

ಸಿ) ಪತಿ

ಡಿ) ಇವುಗಳಲ್ಲಿ ಯಾವುದೂ ಅಲ್ಲ

192. ಒಂದು ತರಗತಿಯ ಎಲ್ಲಾ ಹುಡುಗರನ್ನು ಒಂದೇ ಸಾಲಿನಲ್ಲಿ ನಿಲ್ಲಿಸಿದಾಗ, ಒಬ್ಬ ಹುಡುಗನು, ಆ ಸಾಲಿನ ಎರಡೂ ಬದಿಯಿಂದ 19ನೆಯವನಾದರೆ, ಒಟ್ಟು ಆ ತರಗತಿಯಲ್ಲಿ ಎಷ್ಟು ಹುಡುಗರಿದ್ದಾರೆ?

ಎ) 37

ಬಿ) 38

ಸಿ) 39

ಡಿ) 27

193. 2003ನೇ ಇಸವಿಯ ಜನವರಿ 30ನೇ ದಿನವು ಗುರುವಾರವಾದರೆ, 2003ನೇ ಇಸವಿಯ ಮಾರ್ಚ್ 2ನೇ ದಿನವು ಯಾವ ವಾರವಾಗಿರುತ್ತದೆ?

ಎ) ಭಾನುವಾರ

ಬಿ) ಗುರುವಾರ

ಸಿ) ಮಂಗಳವಾರ

ಡಿ) ಶನಿವಾರ

194. ಜೋಗ ಜಲಪಾತ ಯಾವ ನದಿಯಿಂದ ಉಂಟಾಗಿದೆ?

ಎ) ನೇತ್ರಾವತಿ

ಬಿ) ಕಾವೇರಿ

ಸಿ) ಶರಾವತಿ

ಡಿ) ಶಿಂಷಾ

195. ಭಾರತದ ರಾಷ್ಟ್ರೀಯ ಜಲಚರ ಪ್ರಾಣಿ ಯಾವುದು?

ಎ) ಡಾಲ್ಫಿನ್

ಬಿ) ಮೊಸಳೆ

ಸಿ) ಕತಾ ಮೀನು

ಡಿ) ಆಮೆ

196. ದ್ವಾರಸಮುದ್ರವೆಂದು ಯಾವ ಸ್ಥಳವನ್ನು ಕರೆಯುತ್ತಾರೆ?

ಎ) ಹಳೇಬೀಡು

ಬಿ) ಕೊಡಗು

ಸಿ) ಬೇಲೂರು

ಡಿ) ಕಡೂರು

197. ‘ಡೆಮೊಗ್ರಫಿ’ ಎಂದರೆ

ಎ) ಪ್ರಾಣಿಗಳ ಜನಸಂಖ್ಯೆಯನ್ನು ಅಧ್ಯಯನ ಮಾಡುವುದು

ಬಿ) ಮಾನವ ಜನಸಂಖ್ಯೆಯನ್ನು ಅಧ್ಯಯನ ಮಾಡುವುದು

ಸಿ) ಆನೆಗಳ ಜನಸಂಖ್ಯೆಯನ್ನು ಅಧ್ಯಯನ ಮಾಡುವುದು

ಡಿ) ಇವುಗಳಲ್ಲಿ ಯಾವುವೂ ಅಲ್ಲ

198. ಈ ಕೆಳಗಿನವುಗಳಲ್ಲಿ ಯಾವುದು ಭಾರತದ ಚುನಾವಣಾ ಆಯೋಗದ ಕರ್ತವ್ಯ ಅಲ್ಲ?

ಎ) ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡುವುದು

ಬಿ) ಅಭ್ಯರ್ಥಿಗಳಿಗೆ ಪ್ರಚಾರ ಮಾಡಲು ಹಣ ನೀಡುವುದು

ಸಿ) ಚುನಾವಣೆ ನಿಯಮಗಳನ್ನು ರೂಪಿಸುವುದು

ಡಿ) ಚುನಾವಣಾ ಕ್ಷೇತ್ರ, ದಿನ ನಿಗದಿಪಡಿಸುವುದು

199. ಜಲಿಯನ್ ವಾಲಾಭಾಗ್‌ ಸಭೆಯಲ್ಲಿ, ಜನರ ಮೇಲೆ ಗುಂಡು ಹಾರಿಸಲು ಆಜ್ಞೆ ನೀಡಿದ ವ್ಯಕ್ತಿ ಯಾರು?

ಎ) ಫಿಯರ್‌

ಬಿ) ಟಯರ್‌

ಸಿ) ಡಯರ್

ಡಿ) ಫಯರ್‌

200. ಬಂಗಾಳದ ವಿಭಜನೆಯು ಯಾವ ವರ್ಷದಲ್ಲಿ ನಡೆಯಿತು?

ಎ) 1905

ಬಿ) 1904

ಸಿ) 1906

ಡಿ) 1907

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.