ADVERTISEMENT

ಸ್ಪರ್ಧಾ ವಾಣಿ | ಬಹುಆಯ್ಕೆಯ ಪ್ರಶ್ನೋತ್ತರಗಳು

​ಪ್ರಜಾವಾಣಿ ವಾರ್ತೆ
Published 23 ಜನವರಿ 2025, 0:30 IST
Last Updated 23 ಜನವರಿ 2025, 0:30 IST
   

1. ಒಪೆಕ್ ಸಂಘಟನೆ ಯಾವ ವರದಿಗಳನ್ನು ಬಿಡುಗಡೆ ಮಾಡುತ್ತದೆ?

1. ಮಾಸಿಕ ತೈಲ ಮಾರುಕಟ್ಟೆ ವರದಿ.

2. ಅನ್ಯುವಲ್ ಸ್ಟಾಟಿಸ್ಟಿಕಲ್ ಬುಲೆಟಿನ್.

ADVERTISEMENT

3. ವರ್ಲ್ಡ್ ಆಯಿಲ್ ಔಟ್ ಲುಕ್.

4. ವರ್ಲ್ಡ್ ಪೆಟ್ರೋಲಿಯಂ ರಿಪೋರ್ಟ್.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1, 2 ಮತ್ತು 3 

ಬಿ. 2 ಮತ್ತು 3

ಸಿ. 3 ಮತ್ತು 4 

ಡಿ. 1 ಮತ್ತು 4

ಉತ್ತರ : ಎ

****

2. ಒಪೆಕ್+ ಒಕ್ಕೂಟದಲ್ಲಿ ಕೆಳಗಿನ ಯಾವ ರಾಷ್ಟ್ರಗಳು ಸದಸ್ಯತ್ವವನ್ನು ಪಡೆದಿವೆ?

1. ಮೆಕ್ಸಿಕೊ 2. ಓಮನ್

3. ದಕ್ಷಿಣ ಸುಡಾನ್ 4. ನೈಜೀರಿಯಾ

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮಾತ್ರ 

ಬಿ. 2 ಮಾತ್ರ

ಸಿ. 1, 2 ಮತ್ತು 3 

ಡಿ. 2 ಮತ್ತು 4

ಉತ್ತರ : ಸಿ

****

3. ಭಾರತದಲ್ಲಿ ಕೆಳಗಿನ ಯಾವ ರಾಸಾಯನಿಕದ ಬಳಕೆಯನ್ನು ಸಂಪೂರ್ಣವಾಗಿ 2010ರಿಂದ ನಿಲ್ಲಿಸಲಾಗಿದೆ ?

ಎ. ಕಾರ್ಬನ್ ಟೆಟ್ರಾ ಕ್ಲೋರೈಡ್.

ಬಿ. ಸಲ್ಫ್ಯೂರಿಕ್ ಆ್ಯಸಿಡ್.

ಸಿ. ನೈಟ್ರಿಕ್ ಆ್ಯಸಿಡ್‌.

ಡಿ. ಕಾಸ್ಟಿಕ್ ಸೋಡಾ.

ಉತ್ತರ : ಎ

****

4. ಓಝೋನ್ ಪದರದ ಸಂರಕ್ಷಣೆಗಾಗಿ ಜಾರಿಗೆ ಬಂದಿರುವ ವಿಯೆನ್ನಾ ಒಪ್ಪಂದಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ ?

1. ಓಝೋನ್ ಒಪ್ಪಂದ 1988ರಲ್ಲಿ ಜಾರಿಗೆ ಬಂದಿತು.

2. ಓಝೋನ್ ಒಪ್ಪಂದ ಜಾರಿಗೆ ಬಂದ ಸಂದರ್ಭದಲ್ಲಿ 28 ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಿದವು.

3. 2008ರಲ್ಲಿ ಓಝೋನ್ ಒಪ್ಪಂದ ಸಾರ್ವತ್ರಿಕವಾಗಿ ಅಂಗೀಕರಿಸಿರುವ ಎರಡು ಒಪ್ಪಂದಗಳಲ್ಲಿ ಒಂದಾಗಿದೆ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮಾತ್ರ 

ಬಿ. 2 ಮಾತ್ರ

ಸಿ. 1, 2 ಮತ್ತು 3 

ಡಿ. 1 ಮತ್ತು 2

ಉತ್ತರ : ಡಿ

****

5. ಕೆಳಗಿನ ಯಾವ ರಾಷ್ಟ್ರಗಳನ್ನು ಅಸಿಯಾನ್ ಪ್ಲಸ್ ಒಕ್ಕೂಟದ ಸದಸ್ಯತ್ವ ಹೊಂದಿರುವ ರಾಷ್ಟ್ರಗಳು ಎಂದು ಪರಿಗಣಿಸಬಹುದು?

1. ಉತ್ತರ ಕೊರಿಯಾ. 2. ದಕ್ಷಿಣ ಕೊರಿಯಾ.

3. ಆಸ್ಟ್ರೇಲಿಯಾ. 4. ಅಮೆರಿಕ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1, 2 ಮತ್ತು 3 

ಬಿ. 2, 3 ಮತ್ತು 4

ಸಿ. 3 ಮತ್ತು 4 

ಡಿ. 2 ಮತ್ತು 4

ಉತ್ತರ : ಬಿ

****

6. ಅಸಿಯಾನ್ ಒಕ್ಕೂಟವನ್ನು ಕೆಳಗಿನ ಯಾವ ಘೋಷಣೆಯ ನಂತರ ಸ್ಥಾಪಿಸಲಾಯಿತು?

ಎ. ಬ್ಯಾಂಕಾಕ್ ಘೋಷಣೆ.

ಬಿ. ಜಕಾರ್ತ ಘೋಷಣೆ.

ಸಿ. ಬೀಜಿಂಗ್ ಘೋಷಣೆ.

ಡಿ. ಟೋಕಿಯೋ ಘೋಷಣೆ.

ಉತ್ತರ : ಎ

****

7. ಆಸ್ಟ್ರೇಲಿಯಾ ಗುಂಪಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ ?

1. ಆಸ್ಟ್ರೇಲಿಯಾ ಗುಂಪಿನ ಸಂಸ್ಥಾಪಕ ಸದಸ್ಯ ರಾಷ್ಟ್ರಗಳು ಮೊಟ್ಟಮೊದಲ ಸಭೆಯನ್ನು ಬೆಲ್ಜಿಯಂನಲ್ಲಿ ಆಯೋಜಿಸಿದ್ದವು.

2. ಮೊಟ್ಟಮೊದಲ ಸಭೆಯಲ್ಲಿ 15 ರಾಷ್ಟ್ರಗಳು ಭಾಗವಹಿಸಿದ್ದವು.

3. ಪ್ರಸ್ತುತ ಈ ಗುಂಪಿನಲ್ಲಿ43 ಸದಸ್ಯ ರಾಷ್ಟ್ರಗಳು ಕಾರ್ಯನಿರ್ವಹಿಸುತ್ತಿವೆ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮಾತ್ರ 

ಬಿ. 1, 2 ಮತ್ತು 3

ಸಿ. 2 ಮತ್ತು 3 

ಡಿ. 3 ಮಾತ್ರ

ಉತ್ತರ : ಬಿ

****

8. ಕೆಳಗಿನ ಯಾವ ಒಕ್ಕೂಟಗಳು ಆಸ್ಟ್ರೇಲಿಯಾ ಗುಂಪಿನ ಸದಸ್ಯತ್ವವನ್ನು ಹೊಂದಿವೆ?

1. ಐರೋಪ್ಯ ಆಯೋಗದ ಎಲ್ಲಾ ಸದಸ್ಯ ರಾಷ್ಟ್ರಗಳು.

2. ಐರೋಪ್ಯ ಒಕ್ಕೂಟದ ಸದಸ್ಯರು ಮಾತ್ರ.

3. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆ.

4. ಅಂತರರಾಷ್ಟ್ರೀಯ ಹಣಕಾಸು ನಿಧಿ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮತ್ತು 3 

ಬಿ. 2 ಮತ್ತು 4

ಸಿ. 2 ಮತ್ತು 3 

ಡಿ. 1, 2, 3 ಮತ್ತು 4

ಉತ್ತರ : ಎ

****

9. ಭಾರತೀಯ ರಿಸರ್ವ್ ಬ್ಯಾಂಕ್ ಕೆಳಗಿನ ಯಾವ ಸಮೀಕ್ಷೆಗಳನ್ನು ಬಿಡುಗಡೆ ಮಾಡುತ್ತದೆ ?

1. ಗ್ರಾಹಕರ ಆತ್ಮವಿಶ್ವಾಸ ಸಮೀಕ್ಷೆ.

2. ಹಣದುಬ್ಬರ ನಿರೀಕ್ಷೆಯ ಸಮೀಕ್ಷೆ.

3. ಸೇವೆಗಳ ಮತ್ತು ಮೂಲಸೌಕರ್ಯಗಳ ಹೊರನೋಟ ಸಮೀಕ್ಷೆ.

4. ತಯಾರಿಕಾ ವಲಯದ ಸಮೀಕ್ಷೆ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1, 2 ಮತ್ತು 3 

ಬಿ. 1, 2, 3 ಮತ್ತು 4

ಸಿ. 2 ಮತ್ತು 4 

ಡಿ. 3 ಮಾತ್ರ

ಉತ್ತರ : ಎ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.