ADVERTISEMENT

ಕೇಂದ್ರೀಯ ವಿದ್ಯಾಲಯ ದಾಖಲಾತಿ-2019: ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 14:23 IST
Last Updated 26 ಮಾರ್ಚ್ 2019, 14:23 IST
   

ಕೇಂದ್ರೀಯ ವಿದ್ಯಾಲಯ ಸಂಘಟನೆಯು(ಕೆವಿಎಸ್‌) ಒಂದನೇ ತರಗತಿ ದಾಖಲಾತಿಗೆ ಆಯ್ಕೆಯಾದ ವಿದ್ಯಾರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಪಟ್ಟಿಯು ಕೆವಿಎಸ್‌ಅಧಿಕೃತ ವೆಬ್‌ಸೈಟ್‌ನಲ್ಲಿ (kvsangathan.nic.in) ಲಭ್ಯವಿದೆ.

ಸೀಟುಗಳ ಲಭ್ಯತೆ ಆಧಾರದಲ್ಲಿ ಎರಡನೇ ಮತ್ತು ಮೂರನೇ ಪಟ್ಟಿಗಳನ್ನು ಕ್ರಮವಾಗಿಏಪ್ರಿಲ್‌ 09, ಏಪ್ರಿಲ್‌ 23ರಂದು ಬಿಡುಗಡೆ ಮಾಡಲಿದೆ.

ಕೇಂದ್ರೀಯ ವಿದ್ಯಾಲಯ ಶಾಲೆಗಳ ಒಂದನೇ ತರಗತಿ ದಾಖಲಾತಿಗೆ ಆನ್‌ಲೈನ್‌ ನೋಂದಣಿ ಪ್ರಕ್ರಿಯೆಯು ಮಾರ್ಚ್‌19ರಿಂದಲೇ ಆರಂಭವಾಗಿದೆ. ಎರಡನೇ ತರಗತಿ ಹಾಗೂ ಅದರ ಮೇಲ್ಪಟ್ಟ ತರಗತಿಗಳಿಗೆ(11ನೇ ತರಗತಿ ಹೊರತುಪಡಿಸಿ) ಏಪ್ರಿಲ್‌ 2ರ ಬೆಳಿಗ್ಗೆ 8 ಗಂಟೆಯಿಂದ ಏಪ್ರಿಲ್‌ 9ರ ಸಂಜೆ ನಾಲ್ಕು ಗಂಟೆವರೆಗೆ ನೋಂದಣಿ ಪ್ರಕ್ರಿಯೆ ನಡೆಯಲಿದೆ.

ADVERTISEMENT

ಸಿಬಿಎಸ್‌ಸಿ 10ನೇ ತರಗತಿ ಫಲಿತಾಂಶ ಪ್ರಕಟವಾದ ಬಳಿಕ 11ನೇ ತರಗತಿ ದಾಖಲಾತಿಗೆ ಅರ್ಜಿಗಳನ್ನು ವಿತರಿಸಲಾಗುವುದು.

ದೇಶದಾದ್ಯಂತ ಒಟ್ಟು 1,137 ಕೇಂದ್ರೀಯ ವಿದ್ಯಾಲಯ ಶಾಲೆಗಳು ಇವೆ. ಒಂದು ಲಕ್ಷದಷ್ಟಿರುವ ಸೀಟುಗಳಿಗಾಗಿ ಒಟ್ಟು 6,48,941 ಅರ್ಜಿ ಸಲ್ಲಿಕೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.