1. ಭಾರತ-ಮಯನ್ಮಾರ್-ಥಾಯ್ಲೆಂಡ್ ತ್ರಿಪಕ್ಷೀಯ ಹೆದ್ದಾರಿ ಯೋಜನೆಯನ್ನು ಕೆಳಗಿನ ಯಾವ ಪ್ರಧಾನಮಂತ್ರಿಗಳ ಅವಧಿಯಲ್ಲಿ ಅನುಮೋದಿಸಲಾಯಿತು?
ಎ. ಇಂದಿರಾಗಾಂಧಿ
ಬಿ. ಮೊರಾರ್ಜಿ ದೇಸಾಯಿ
ಸಿ. ಡಾ. ಮನಮೋಹನ್ ಸಿಂಗ್
ಡಿ. ಅಟಲ್ ಬಿಹಾರಿ ವಾಜಪೇಯಿ
ಉತ್ತರ : ಡಿ
2. ಸಂವಿಧಾನಾತ್ಮಕ ಉದ್ದೇಶಗಳಿಗಾಗಿ ಪರಿಶಿಷ್ಟ ಪಂಗಡ ಎಂದು ಅಧಿಸೂಚನೆ ಹೊರಡಿಸುವ ಅಧಿಕಾರವನ್ನು ಕೆಳಗಿನ ಯಾವ ಹುದ್ದೆಗಳು ಹೊಂದಿವೆ?
ಎ. ರಾಷ್ಟ್ರಪತಿ.
ಬಿ. ರಾಜ್ಯಪಾಲರು.
ಸಿ. ಕೇಂದ್ರ ಗೃಹ ಸಚಿವರು.
ಡಿ. ಭಾರತದ ಪ್ರಧಾನಮಂತ್ರಿ.
ಉತ್ತರ : ಎ
3. ಬುಡಕಟ್ಟುಗಳ ಸಂರಕ್ಷಣೆಗೆ ಸಂಬಂಧಿಸಿದ ಸಂವಿಧಾನಾತ್ಮಕ ವಿಧಿಗಳು ಮತ್ತು ಅಂಶಗಳನ್ನು ಗುರುತಿಸಿ?
1. ಭಾರತದ ಸಂವಿಧಾನದ ಐದನೇ ಅನುಸೂಚಿಯಲ್ಲಿ ಬುಡಕಟ್ಟುಗಳ ಸಲಹಾ ಮಂಡಳಿಯ ಸ್ಥಾಪನೆಗೆ ಅವಕಾಶವನ್ನು ಕಲ್ಪಿಸಲಾಗಿದೆ.
2. ಸಂವಿಧಾನದ ವಿಧಿ 332ರ ಅನ್ವಯ ರಾಜ್ಯ ವಿಧಾನಸಭೆಗಳಲ್ಲಿ ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿಯನ್ನು ಕಲ್ಪಿಸಲಾಗಿದೆ.
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.
ಎ. 1 ಮಾತ್ರ ಬಿ. 2 ಮಾತ್ರ
ಸಿ. 1 ಮತ್ತು 2 ಡಿ. ಮೇಲಿನ ಎರಡು ಹೇಳಿಕೆಗಳು ತಪ್ಪಾಗಿವೆ.
ಉತ್ತರ : ಸಿ
4. ಇತ್ತೀಚೆಗೆ ಪ್ರಧಾನಮಂತ್ರಿ-ಕುಸುಮ್ ಯೋಜನೆಯನ್ನು ಕೆಳಗಿನ ಯಾವ ಕಾರ್ಯಕ್ರಮಗಳ ವ್ಯಾಪ್ತಿಗೆ ತರಲಾಗಿದೆ?
1. ಕೃಷಿ ಮೂಲಭೂತ ಸೌಕರ್ಯ ನಿಧಿ ಯೋಜನೆ.
2. ಪ್ರಾಧಾನ್ಯ ವಲಯ ಸಾಲ ಯೋಜನೆ.
3. ಕಟಾವಿನ ನಂತರದ ನಿರ್ವಹಣಾ ಯೋಜನೆ.
4. ಕಟಾವಿಗೂ ಮುಂಚಿನ ನಿರ್ವಹಣಾ ಯೋಜನೆ.
ಕೋಡ್ ಬಳಸಿ ಸರಿ ಉತ್ತರವನ್ನು ಗುರುತಿಸಿ.
ಎ. 1 ಮತ್ತು 2 →ಬಿ. 1 ಮತ್ತು 3
ಸಿ. 2 ಮತ್ತು 3 →ಡಿ. 1 ಮತ್ತು 4
ಉತ್ತರ : ಎ
5. ಕೆಳಗಿನ ಯಾವ ಅಂಶಗಳನ್ನು ಪ್ರಧಾನಮಂತ್ರಿ-ಕುಸುಮ್ ಯೋಜನೆಯ ಧ್ಯೇಯೋದ್ದೇಶಗಳು ಎಂದು ಪರಿಗಣಿಸಬಹುದು?
1. ಡೀಸೆಲ್ ಚಾಲಿತ ಪಂಪ್‌ಗಳ ಬಳಕೆಯನ್ನು ತಗ್ಗಿಸುವುದು.
2. ಸೌರ ವಿದ್ಯುತ್ ಚಾಲಿತ ಪಂಪ್‌ಗಳ ಬಳಕೆಗೆ ಉತ್ತೇಜನ ನೀಡುವುದು.
3. ಸಮುದಾಯ ಆಧಾರಿತ ಸೌರ ವಿದ್ಯುತ್ ಚಾಲಿತ ನೀರಾವರಿ ಯೋಜನೆಗಳನ್ನು ಹಮ್ಮಿಕೊಳ್ಳುವುದು.
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.
ಎ. 1 ಮಾತ್ರ →ಬಿ. 2 ಮಾತ್ರ
ಸಿ. 1, 2 ಮತ್ತು 3 →ಡಿ. 2 ಮತ್ತು 3
ಉತ್ತರ : ಸಿ
6. ಟೊಮೆಟೊ ಉತ್ಪಾದನೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಕೆಳಗಿನ ಯಾವ ರಾಜ್ಯಗಳಲ್ಲಿ ಕಾಣಬಹುದಾಗಿದೆ?
1. ಆಂಧ್ರಪ್ರದೇಶ.→2. ಮಧ್ಯಪ್ರದೇಶ.
3. ಉತ್ತರ ಪ್ರದೇಶ.→4. ಕರ್ನಾಟಕ.
5. ಗುಜರಾತ್.
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.
ಎ. ಒಂದು ಮಾತ್ರ ಸರಿಯಾಗಿದೆ.
ಬಿ. ಎರಡು ಸರಿಯಾಗಿದೆ.
ಸಿ. ನಾಲ್ಕು ಸರಿಯಾಗಿದೆ.
ಡಿ. ಎಲ್ಲಾ ಉತ್ತರಗಳು ಸರಿಯಾಗಿದೆ.
ಉತ್ತರ : ಸಿ
7. ಕೆಳಗಿನ ಯಾವ ವೈರಸ್‌ಗಳಿಂದ ಟೊಮೆಟೊ ಉತ್ಪಾದನೆಯ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ?
1. ಟೊಮೆಟೊ ಮೊಸಾಯಿಕ್ ವೈರಸ್.
2. ಕುಕುಂಬರ್ ಮೊಸಾಯಿಕ್ ವೈರಸ್.
3. ಕ್ಯಾರೆಟ್ ಮೊಸಾಯಿಕ್ ವೈರಸ್.
4. ಬೀಟ್ರೂಟ್ ಮೊಸಾಯಿಕ್ ವೈರಸ್.
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.
ಎ. ಒಂದು ಉತ್ತರ ಮಾತ್ರ ಸರಿ ಇವೆ.
ಬಿ. ಎರಡು ಉತ್ತರಗಳು ಸರಿ ಇವೆ.
ಸಿ. ಮೂರು ಉತ್ತರಗಳು ಸರಿ ಇವೆ.
ಡಿ. ನಾಲ್ಕು ಉತ್ತರಗಳು ಸರಿ ಇವೆ.
ಉತ್ತರ : ಬಿ
8. ಇತ್ತೀಚೆಗೆ ಟಿಬೆಟ್‌ನ ಧರ್ಮಗುರು ದಲೈಲಾಮಾ ಅವರು ಕೆಳಗಿನ ಯಾವ ರಾಷ್ಟ್ರದ ಅಧಿಕಾರಿಗಳೊಂದಿಗೆ ಚರ್ಚಿಸಿದರು?
ಎ. ಇಸ್ರೇಲ್ ರಾಷ್ಟ್ರದ ಅಧಿಕಾರಿಗಳು.
ಬಿ. ದಕ್ಷಿಣ ಕೊರಿಯಾ ರಾಷ್ಟ್ರದ ಅಧಿಕಾರಿಗಳು.
ಸಿ. ಅಮೆರಿಕದ ಅಧಿಕಾರಿಗಳು.
ಡಿ. ಚೀನಾದ ಅಧಿಕಾರಿಗಳು.
ಉತ್ತರ : ಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.