ವೈದ್ಯರು ಮತ್ತು ನರ್ಸ್ ಹೇಗೆ ಆಸ್ಪತ್ರೆ ನಿರ್ವಹಣೆಗೆ ಆಧಾರವೋ, ಅದೇ ರೀತಿ, ಇ-ಲರ್ನಿಂಗ್ ಅಥವಾ ಆನ್‌ಲೈನ್ ಕಲಿಕೆಗೆ ಇನ್‌ಸ್ಟ್ರಕ್ಷನಲ್ ಡಿಸೈನ್ (ID ) ಮತ್ತು ಲರ್ನಿಂಗ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (LMS) ಪರಿಣತರ ಅಗತ್ಯ ಸಾಕಷ್ಟಿದೆ.
ರಾಡಿಕ್ಸ್ ಎಂಬ ಸಾಫ್ಟ್‌ವೇರ್ ಸಂಸ್ಥೆ ನೀಡಿರುವ ಅಂಕಿ ಅಂಶದ ಪ್ರಕಾರ 2000ದಿಂದ ಈಚೆಗೆ ಇ-ಲರ್ನಿಂಗ್ ಕ್ಷೇತ್ರ ಶೇ 90ರಷ್ಟು ಬೆಳವಣಿಗೆ ಸಾಧಿಸಿದೆ. 2024ರಲ್ಲಿ ಇನ್ನಷ್ಟು ಬೆಳವಣಿಗೆ ಕಾಣಲಿದೆ. ಶೇ 90ರಷ್ಟು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೂ ಆನ್‌ಲೈನ್ ತರಬೇತಿ ನೀಡಲು ಉತ್ತೇಜನ ನೀಡುತ್ತಿವೆ. ಆನ್‌ಲೈನ್ ಕಲಿಕೆ ಪೂರೈಸುವ ಎಲ್‌ಎಂಎಸ್ ತಂತ್ರಾಂಶದ ಮಾರುಕಟ್ಟೆಯು ಅಂದಾಜು 30 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು ವಿಸ್ತಾರಗೊಳ್ಳುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ. ಹಾಗಾಗಿ ಇನ್‌ಸ್ಟ್ರಕ್ಷನಲ್ ಡಿಸೈನ್ ಮತ್ತು ಲರ್ನಿಂಗ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಪರಿಣತರ ಬೇಡಿಕೆ ಸಹಜವಾಗಿಯೇ ವೃದ್ಧಿಸಿದೆ.
ಶಿಕ್ಷಾರ್ಥಿಗಳ ಅಗತ್ಯವನ್ನು ಮನಗಂಡು, ಕಲಿಕೆಯಲ್ಲಿ ಪರಿಣಾಮಕಾರಿಯಾಗಿ ತೊಡಗಿಕೊಳ್ಳುವಂತೆ ಪಠ್ಯವನ್ನು ರೂಪಿಸುವ ಗುರುತರ ಜವಾಬ್ದಾರಿಗೆ ಇನ್‌ಸ್ಟ್ರಕ್ಷನಲ್ ಡಿಸೈನ್ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಇನ್‌ಸ್ಟ್ರಕ್ಷನಲ್ ಡಿಸೈನ್ ಹುದ್ದೆಯಲ್ಲಿ ಇರುವವರು, ಶೈಕ್ಷಣಿಕ ಸಲಕರಣೆಗಳಾದ ಕಲಿಕಾ ಸಾಮಗ್ರಿ, ವರ್ಕ್-ಶಾಪ್, ಕಲಿಕಾ ಮಾದರಿ, ಸಿಮ್ಯುಲೇಷನ್ಸ್‌ಗಳನ್ನು, ಕಲಿಕೆ ವಿಡಿಯೊ-ಆಡಿಯೊಗಳಿಗೆ ಬೇಕಾದ ಪೂರ್ವಸಿದ್ಧತೆ ನಡೆಸುತ್ತಾರೆ. ಈ ಕ್ಷೇತ್ರ ಆಯ್ಕೆ ಮಾಡಿಕೊಂಡರೆ ಇನ್‌ಸ್ಟ್ರಕ್ಷನಲ್ ಡಿಸೈನರ್ ಅಸಿಸ್ಟೆಂಟ್ ಹುದ್ದೆಯಿಂದ ಇನ್‌ಸ್ಟ್ರಕ್ಷನ್ ಡಿಸೈನರ್, ಕರಿಕ್ಯುಲಂ ಡೆವೆಲಪರ್ (ಪಠ್ಯ ವಿನ್ಯಾಸಕರು), ಲರ್ನಿಂಗ್ ಎಕ್ಸ್‌ಪೀರಿಯೆನ್ಸ್ ಡಿಸೈನರ್ (LXD), ಮ್ಯಾನೇಜರ್ ಒಫ್ ಲರ್ನಿಂಗ್ ಆ್ಯಂಡ್ ಡೆವಲಪ್‌ಮೆಂಟ್, ಚೀಫ್ ಲರ್ನಿಂಗ್ ಆಫೀಸರ್‌ವರೆಗೂ ಬೆಳೆಯಬಹುದು.
ಬ್ಯಾಚುಲರ್ ಆಫ್ ಎಜುಕೇಷನ್, ಬ್ಯಾಚುಲರ್ ಆಫ್ ಇನ್‌ಸ್ಟ್ರಕ್ಷನ್ ಡಿಸೈನ್. ಅಥವಾ ಯಾವುದೇ ಪದವೀಧರರಾದರೂ ಸರಿ, ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಅನುಭವ ಇರಬೇಕು.
ಉಡೆಮಿ (Udemy), ಕೋರ್ಸೆರಾ (Coursera) ಸೇರಿ ಆನ್‌ಲೈನ್ ಪ್ಲಾಟ್‌ಫಾರಂಗಳು ಇನ್‌ಸ್ಟ್ರಕ್ಷನ್ ಡಿಸೈನ್ ಡಿಪ್ಲೊಮಾ ಕೋರ್ಸ್‌ಗಳನ್ನು ನೀಡುತ್ತವೆ. ಎಟಿಡಿ ಮತ್ತು ಐಎಸ್‌ಡಿ ಇನ್‌ಸ್ಟಿಟ್ಯೂಟ್‌ಗಳಿಂದ ಸರ್ಟಿಫೈಡ್ ಪ್ರೊಫೆಷನಲ್ ಇನ್ ಲರ್ನಿಂಗ್ ಆ್ಯಂಡ್ ಪರ್ಫಾರ್ಮೆನ್ಸ್ (CPLP)ಕೋರ್ಸ್ ಮಾಡಬಹುದು.
ನಿಮ್ಮ ಸಂಸ್ಥೆ ಅಥವಾ ಶಾಲೆಯ ಗ್ರಂಥಾಲಯ ನಿರ್ವಹಣೆಗೆ ಗ್ರಂಥಪಾಲಕರು ಇದ್ದಂತೆ ಮತ್ತು ಪುಸ್ತಕಗಳನ್ನು ಬರೆಯಲು ಶಿಕ್ಷಕರು/ಲೇಖಕರು ಇದ್ದಂತೆ, ಆಧುನಿಕ ಇ -ಲರ್ನಿಂಗ್ ವ್ಯವಸ್ಥೆಯಲ್ಲಿ ಎಲ್‌ಎಂಎಸ್ ಅಡ್ಮಿನಿಸ್ಟ್ರೇಟರ್ ಮತ್ತು ಇನ್‌ಸ್ಟ್ರಕ್ಷನಲ್ ಡಿಸೈನರ್‌ಗಳ ಅಗತ್ಯ ವ್ಯಾಪಕವಾಗಿದೆ.
ಕಲಿಕಾ-ವೇದಿಕೆ (ಲರ್ನಿಂಗ್ ಪ್ಲಾಟ್‌ಫಾರ್ಮ್) ನಿರ್ವಹಣೆ ಮತ್ತು ಉಸ್ತುವಾರಿ ನೋಡಿಕೊಳ್ಳುವವರನ್ನು ಎಲ್.ಎಂ.ಎಸ್ ಅಡ್ಮಿನಿಸ್ಟ್ರೇಟರ್ ಎಂದು ಕರೆಯಲಾಗುತ್ತದೆ.
ಇವರು ಶಿಕ್ಷಕರು ಮತ್ತು ಶಿಕ್ಷಾರ್ಥಿಗಳ ಕುರಿತ ದತ್ತಾಂಶ ನಿರ್ವಹಣೆ ಮಾಡುತ್ತಾರೆ. ಜತೆಗೆ ಆನ್‌ಲೈನ್ ವೇದಿಕೆಯನ್ನು ಸಮರ್ಪಕವಾಗಿ ಬಳಸಲು ಅನುವು ಮಾಡಿಕೊಡುತ್ತಾರೆ.
ಕಲಿಕಾ ಸಾಮಗ್ರಿಗಳಾದ ನೋಟ್ಸ್, ವಿಡಿಯೊ, ಕ್ವಿಜ್, ಫಲಿತಾಂಶ, ಸರ್ಟಿಫಿಕೆಟ್ಸ್ ಒದಗಿಸುತ್ತಾರೆ.
ಈ ಕ್ಷೇತ್ರ ಆಯ್ಕೆ ಮಾಡಿಕೊಂಡರೆ, ಅಡ್ಮಿನಿಸ್ಟ್ರೇಟರ್ ಅಸಿಸ್ಟೆಂಟ್ ಆಗಿ ಕಾರ್ಯ ಪ್ರಾರಂಭಿಸಿ, ಮುಂದೆ ಇ–ಲರ್ನಿಂಗ್ ಸಪೋರ್ಟ್ ಸ್ಪೆಷಲಿಸ್ಟ್, ಎಲ್‌ಎಂಎಸ್ ಅಡ್ಮಿನಿಸ್ಟ್ರೇಟರ್, ಲರ್ನಿಂಗ್ ಟೆಕ್ನಾಲಜಿ ಸ್ಪೆಷಲಿಸ್ಟ್, ಡೈರೆಕ್ಟರ್ ಆಫ್ ಲರ್ನಿಂಗ್ ಟೆಕ್ನಾಲಜಿಯವರೆಗೂ ಬೆಳೆಯಬಹುದು.
ವಿದ್ಯಾರ್ಹತೆ: ಬ್ಯಾಚುಲರ್ ಆಫ್ ಎಜುಕೇಷನ್, ಬ್ಯಾಚುಲರ್ ಆಫ್ ಇನ್‌ಸ್ಟ್ರಕ್ಷನ್ ಡಿಸೈನ್, ಕಂಪ್ಯೂಟರ್ ಸೈನ್ಸ್ ಅಥವಾ ಇನ್ನಿತರೆ ತಾಂತ್ರಿಕ ಪದವಿ ಪಡೆದವರು.
Cornerstone Learning Certification: Cornerstone OnDemand LMS Litmus Training Operations Certification
Moodle Certified Professional (ಈ ಸರ್ಟಿಫಿಕೇಷನ್ ಕೋರ್ಸ್‌ಗಳು ಉಚಿತವಾಗಿ ಲಭ್ಯ )
Canvas Certified Associate
(ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಈ ಎಲ್‌ಎಂ.ಎಸ್ ಹೆಚ್ಚಾಗಿ
ಬಳಕೆಯಲ್ಲಿದೆ)
Docebo LMS Administrator Certification
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.