ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷಾ ದಿಕ್ಸೂಚಿ: ವಿದ್ಯುತ್ ಪ್ರವಾಹ ಮತ್ತು ವಿದ್ಯುತ್ ಮಂಡಲ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 19:30 IST
Last Updated 2 ಫೆಬ್ರುವರಿ 2021, 19:30 IST
   

ಭೌತಶಾಸ್ತ್ರ

ಅಧ್ಯಾಯ -12

ವಿದ್ಯುತ್ ಪ್ರವಾಹ: ‘ಒಂದು ಏಕಮಾನ ಸಮಯದಲ್ಲಿ ಒಂದು ನಿರ್ದಿಷ್ಟ ಕ್ಷೇತ್ರದ ಮೂಲಕ ಪ್ರವಹಿಸುವ ಆವೇಶಗಳ ಪರಿಮಾಣ’.

ADVERTISEMENT

ವಿದ್ಯುತ್ ಮಂಡಲದಲ್ಲಿ ವಿದ್ಯುತ್‌ ಪ್ರವಾಹದ ದಿಕ್ಕನ್ನು ಎಲೆಕ್ಟ್ರಾನ್‌ಗಳ ಹರಿವಿನ ದಿಕ್ಕಿಗೆ ವಿರುದ್ಧವಾಗಿ ತೆಗೆದುಕೊಳ್ಳಲಾಗುತ್ತದೆ.

ವಾಹಕದ ಯಾವುದೇ ಅಡ್ಡಕೊಯ್ತದ ಮೂಲಕ ‘t’ ಸಮಯದಲ್ಲಿ q ಪ್ರಮಾಣದ ಒಟ್ಟು ಆವೇಶ ಚಲಿಸಿದಾಗ, ವಾಹಕದ ಅಡ್ಡ ಕೊಯ್ತದಲ್ಲಿ ಪ್ರವಹಿಸುವ ವಿದ್ಯುತ್ Iಯು

ವಿದ್ಯುತ್ ಆವೇಶದ SI ಏಕಮಾನ ಕೂಲಮ್ (C)

ವಿದ್ಯುತ್ ಪ್ರವಾಹದ SI ಏಕಮಾನ ಆಂಪೀರ್ (A)

ಒಂದು ಆಂಪೀರ್ ಎಂದರೆ ಪ್ರತಿ ಸೆಕೆಂಡಿಗೆ ಒಂದು ಕೂಲಮ್ ಆವೇಶದ ಪ್ರವಾಹವಾಗಿದೆ. ಅಂದರೆ

ವಿದ್ಯುತ್ ಪ್ರವಾಹದ ದರವನ್ನು ಅಳೆಯಲು ಉಪಯೋಗಿಸುವ ಉಪಕರಣವನ್ನು ‘ಅಮ್ಮೀಟರ್’ ಎಂದು ಕರೆಯುತ್ತಾರೆ. ಇದನ್ನು ವಿದ್ಯುತ್ ಮಂಡಲದಲ್ಲಿ ಸರಣಿ ಕ್ರಮದಲ್ಲಿ ಜೋಡಿಸುತ್ತಾರೆ.

Caption

ವಿದ್ಯುತ್ ವಿಭವ ಮತ್ತು ವಿಭವಾಂತರ

ಯಾವುದೇ ವಾಹಕದಲ್ಲಿ ಎಲೆಕ್ಟ್ರಾನ್‌ಗಳು ಚಲಿಸಲು ವಿದ್ಯುತ್ ಒತ್ತಡದ ವ್ಯತ್ಯಾಸವು ಅವಶ್ಯವಿದ್ದು, ಈ ವ್ಯತ್ಯಾಸವನ್ನು ವಿಭವಾಂತರ ಎಂದು ಕರೆಯುತ್ತಾರೆ. ಇದನ್ನು ವಿದ್ಯುತ್ ಕೋಶಗಳಿಂದ ಉತ್ಪಾದಿಸಬಹುದು. ವಿದ್ಯುತ್ ಕೋಶಗಳಲ್ಲಿನ ರಾಸಾಯನಿಕ ಕ್ರಿಯೆಯಿಂದಾಗಿ ಉಂಟಾಗುವ ವಿಭವಾಂತರವು ವಿದ್ಯುತ್ ಮಂಡಲದಲ್ಲಿ ವಿದ್ಯುತ್ ಪ್ರವಾಹವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ವಿಭವಾಂತರ: ವಿದ್ಯುತ್ ಪ್ರವಾಹವಿರುವ ವಿದ್ಯುತ್ ಮಂಡಲದಲ್ಲಿ ಎರಡು ಬಿಂದುಗಳ ನಡುವಿನ ವಿದ್ಯುತ್ ವಿಭವಾಂತರವನ್ನು ಒಂದು ಏಕಮಾನ ಆವೇಶವನ್ನು ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ತರುವಲ್ಲಿ ಆಗುವ ಕೆಲಸ ಎಂದು ವ್ಯಾಖ್ಯಾನಿಸಬಹುದು.

ಎರಡು ಬಿಂದುಗಳ ನಡುವಿನ ವಿಭವಾಂತರ:

ವಿದ್ಯುತ್ ವಿಭವಾಂತರದ SI ಏಕಮಾನ (W)

ವಿಭವಾಂತರ ಅಳೆಯುವ ಉಪಕರಣವನ್ನು ವೋಲ್ಟ್‌ ಮೀಟರ್ ಎಂದು ಕರೆಯುತ್ತಾರೆ. ವೋಲ್ಟ್‌ ಮೀಟರ್‌ ಅನ್ನು ಯಾವಾಗಲೂ ಸಮಾನಾಂತರವಾಗಿ ಎರಡು ಬಿಂದುಗಳ ತುದಿಗೆ ಜೋಡಿಸಲಾಗುತ್ತದೆ.

ಓಮ್‌ನ ನಿಯಮ

ಸ್ಥಿರವಾದ ತಾಪಮಾನದಲ್ಲಿ ವಿದ್ಯುತ್ ಮಂಡಲದಲ್ಲಿನ ಲೋಹದ ತಂತಿಯ ನಡುವಿನ ವಿಭವಾಂತರ V ಯ ಮೂಲಕ ಹರಿಯುವ ವಿದ್ಯುತ್ ಪ್ರವಾಹಕ್ಕೆ (I) ನೇರಾನುಪಾತದಲ್ಲಿರುತ್ತದೆ.

ಇನ್ನೊಂದು ರೀತಿಯಲ್ಲಿ

ಇಲ್ಲಿ ಸ್ಥಿರಾಂಕ R aನ್ನು ರೋಧ ಎಂದು ಕರೆಯುವರು.

ರೋಧದ ಏಕಮಾನ ಓಮ್ (Ω)

ಓಮ್ ನಿಯಮದ ಪ್ರಕಾರ

ಯಾವುದೇ ವಾಹಕದ ಎರಡು ತುದಿಗಳ ನಡುವಿನ ವಿಭವಾಂತರ 1V ಆಗಿದ್ದು, ಅದರ ಮೂಲಕ 1A ವಿದ್ಯುತ್ ಪ್ರವಾಹ ಪ್ರವಹಿಸಿದಾಗ ಆ ವಾಹಕದ ರೋಧ R, 1 Ω ಆಗಿರುತ್ತದೆ.

ಸಮೀಕರಣ (1) ರ ಪ್ರಕಾರ

ಸಮೀಕರಣ (3) ದ ಪ್ರಕಾರ ವಿದ್ಯುತ್ ಪ್ರವಾಹವು ಪ್ರವಹಿಸುವ ರೋಧಕದ ರೋಧಕ್ಕೆ ವಿಲೋಮ ಅನುಪಾತದಲ್ಲಿರುತ್ತದೆ. ಆದ್ದರಿಂದ ವಿಭವಾಂತರ ಮೂಲವನ್ನು ಬದಲಾಯಿಸಿದೆ. ವಿದ್ಯುತ್ ಪ್ರವಾಹವನ್ನು ನಿಯಂತ್ರಿಸಲು ಉಪಯೋಗಿಸುವ ಉಪಕರಣವನ್ನು ‘ಪರಿವರ್ತಿತ ರೋಧ’ ಎನ್ನುವರು.

ಪ್ರತಿ ವಸ್ತುವಿನಲ್ಲಿ ವಿದ್ಯುತ್ ಪ್ರವಾಹಅದರ ರೋಧದ ಮೇಲೆ ಅವಲಂಬಿತವಾಗಿದ್ದು, ಬೇರೆ ಬೇರೆ ವಸ್ತುವಿನಲ್ಲಿ ಅದು ಬೇರೆ ಬೇರೆಯಾಗಿರುತ್ತದೆ.

ಕಡಿಮೆ ರೋಧವನ್ನು ಹೊಂದಿರುವ ವಸ್ತುವನ್ನು ಉತ್ತಮ ವಾಹಕ ಎಂತಲೂ ಗಣನೀಯವಾಗಿ ಹೆಚ್ಚಿನ ರೋಧನವನ್ನು ಒಡ್ಡುವ ವಸ್ತುವನ್ನು ‘ಕಳಪೆ ವಾಹಕ’ ಅಥವಾ ‘ಅವಾಹಕ’ ಎಂತಲೂ ಕರೆಯುತ್ತಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.