ADVERTISEMENT

ಯಲಹಂಕ ರೈಲುಗಾಲಿ ಕಾರ್ಖಾನೆಯಲ್ಲಿ 192 ಟ್ರೇಡ್‌ ಅಪ್ರೆಂಟಿಸ್‌ಗಳಿಗೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2019, 6:30 IST
Last Updated 29 ಅಕ್ಟೋಬರ್ 2019, 6:30 IST
   

ಬೆಂಗಳೂರು: ಭಾರತೀಯ ರೈಲ್ವೆ ಇಲಾಖೆಯಯಲಹಂಕದಲ್ಲಿನ ರೈಲ್ವೆ ವೀಲ್‌ ಫ್ಯಾಕ್ಟರಿಯಲ್ಲಿ ( ಗಾಲಿ ಮತ್ತು ಅಚ್ಚು) ಟ್ರೇಡ್‌ ಅಪ್ರೆಂಟಿಸ್‌ಗಳ ನೇಮಕಾತಿಗಾಗಿಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ತಾಂತ್ರಿಕಶಿಕ್ಷಣ ಪಡೆದ ಅಭ್ಯರ್ಥಿಗಳು ನವೆಂಬರ್‌ 15ರ ಒಳಗೆ ನಿಗದಿ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

ಒಟ್ಟು 192 ಟ್ರೇಡ್‌ಅಪ್ರೆಂಟಿಸ್‌ಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು. ಫಿಟ್ಟರ್‌, ಟರ್ನರ್‌, ಮೆಕ್ಯಾನಿಕ್‌, ಸಿಎನ್‌ಸಿ ಆಪರೇಟರ್‌, ಎಲೆಕ್ಟ್ರಿಶಿಯನ್‌, ಎಲೆಕ್ಟ್ರಾನಿಕ್‌ ಮೆಕ್ಯಾನಿಸ್ಟ್‌ಗಳ ವಿಭಾಗದಲ್ಲಿ ನೇಮಕಾತಿ ನಡೆಯಲಿದೆ.

ADVERTISEMENT

ಮೀಸಲಾತಿ ವಿವರ..

ಸಾಮಾನ್ಯ ಅಭ್ಯರ್ಥಿಗಳು: 98

ಒಬಿಸಿ ಅಭ್ಯರ್ಥಿಗಳು: 51

ಪರಿಶಿಷ್ಟ ಜಾತಿ ಅಭ್ಯರ್ಥಿಗಳು: 29

ಪರಿಶಿಷ್ಟಪಂಗಡ ಅಭ್ಯರ್ಥಿಗಳು: 14

ಅಂಗವಿಕಲರು : 08

ಮಾಜಿ ಸೈನಿಕರು: 06

ವಿದ್ಯಾರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಶೇ 50 ರಷ್ಟು ಅಂಕಗಳೊಂದಿಗೆ ಪಾಸಾಗಿರಬೇಕು. ಹಾಗೂಫಿಟ್ಟರ್‌, ಟರ್ನರ್‌, ಮೆಕ್ಯಾನಿಕ್‌, ಸಿಎನ್‌ಸಿ ಅಪರೇಟರ್‌, ಎಲೆಕ್ಟ್ರಿಶಿಯನ್‌, ಎಲೆಕ್ಟ್ರಾನಿಕ್‌ ಮೆಕ್ಯಾನಿಸ್ಟ್‌ಗಳ ವಿಭಾಗದಲ್ಲಿ ಎನ್‌ಸಿವಿಟಿ/ಎನ್‌ಟಿಸಿ ಅಥವಾ ತತ್ಸಮಾನ ವಿದ್ಯಾರ್ಹತೆಹೊಂದಿರಬೇಕು.

ವಯಸ್ಸು: ಕನಿಷ್ಠ 15 ವರ್ಷ, ಗರಿಷ್ಠ 24 ವರ್ಷಗಳು

ಮಯೋಮಿತಿ ಸಡಿಲಿಕೆ:ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳು,ಪರಿಶಿಷ್ಟ ಜಾತಿ/ಪರಿಶಿಷ್ಟಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ಅಂಗವಿಕಲರಿಗೆ 10 ವರ್ಷಗಳು

ಅರ್ಜಿ ಶುಲ್ಕ:ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳು ₹ 100 ಶುಲ್ಕ ಪಾವತಿಸಬೇಕು.ಪ.ಜಾ, ಪ.ಪಂ, ಅಂಗವಿಕಲರು ಹಾಗೂ ಮಹಿಳೆಯರಿಗೆ ಶುಲ್ಕದಿಂದ ವಿನಾಯಿತಿ ಇರುತ್ತದೆ. ಶುಲ್ಕವನ್ನು ಡಿಡಿ ಅಥವಾ ಪೊಸ್ಟಲ್‌ಆರ್ಡರ್‌ (ಪಿಒ) ಮೂಲಕ ಪಾವತಿ ಮಾಡಬೇಕು.

ತರಬೇತಿ ಭತ್ಯೆ: ಸಿಎನ್‌ಸಿ ಆಪರೇಟರ್‌ಗಳಿಗೆ ₹12,261 ಹಾಗೂ ಇತರರಿಗೆ ₹10,899 ಮಾಸಿಕ ಭತ್ಯೆ ನೀಡಲಾಗುವುದು.

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 15–11–2019

ಅಭ್ಯರ್ಥಿಗಳುನಿಗದಿಪಡಿಸಿದ ನಮೂನೆಯಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು. ಬೇರೆ ವಿಧಾನದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ನಿಗದಿತ ಅರ್ಜಿ ನಮೂನೆ, ಅರ್ಜಿ ಸಲ್ಲಿಸುವ ವಿಳಾಸ, ಹಾಗೂ ಹೆಚ್ಚಿನಮಾಹಿತಿ ಪಡೆಯಲುhttps://rwf.indianrailways.gov.inಗೆ ಭೇಟಿ ನೀಡಿ.

ಅಧಿಸೂಚನೆಯ ಮಾಹಿತಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ:https://bit.ly/2Pspd7u

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.