(ಸಾಂದರ್ಭಿಕ ಚಿತ್ರ)
ಬೆಂಗಳೂರು ನಗರ ವಿಶ್ವವಿದ್ಯಾಲಯದ ಜಾಗತಿಕ ಭಾಷೆಗಳ ಅಧ್ಯಯನ ಕೇಂದ್ರವು 2025– 26ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ, ಕೆಳಗಿನ ವಿದೇಶಿ ಭಾಷೆಗಳ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಿದೆ. ಸರ್ಟಿಫಿಕೇಟ್ ಕೋರ್ಸ್ (8 ತಿಂಗಳ ಅವಧಿ), ಅಂಡರ್‌ಗ್ರ್ಯಾಜುಯೇಟ್ ಡಿಪ್ಲೊಮಾ ಮತ್ತು ಪೋಸ್ಟ್‌ಗ್ರ್ಯಾಜುಯೇಟ್ ಡಿಪ್ಲೊಮಾ (8 ತಿಂಗಳ ಅವಧಿ)
ಕೋರ್ಸ್: ಫ್ರೆಂಚ್, ಜರ್ಮನ್, ಸ್ಪ್ಯಾನಿಷ್, ಜಪಾನೀಸ್, ಚೈನೀಸ್ ಮತ್ತು ರಷ್ಯನ್.
ಪ್ರವೇಶಕ್ಕೆ ಕೊನೆಯ ದಿನಾಂಕ: 11 ಅಕ್ಟೋಬರ್ 2025
ಅರ್ಹತೆ:
ಸರ್ಟಿಫಿಕೇಟ್ ಕೋರ್ಸ್‌ಗಾಗಿ– 2ನೇ ಪಿಯುಸಿ/ 12ನೇ ತರಗತಿ ಉತ್ತೀರ್ಣರಾಗಿರಬೇಕು.
ಡಿಪ್ಲೊಮಾ/ ಪೋಸ್ಟ್‌ಗ್ರ್ಯಾಜುಯೇಟ್ ಡಿಪ್ಲೊಮಾಗಾಗಿ– ಹಿಂದಿನ ಹಂತದ ಕೋರ್ಸ್ ಉತ್ತೀರ್ಣರಾಗಿರಬೇಕು
ವಿವರಗಳಿಗೆ: 080-29572019/ 6361756549 ದೂರವಾಣಿ ಸಂಖ್ಯೆ ಅಥವಾ ಸೆಂಟ್ರಲ್ ಕಾಲೇಜು ಹಿಂಭಾಗದಲ್ಲಿರುವ ವಿಶ್ವವಿದ್ಯಾಲಯದ ಜಾಗತಿಕ ಭಾಷೆಗಳ ಅಧ್ಯಯನ ಕೇಂದ್ರದ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕೇಂದ್ರದ ನಿರ್ದೇಶಕಿ ಪ್ರೊ. ಜ್ಯೋತಿ ವೆಂಕಟೇಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.