ADVERTISEMENT

ಪ್ರಜಾವಾಣಿ ಕ್ವಿಜ್ 25

ಎಸ್.ಎಲ್‌.ಶ್ರೀನಿವಾಸ ಮೂರ್ತಿ
Published 17 ಜೂನ್ 2018, 14:44 IST
Last Updated 17 ಜೂನ್ 2018, 14:44 IST
ಪ್ರಜಾವಾಣಿ ಕ್ವಿಜ್ 25
ಪ್ರಜಾವಾಣಿ ಕ್ವಿಜ್ 25   

1. ಕಾದಂಬರಿಕಾರರಾದ ಚಿನು ಅಚಿಬೆ ಮೂಲತಃ ಯಾವ ದೇಶದವರು?
ಅ) ಘಾನ ಆ) ಮೊರಕ್ಕೋ ಇ) ಕೀನ್ಯಾ ಈ) ನೈಜೀರಿಯಾ

2. ಏಷ್ಯಾದ ಅತಿದೊಡ್ಡ ಏಕಶಿಲಾಬೆಟ್ಟ ಎಲ್ಲಿದೆ?
ಅ) ಕುದುರೆಮುಖ ಆ) ಸಾವನದುರ್ಗ ಇ) ಶಿವಗಂಗೆ ಈ) ಮಧುಗಿರಿ

3. ಕಾಫಿಯಲ್ಲಿರುವ ಕೇಂದ್ರೀಯ ನರಮಂಡಲ ವ್ಯವಸ್ಥೆಯನ್ನುಉತ್ತೇಜಿಸುವ ಉತ್ತೇಜಕ ಯಾವುದು?ಅ
) ಸಕ್ಕರೆ ಆ) ಹಾಲು ಇ) ಕೆಫೇನ್‌ ಈ) ಚಿಕೋರಿ

ADVERTISEMENT

4. ಗುರುರಾಜುಲು ನಾಯ್ಡು ಯಾವ ಪ್ರದರ್ಶಕ ಕಲೆಯ ಪ್ರಸಿದ್ಧ ವ್ಯಕ್ತಿ?
ಅ) ಹರಿಕಥೆ ಆ) ನಾಟಕ ಇ) ಚಿತ್ರಕಲೆ ಈ) ನೃತ್ಯ

5. ಮೊದಲು ನಾಲ್ವಡಿ ಕೃಷ್ಣರಾಜರ ಸಹಪಾಠಿಯಾಗಿದ್ದು ನಂತರ ದಿವಾನರಾದವರು ಯಾರು?
ಅ) ಶೇಷಾದ್ರಿ ಅಯ್ಯರ್ ಆ) ವಿಶ್ವೇಶ್ವರಯ್ಯ ಇ) ಮಿರ್ಜಾ ಇಸ್ಮಾಯಿಲ್ ) ಆನಂದ ರಾವ್

6. ಇವುಗಳಲ್ಲಿ ಯಾವುದು ಬದನೆ ಜಾತಿಗೆ ಸೇರಿದ ಸಸ್ಯವಲ್ಲ?
ಅ) ದತ್ತೂರ ಆ) ಆಲೂಗಡ್ಡೆ ಇ) ಟೊಮೆಟೊ ಈ) ಸೌತೆ

7. ‘ಆಧುನಿಕ ವೈಜ್ಞಾನಿಕ ಮನಃಶಾಸ್ತ್ರದ ಪಿತಾಮಹ’ ಯಾರು?
ಅ) ವಿಲ್ಹೆಮ್ ವೂಂಟ್ ಆ) ಸಿಗ್ಮಂಡ್ ಫ್ರಾಯ್ಡ್ ಇ) ಕಾರ್ಲ್ ಯುಂಗ್ ಈ) ಪಾವ್ಲೋವ್

8. ‘ಪಾದುಕಾಸಹಸ್ರಂ’ ಎಂಬ ಸಂಸ್ಕೃತಕೃತಿಯ ಲೇಖಕರು ಯಾರು?
ಅ) ರಾಮಾನುಜಾಚಾರ್ಯ ಆ) ವೇದಾಂತ ದೇಶಿಕ ಇ)ಯಾಮುನಾಚಾರ್ಯ ಈ) ನಾರಾಯಣಾಚಾರ್ಯ

9. ಕರ್ನಾಟಕದ ‘ರಾಜ್ಯಪಕ್ಷಿ’ ಯಾವುದು?
ಅ) ಗೊರವಂಕ ಆ) ಗಿಳಿ ಇ) ನೀಲಕಂಠ ಈ) ಕೋಗಿಲೆ

10. ‘ಪರಮಪದ ಸೋಪಾನಪಟ’ ಎಂದು ಹೆಸರಾದ ಆಟ ಯಾವುದು?
ಅ) ಚೌಕಬಾರ ಆ) ಹಾವು ಏಣಿ ಆಟ ಇ) ಹಳಗುಳಿ ಮಣೆ ಈ) ಹುಲಿಕಲ್ಲು ಆಟ

ಹಿಂದಿನ ಸಂಚಿಕೆಯ ಸರಿ ಉತ್ತರಗಳು
1. ನೆಹರು 2. ಮಾತಲಿ 3. ಕೆ.ಎ.ಟಿ. 4. ಡಿವಿಜಿ 5. ಮಹಿಳಾ ಹಾಕಿ 6. ದೂರದ 7. ಹಡಗು 8. ತಮಿಳು 9. ಅಣು ವಿದ್ಯುತ್ 10. ಮೇಳಕರ್ತ ರಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.