ADVERTISEMENT

ವಿದ್ಯಾರ್ಥಿ ವೇತನ | ಎಲ್ಐಸಿ ವಿದ್ಯಾಧನ್ ಸ್ಕಾಲರ್‌ಷಿಪ್‌ 2023

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2023, 2:30 IST
Last Updated 28 ಆಗಸ್ಟ್ 2023, 2:30 IST
ವಿದ್ಯಾರ್ಥಿ ವೇತನ  (ಚಿತ್ರ: iStock Photo)
ವಿದ್ಯಾರ್ಥಿ ವೇತನ (ಚಿತ್ರ: iStock Photo)   

11ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೆ ಅಧ್ಯಯನ ಮಾಡುತ್ತಿರುವ ಆರ್ಥಿಕ ದುರ್ಬಲ ಕುಟುಂಬಗಳ ವಿದ್ಯಾರ್ಥಿಗಳ ಬಲವರ್ಧನೆಗಾಗಿ ಎಲ್‌ಐಸಿ ಫೈನಾನ್ಸ್‌ ಲಿಮಿಟೆಡ್‌ ರೂಪಿಸಿರುವ ಯೋಜನೆ ಎಲ್‌ಐಸಿ ಎಚ್‌ಎಫ್‌ಎಲ್ ವಿದ್ಯಾಧನ್ ‌ಸ್ಕಾಲರ್‌ಷಿಪ್.

ಅರ್ಹತೆ

  • 2023–24 ಶೈಕ್ಷಣಿಕ ವರ್ಷದಲ್ಲಿ 11ನೇ ತರಗತಿ ಮತ್ತು ಮೊದಲ ಪದವಿ ಮತ್ತು ಮೊದಲ ವರ್ಷದ ಸ್ನಾತಕೋತ್ತರ ಪದವಿ ಪ್ರವೇಶಿಸಿರುವ ಭಾರತೀಯ ವಿದ್ಯಾರ್ಥಿಗಳು ಈ ಸ್ಕಾಲರ್‌ಷಿಪ್‌ ಯೋಜನೆಗೆ ಅರ್ಜಿ ಸಲ್ಲಿಸಬಹುದು.

    ADVERTISEMENT
  • ಅರ್ಜಿದಾರರು ತಮ್ಮ ಹಿಂದಿನ ವರ್ಷದ ತರಗತಿಯಲ್ಲಿ ಶೇ 60ಕ್ಕಿಂತ ಹೆಚ್ಚಿನ ಅಂಕಗಳಿಸಿರಬೇಕು.

  • ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲ ಮೂಲಗಳಿಂದ ₹3.60 ಲಕ್ಷ ಮೀರಬಾರದು.

ಆರ್ಥಿಕ ನೆರವು: ವಾರ್ಷಿಕ ₹25 ಸಾವಿರವರೆಗೆ

ಅರ್ಜಿ ಸಲ್ಲಿಸಲು ಕೊನೆ ದಿನ: 30-09-2023

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: www.b4s.in/praja/LHVC11

ರಮಣಕಾಂತ್ ಮುಂಜಲ್ ಸ್ಕಾಲರ್‌ಷಿಪ್ 2023

ಹೀರೊ ಫಿನ್‌ಕಾರ್ಪ್‌ ಬೆಂಬಲಿತ, ರಮಣಕಾಂತ್ ಮುಂಜಲ್ ಫೌಂಡೇಶನ್‌ ರೂಪಿಸಿರುವ ಕಾರ್ಯಕ್ರಮ ರಮಣಕಾಂತ್ ಮುಂಜಲ್ ಸ್ಕಾಲರ್‌‍ಷಿಪ್‌ 2023.

ಹಣಕಾಸು ಸಂಬಂಧಿತ ಕೋರ್ಸ್‌ಗಳನ್ನು ಕಲಿಯುವ ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶ ಮತ್ತು ಭವಿಷ್ಯದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದಕ್ಕಾಗಿ ಆರ್ಥಿಕ ನೆರವು ನೀಡುವುದಕ್ಕಾಗಿ ರೂಪಿಸಿರುವ ಸ್ಕಾಲರ್‌ಷಿಪ್‌ ಕಾರ್ಯಕ್ರಮವಿದು.

ಅರ್ಹತೆ

  • ಬಿಬಿಎ, ಬಿಎಫ್‌‌‍ಐಎ, ಬಿ.ಕಾಂ(ಎಚ್,ಇ), ಬಿಎಂಎಸ್, ಐಪಿಎಂ, ಬಿಎ(ಎಕನಾಮಿಕ್ಸ್), ಬಿಬಿಎಸ್, ಬಿಬಿಐ, ಬಿಎ‌‌‌‌‍ಎಫ್ ಮತ್ತು ಬಿಎಸ್.ಸಿ (ಸ್ಟಾಟಿಸ್ಟಿಕ್ಸ್) ಅಥವಾ ಯಾವುದೇ ಇತರ ಹಣಕಾಸು ಸಂಬಂಧಿತ ಪದವಿ ಕೋರ್ಸ್‌ನ ಮೊದಲನೇ ವರ್ಷಕ್ಕೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು, ಈ ಸ್ಕಾಲರ್‌ಷಿಪ್‌ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

  • ಅರ್ಜಿದಾರರು 10 ಮತ್ತು 12ನೇ ತರಗತಿ ಪರೀಕ್ಷೆಗಳಲ್ಲಿ ಕನಿಷ್ಠ ಶೇ 80 ಅಂಕಗಳನ್ನು ಪಡೆದಿರಬೇಕು.

  • ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ₹ 4 ಲಕ್ಷಕ್ಕಿಂತ ಕಡಿಮೆಯಿರಬೇಕು.

ಆರ್ಥಿಕ ನೆರವು: 3 ವರ್ಷಗಳವರೆಗೆ ವರ್ಷಕ್ಕೆ ₹ 5ಲಕ್ಷದವರೆಗೆ ವಿದ್ಯಾರ್ಥಿವೇತನ

ಅರ್ಜಿ ಸಲ್ಲಿಕೆಗೆ ಕೊನೆ ದಿನ: 15–09–2023

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ ಮೂಲಕ.

ಹೆಚ್ಚಿನ ಮಾಹಿತಿಗೆ: www.b4s.in/praja/RMKSP1

ಕೃಪೆ: buddy4study.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.