ADVERTISEMENT

ಹೆಚ್ಚು ಅಂಕ ಗಳಿಕೆಗೆ ಲಾಜಿಕಲ್‌ ರೀಸನಿಂಗ್‌

ಅದ್ವಿತ್‌ ಆರ್‌.ಕೊಪ್ಪಳ
Published 26 ಮೇ 2021, 19:30 IST
Last Updated 26 ಮೇ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಾ ಜಿಕಲ್‌ ರೀಸನಿಂಗ್‌ ಎಂಬುದು ಬಹುತೇಕ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಮುಖ ವಿಭಾಗವಾಗಿದ್ದು, ಹೆಚ್ಚು ಅಂಕ ಗಳಿಸಬಹುದಾದ ವಿಷಯ ಎಂದೇ ಪರಿಗಣಿಸಲ್ಪಟ್ಟಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಪ್ಟಿಟ್ಯೂಡ್‌ ಟೆಸ್ಟ್‌ ಎಂಬುದು ಅವಿಭಾಜ್ಯ ಅಂಗ ಎನ್ನಬಹುದು. ಇದರಲ್ಲಿ ಎರಡು ಉಪ ವಿಭಾಗಗಳಿವೆ.

* ಕ್ವಾಂಟಿಟೇಟಿವ್‌ ಆಪ್ಟಿಟ್ಯೂಡ್‌

ADVERTISEMENT

* ಲಾಜಿಕಲ್‌ ರೀಸನಿಂಗ್‌

ಹೆಚ್ಚು ಕಡಿಮೆ ಎಲ್ಲಾ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರೀಸನಿಂಗ್‌ ಎಬಿಲಿಟಿ ಎಂಬುದು ಎರಡು ಬಗೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಈ ಎರಡು ಬಗೆ ಯಾವುವೆಂದರೆ ಲಾಜಿಕಲ್‌ ರೀಸನಿಂಗ್‌ ಮತ್ತು ಅನಾಲಿಟಿಕಲ್‌ ರೀಸನಿಂಗ್‌. ಈ ಲೇಖನದಲ್ಲಿ ಲಾಜಿಕಲ್‌ ರೀಸನಿಂಗ್‌ನಲ್ಲಿರುವ ವಿಷಯಗಳು, ಅವುಗಳನ್ನು ಪರಿಹರಿಸುವ ಬಗೆಯನ್ನು ನೋಡೋಣ.

ಲಾಜಿಕಲ್‌ ರೀಸನಿಂಗ್‌ ಅಂದರೆ ಏನು?
ಲಾಜಿಕಲ್‌ ರೀಸನಿಂಗ್‌ ಆಪ್ಟಿಟ್ಯೂಡ್‌ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಒಂದು ಸರಿಯಾದ ಉತ್ತರ ಅಥವಾ ಪರಿಹಾರಕ್ಕೆ ಬರಬೇಕಾದರೆ ತಾತ್ವಿಕ ಮಟ್ಟದ ವಿಶ್ಲೇಷಣೆ ಇರಬೇಕಾಗುತ್ತದೆ.

ಲಾಜಿಕಲ್‌ ರೀಸನಿಂಗ್‌ ಅನ್ನು ಎರಡು ವಿಧಗಳಾಗಿ ವಿಭಾಗಿಸಬಹುದು.

ವರ್ಬಲ್‌ ರೀಸನಿಂಗ್‌: ಕಾನ್ಸೆಪ್ಟ್‌ ಅನ್ನು ತಾತ್ವಿಕವಾಗಿ ಅರ್ಥ ಮಾಡಿಕೊಂಡು ಸಮಸ್ಯೆಯನ್ನು ಪರಿಹರಿಸುವುದು. ಇದನ್ನು ಶಬ್ದಗಳಲ್ಲಿ ವ್ಯಕ್ತಪಡಿಸಬೇಕಾಗುತ್ತದೆ. ಒಂದು ವಾಕ್ಯದಲ್ಲಿರುವ ಮಾಹಿತಿ ಹಾಗೂ ಅದರ ಗೂಢಾರ್ಥವನ್ನು ಹೊರತೆಗೆಯುವ ಸಾಮರ್ಥ್ಯದ ಪರೀಕ್ಷೆ ಇಲ್ಲಿ ನಡೆಯುತ್ತದೆ.

ನಾನ್‌ ವರ್ಬಲ್‌ ರೀಸನಿಂಗ್‌: ಇಲ್ಲಿ ಕಾನ್ಸೆಪ್ಟ್‌ ಅನ್ನು ತಾತ್ವಿಕವಾಗಿ ಅರ್ಥ ಮಾಡಿಕೊಂಡು ಸಮಸ್ಯೆಯನ್ನು ಅಂಕಿಗಳು/ ಅಕ್ಷರಗಳು/ ಚಿತ್ರಗಳಲ್ಲಿ ಶಬ್ದಗಳ ಜೋಡಣೆಯ ಜೊತೆಗೆ ಪರಿಹರಿಸಬೇಕಾಗುತ್ತದೆ. ಇದು ಸಮಸ್ಯೆಯಲ್ಲಿ ಮಾಹಿತಿಯನ್ನು ಸೇರಿಸುವ ಅಥವಾ ಕಡಿಮೆ ಮಾಡುವ ಸಾಮರ್ಥ್ಯವನ್ನು ಒರೆಗೆ ಹಚ್ಚುತ್ತದೆ.

* ಲಾಜಿಕಲ್‌ ರೀಸನಿಂಗ್‌ ಆಧರಿಸಿದ ಪ್ರಶ್ನೆಗಳನ್ನು ಪರಿಹರಿಸುವ ವಿಧಾನಗಳು

* ಮಾಹಿತಿಯನ್ನು ಸರಿಯಾಗಿ ಓದುವುದು ಮತ್ತು ಅರ್ಥ ಮಾಡಿಕೊಳ್ಳುವುದು.

* ಸೂಕ್ಷ್ಮವಾದ ಲಾಜಿಕಲ್‌ ಮಾಹಿತಿಯನ್ನು ವಿಶ್ಲೇಷಣೆ ಮಾಡುವುದು.

* ಎಲ್ಲಾ ಸಂಭವನೀಯ ಪರಿಹಾರಗಳ ಬಗ್ಗೆ ಚಿಂತಿಸುವುದು.

* ಬೇರೆ ಸಾಧ್ಯತೆಗಳಿಂದ ಬರುವ ಉತ್ತರಗಳ ಜೊತೆ ಹೋಲಿಕೆ ಮಾಡುವುದು.

* ಒಂದು ಸರಿಯಾದ ಲಾಜಿಕಲ್‌ ತೀರ್ಮಾನಕ್ಕೆ ಬರುವುದು.

* ಲಾಜಿಕಲ್‌ ರೀಸನಿಂಗ್‌ನಲ್ಲಿ ಈ ಕೆಲವು ಪ್ರಶ್ನೆಗಳನ್ನು ನಿರೀಕ್ಷಿಸಬಹುದು.

ವರ್ಬಲ್‌ ಪ್ರಶ್ನೆ: ಇದನ್ನು ವರ್ಬಲ್‌ ಆಗಿ ಬಿಡಿಸಬಹುದು. ಅಂದರೆ ಪೆನ್‌ ಮತ್ತು ಪೇಪರ್‌ ಅಗತ್ಯ ಇರುವುದಿಲ್ಲ.

ಚಿತ್ರ ಆಧಾರಿತ ಪ್ರಶ್ನೆ: ಪ್ರಶ್ನೆಯಲ್ಲಿ ಮಿರರ್‌ ಇಮೇಜ್‌ ನೀಡಬಹುದು. ಇದೇ ರೀತಿಯ ಅಥವಾ ವಿಭಿನ್ನವಾದ ಚಿತ್ರವನ್ನು ಹುಡುಕುವಂತೆ ಪ್ರಶ್ನೆ ಕೇಳಬಹುದು.

ಪಝಲ್‌ ಪ್ರಶ್ನೆ: ವಿವಿಧ ರೀತಿಯಲ್ಲಿ ಜನರು/ ದಿನ. ತಿಂಗಳು/ ಸ್ಥಳಗಳನ್ನು ಜೋಡಿಸುವಂತೆ ಕೇಳುತ್ತಾರೆ.

ಸೀಕ್ವೆನ್ಸ್‌ ಪ್ರಶ್ನೆ: ಇದರಲ್ಲಿ ಜನರು/ ಅಂಕಿ/ ಅಕ್ಷರಗಳನ್ನು ಸರಣಿಯಾಗಿ ನೀಡಿ ಅದರ ಮೇಲೆ ಪ್ರಶ್ನೆಗಳನ್ನು ಕೇಳಬಹುದು.

ಸ್ಪರ್ಧಾರ್ಥಿಗಳು ಲಾಜಿಕಲ್‌ ರೀಸನಿಂಗ್‌ ವಿಭಾಗದಲ್ಲಿ ಈ ಕೆಳಗಿನವುಗಳನ್ನು ಅಭ್ಯಾಸ ಮಾಡಬೇಕಾಗುತ್ತದೆ. ಕ್ಯಾಲೆಂಡರ್‌, ರಕ್ತ ಸಂಬಂಧ, ಗಡಿಯಾರಗಳು, ಕೋಡಿಂಗ್‌– ಡಿಕೋಡಿಂಗ್‌, ಘನಾಕೃತಿ, ಪಝಲ್ಸ್‌, ಮಿರರ್‌ ಆಕೃತಿ, ನೀರಿನಲ್ಲಿ ಕಾಣುವ ಆಕೃತಿ, ದಿಕ್ಕುಗಳು, ಫಿಗರ್‌ ಮ್ಯಾಟ್ರಿಕ್ಸ್‌, ಪೇಪರ್‌ ಮಡಿಸುವುದು, ವಿಭಿನ್ನವಾಗಿರುವುದನ್ನು ಗುರುತಿಸುವುದು.

ಸ್ಪರ್ಧಾರ್ಥಿಗಳು ನಾನ್‌ ವರ್ಬಲ್‌ ರೀಸನಿಂಗ್‌ಗೆ ವಿಡಿಯೊ ನೋಡಿ ಅಭ್ಯಾಸ ಮಾಡುವುದು ಸೂಕ್ತ.

ಲಾಜಿಕಲ್‌ ರೀಸನಿಂಗ್‌ ಮೇಲಿರುವ ಹೆಚ್ಚು ಹೆಚ್ಚು ಪ್ರಶ್ನೆಗಳನ್ನು ಬಿಡಿಸಿದಷ್ಟೂ ಇದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.