ADVERTISEMENT

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2017, 19:30 IST
Last Updated 5 ನವೆಂಬರ್ 2017, 19:30 IST
ಪ್ರಜಾವಾಣಿ ಕ್ವಿಜ್‌
ಪ್ರಜಾವಾಣಿ ಕ್ವಿಜ್‌   

1. 1848ರಲ್ಲಿ ಲಾರ್ಡ್ ಡಾಲ್ ಹೌಸಿ ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಎಂಬ ಕಾನೂನನ್ನು ಜಾರಿಗೆ ತಂದನು. ಈ ನೀತಿಯ ಪ್ರಕಾರವಾಗಿ ಅವನು ಯಾವ ರಾಜ್ಯವನ್ನು ವಶಪಡಿಸಿಕೊಂಡನು?

a) ಸಾತಾರಾ

b) ಉದಯ್‌ಪುರ

ADVERTISEMENT

c) ಔದ್

d) ಮೇಲಿನ ಎಲ್ಲವೂ

2. 1833ರ ಚಾರ್ಟರ್ ಕಾಯ್ದೆ ಜಾರಿಗೆ ಬಂದ ನಂತರ ಭಾರತದ ಮೊಟ್ಟಮೊದಲ ಗವರ್ನರ್ ಜನರಲ್ ಯಾರಾಗಿದ್ದರು?

a) ಲಾರ್ಡ್ ವಿಲಿಯಂ ಬೆಂಟಿಂಗ್

b) ಲಾರ್ಡ್ ಮೆಂಟೊ

c) ಲಾರ್ಡ್ ಕಾರ್ನ್ ವಾಲಿಸ್

d) ಲಾರ್ಡ್ ಹಾರ್ಡಿಂಚ್

3. 1920ರಲ್ಲಿ ನಡೆದ ವಿಶೇಷ ಕಾಂಗ್ರೆಸ್ ಅಧಿವೇಶನದಲ್ಲಿ ಅಸಹಕಾರ ಚಳವಳಿ ಪ್ರಾರಂಭಿಸುವ ಬಗ್ಗೆ ನಿರ್ಣಯವನ್ನು ಕೈಗೊಳ್ಳಲಾಯಿತು. ಈ ಅಧಿವೇಶನ ನಡೆದ ಸ್ಥಳ ಯಾವುದು?

a) ದೆಹಲಿ

b) ಮುಂಬೈ

c) ನಾಗಪುರ

d) ಲಾಹೋರ್

4. ಪ್ರಾಥಮಿಕ ಶಿಕ್ಷಣದಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಜಾರಿಗೆ ತಂದ ಬ್ರಿಟಿಷ್ ಶಿಕ್ಷಣ ಕಾಯ್ದೆ ಯಾವುದು?

a) ವುಡ್ಸ್ ಶಿಕ್ಷಣ ಕಾಯ್ದೆ

b) ಮೆಕಾಲೆ ಶಿಕ್ಷಣ ಕಾಯ್ದೆ

c) ಹೆಸ್ಟಿಂಗ್ ಶಿಕ್ಷಣ ಕಾಯ್ದೆ

d) ಹಂಟರ್ ಶಿಕ್ಷಣ ಕಾಯ್ದೆ

5. ಭಾರತದಲ್ಲಿ ಮೊದಲ ಹಸಿರು ಕ್ರಾಂತಿ 1966ರಲ್ಲಿ ಪ್ರಾರಂಭವಾಯಿತು. ಎರಡನೇ ಹಸಿರು ಕ್ರಾಂತಿ ಘೋಷಣೆಯಾದ ವರ್ಷ ಯಾವುದು?

a) 1986

b) 1996

c) 2000

d) 2005

6. ಆದಾಯ ಹೆಚ್ಚಳ ಮತ್ತು ಬಡತನ ನಿರ್ಮೂಲನೆ ಗುರಿಯನ್ನು ಹೊಂದಿದ್ದ 11ನೇ ಪಂಚ ವಾರ್ಷಿಕ ಯೋಜನೆಯ ಕಾಲವನ್ನು ಗುರುತಿಸಿ?

a) 2002-2007

b) 2007-2012

c) 2012-2017

d) 2017-2022

7. 1967ರಲ್ಲಿ ದಕ್ಷಿಣ ಪೂರ್ವ (ಈಶಾನ್ಯ) ಏಷ್ಯಾ ರಾಷ್ಟ್ರಗಳ ಸಂಘ ಅಸ್ತಿತ್ವಕ್ಕೆ ಬಂದಿತು. ಇದರ ಮುಖ್ಯ ಕಚೇರಿ ಯಾವ ನಗರದಲ್ಲಿದೆ?

a) ಜಕಾರ್ತ

b) ಸಿಂಗಾಪುರ್

c) ಬ್ಯಾಂಕಾಕ್

d) ಕೌಲಲಾಂಪುರ

8.  ಯಾವ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಪಂಚಾಯತ್ ರಾಜ್ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿತು?

a) ಉತ್ತರ ಪ್ರದೇಶ

b) ಕರ್ನಾಟಕ

c) ರಾಜಸ್ಥಾನ

d) ಮಹಾರಾಷ್ಟ್ರ

9. ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ರಾಷ್ಟ್ರಪತಿ ಆಳ್ವಿಕೆಗೆ ಒಳಪಟ್ಟ ರಾಜ್ಯ ಯಾವುದು?

a) ಪಂಜಾಬ್

b) ಪಶ್ಚಿಮ ಬಂಗಾಳ

c) ಕೇರಳ

d) ತಮಿಳುನಾಡು

10. ಸಂಸತ್ತಿನ ಶಿಫಾರಸ್ಸಿನ ಮೇರೆಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಪದಚ್ಯುತಿಗೊಳಿಸುವ ಅಧಿಕಾರವನ್ನು ಯಾರು ಹೊಂದಿರುತ್ತಾರೆ?

a) ಪ್ರಧಾನ ಮಂತ್ರಿಗಳು

b) ಲೋಕಸಭಾ ಸ್ಪೀಕರ್

c) ಕಾನೂನು ಮಂತ್ರಿ

d) ರಾಷ್ಟ್ರಪತಿ

ಉತ್ತರಗಳು: 1-d, 2-a, 3- c, 4-b, 5-d, 6-b, 7-a, 8-c, 9-a, 10-d.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.