ADVERTISEMENT

ಬೆಂಗಳೂರು ನಗರ ವಿಶ್ವವಿದ್ಯಾಲಯ: ಎಂಬಿಎ, ಎಂಸಿಎ ಉಳಿಕೆ ಸೀಟಿಗೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 23:30 IST
Last Updated 2 ನವೆಂಬರ್ 2025, 23:30 IST
   

ಬೆಂಗಳೂರು ನಗರ ವಿಶ್ವವಿದ್ಯಾಲಯದ (ಬಿಸಿಯು) 2025- 26ನೇ ಸಾಲಿನ ಎಂಬಿಎ ಹಾಗೂ ಎಂಸಿಎ ಕೋರ್ಸ್‌ಗಳ ಉಳಿಕೆ ಸೀಟುಗಳಿಗಾಗಿ ಅರ್ಹ ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ. ಜ್ಞಾನಜ್ಯೋತಿ ಸೆಂಟ್ರಲ್ ಕಾಲೇಜು ಕ್ಯಾಂಪಸ್‌ನಲ್ಲಿ ಎಂಬಿಎ (ಬೆಳಿಗ್ಗೆ ಮತ್ತು ಸಂಜೆ) ಹಾಗೂ ವಿಶ್ವವಿದ್ಯಾಲಯದ ಬಾಗಲೂರು ಸ್ನಾತಕೋತ್ತರ ಕೇಂದ್ರದಲ್ಲಿ ಎಂಸಿಎ ಕೋರ್ಸ್‌ಗಳಿಗೆ ಇದು ಅನ್ವಯವಾಗಲಿದೆ.

ಆನ್‌ಲೈನ್ ಅರ್ಜಿಗಳು ಲಭ್ಯವಿದ್ದು, ಅರ್ಜಿ ಸಲ್ಲಿಸಲು ನ. 7 ಅಂತಿಮ ದಿನ. ₹ 200 ದಂಡ ಶುಲ್ಕ ಸಹಿತ ನ. 10ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. 13ರಂದು ಪ್ರವೇಶ ಪರೀಕ್ಷೆ ನಡೆಯಲಿದೆ. 15ರಂದು ಜ್ಯೇಷ್ಠತಾ ಪಟ್ಟಿ ಪ್ರಕಟವಾಗಲಿದ್ದು, 17ರಂದು ಕೌನ್ಸೆಲಿಂಗ್‌ ಇರಲಿದೆ ಎಂದು ಬಿಸಿಯು ಕುಲಸಚಿವ ಎ.ನವೀನ್ ಜೋಸೆಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT