ADVERTISEMENT

ಮಾದರಿ ಪ್ರಶ್ನೋತ್ತರ: ಸಾಮಾನ್ಯ ಜ್ಞಾನ

ನಿಮಗಿದು ಗೊತ್ತೇ?

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 0:00 IST
Last Updated 24 ನವೆಂಬರ್ 2022, 0:00 IST
   

ಕೆಎಸ್‌ಪಿ, ಕೆಪಿಎಸ್‌ಸಿ ಗ್ರೂಪ್‌ ‘ಸಿ’ ಸೇರಿದಂತೆ ವಿವಿಧ ಇಲಾಖೆಗಳ ಹುದ್ದೆಗಳಿಗಾಗಿ ಶೀಘ್ರದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ಈ ಮೂರು ಪರೀಕ್ಷೆಗಳಲ್ಲಿರುವ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.

‌1) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ಸುಪ್ರೀಂ ಕೋರ್ಟ್‌ನ 150ನೇ ಮುಖ್ಯ ನ್ಯಾಯಮೂರ್ತಿಯಾಗಿ ಡಿ ವೈ ಚಂದ್ರಚೂಡ್ ಅಧಿಕಾರ ಸ್ವೀಕರಿಸಿದ್ದಾರೆ.

ADVERTISEMENT

2) ಡಿ ವೈ ಚಂದ್ರಚೂಡ್ ಅವರು 1998ರಲ್ಲಿ ಮುಂಬೈ ಹೈಕೋರ್ಟ್‌ನಲ್ಲಿ ವಕೀಲರಾಗಿ ಕಾರ್ಯ ಆರಂಭಿಸಿದರು. 1998-2000ರ ಅವಧಿಯಲ್ಲಿ ಭಾರತದ ಸಾಲಿಸಿಟರ್ ಜನರಲ್ ಅಗಿ ನೇಮಕಗೊಂಡಿದ್ದರು. ನಂತರದ ದಿನಗಳಲ್ಲಿ ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. 2016ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಉತ್ತರ ಸಂಕೇತಗಳು:

ಎ) ಹೇಳಿಕೆ 2 ಮಾತ್ರ ಸರಿಯಾಗಿದೆ

ಬಿ) ಹೇಳಿಕೆ 1 ಮತ್ತು 2 ಎಲ್ಲವೂ ತಪ್ಪಾಗಿವೆ

ಸಿ) ಹೇಳಿಕೆ 1 ಮತ್ತು 2 ಎಲ್ಲವೂ ಸರಿಯಾಗಿವೆ

ಡಿ) ಹೇಳಿಕೆ 1 ಮಾತ್ರ ಸರಿಯಾಗಿದೆ

ಉತ್ತರ: ಸಿ

2) ಮೀನು ತ್ಯಾಜ್ಯದಿಂದ ಬಯೋಡೀಸೆಲ್ ಉತ್ಪಾದಿಸುವ ಯೋಜನೆಯನ್ನು ಎಲ್ಲಿ ಜಾರಿಗೆ ತರಲಾಗುತ್ತಿದೆ?

ಎ) ಮೂಲ್ಕಿ→ಬಿ) ಸುರತ್ಕಲ್
ಸಿ) ಕಾರವಾರ→ಡಿ) ತದಡಿ

ಉತ್ತರ: ಎ

3) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪ್ರತಿಮೆ ನಿರ್ಮಾಣವಾಗಿದೆ. ಇದು 108 ಅಡಿ ಎತ್ತರ, 120 ಟನ್ ತೂಕವಿದೆ. ಗುಜರಾತ್‌ನ ‘ಏಕತಾ ಪ್ರತಿಮೆ’ ನಿರ್ಮಾಣ ಮಾಡಿದ ಶಿಲ್ಪಿ ರಾಮ್ ಸುತಾರ್ ಈ ಮೂರ್ತಿಯನ್ನು ನಿರ್ಮಿಸಿದ್ದಾರೆ.

2) 1510ರಲ್ಲಿ ಯಲಹಂಕದಲ್ಲಿ ಕೆಂಪನಂಜೇಗೌಡ ಹಾಗೂ ಲಿಂಗಾಂಬೆ ದಂಪತಿಗಳ ಪುತ್ರರಾಗಿ ಕೆಂಪೇಗೌಡರು ಜನಿಸಿದರು. ಅವರು 1513ರಲ್ಲಿ ನಾಡಪ್ರಭುಗಳಾಗಿ ಅಧಿಕಾರ ವಹಿಸಿಕೊಂಡರು.

3) ಬಾಲ್ಯದಿಂದ ಶ್ರೀಕೃಷ್ಣದೇವರಾಯರ ಆಡಳಿತಾವಧಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಕಣ್ಣಾರೆ ಕಂಡಿದ್ದ ಕೆಂಪೇಗೌಡರು ತಮ್ಮ ನಾಡಿನಲ್ಲಿಯೂ ಈ ಎಲ್ಲಾ ವೈಭವಗಳನ್ನು ಪ್ರತಿಷ್ಠಾಪಿಸುವ ಆಸೆಯನ್ನು ಹೊಂದಿದ್ದರು.

4) ಬೆಂಗಳೂರು ನಗರ ನಿರ್ಮಾಣಕ್ಕೆ ಜಾಗ ಹುಡುಕಿದ ಕೆಂಪೇಗೌಡರು ಭೂಗರ್ಭ-ನೀರಾವರಿ ತಜ್ಞರನ್ನು, ವಾಸ್ತುಶಿಲ್ಪಿಗಳನ್ನು ಕರೆದು ಸ್ಥಳ ಮತ್ತು ಪರಿಸರದ ಪರೀಶಿಲನೆ ಮಾಡಿಸಿ ಮಾಹಿತಿ ಪಡೆಯುತ್ತಾರೆ. ವಿಜಯನಗರದ ಅರಸ ಅಚ್ಯುತರಾಯರನ್ನು ಭೇಟಿ ಮಾಡಿ ರಾಜಧಾನಿ ಬೆಂಗಳೂರಿನ ನಿರ್ಮಾಣದ ಅನುಮತಿಯ ಜತೆಗೆ ಧನ ಸಹಾಯಕ್ಕಾಗಿ ಕೋರಿಕೊಳ್ಳುತ್ತಾರೆ.

5) ಕೆಂಪೇಗೌಡರು ಆಸ್ಥಾನದ ಪ್ರಮುಖರೊಂದಿಗೆ ಚರ್ಚಿಸಿ ಗುರುತಿಸಿದ ಪ್ರದೇಶದಲ್ಲಿ ಕೋಟೆ, ಪೇಟೆ, ಗುಡಿ, ಕೆರೆ ಮತ್ತು ಉದ್ಯಾನ ಈ 5 ವಿಭಾಗಗಳನ್ನು ಒಳಗೊಂಡ ನಗರದ ನಿರ್ಮಾಣಕ್ಕೆ ನೀಲ ನಕ್ಷೆ ತಯಾರಿಸುತ್ತಾರೆ.

ಉತ್ತರ ಸಂಕೇತಗಳು
ಎ) 1, 2, 3ನೇ ಹೇಳಿಕೆಗಳು ಮಾತ್ರ ಸರಿಯಾಗಿದೆ
ಬಿ) 1, 3, 4 ಮತ್ತು 5ನೇ ಹೇಳಿಕೆಗಳು ಸರಿಯಾಗಿವೆ.
ಸಿ) ಎಲ್ಲಾ ಹೇಳಿಕೆಗಳು ತಪ್ಪಾಗಿವೆ
ಡಿ) ಎಲ್ಲಾ ಹೇಳಿಕೆಗಳು ಸರಿಯಾಗಿವೆ.

ಉತ್ತರ: ಡಿ

4) ಬ್ರೆಜಿಲ್ ದೇಶದ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?

ಎ) ಜೈರ್ ಬೋಲ್ಸನಾರಾ

ಬಿ) ಲೂಯಿಸ್ ಇನಾಸಿಯೊ ಲುಲಾ ಡ ಸಿಲ್ವಾ

ಸಿ) ಪೀಟರ್ ಬೋಲ್ಸನಾರಾ ಡ ಸಿಲ್ವಾ

ಡಿ) ಮೇಲಿನ ಯಾರೂ ಅಲ್ಲ

ಉತ್ತರ: ಬಿ

5) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ಜಗತ್ತಿನ ಜನಸಂಖ್ಯೆ 800 ಕೋಟಿ ದಾಟಲಿದೆ ಎಂದು ವಿಶ್ವ ಸಂಸ್ಥೆಯ ಜನಸಂಖ್ಯಾ ನಿಧಿ ತಿಳಿಸಿದೆ. 1950ರಲ್ಲಿ ಇದ್ದ ಜನಸಂಖ್ಯಾ ಸ್ಥಿತಿಗೆ ಹೋಲಿಸಿದರೆ ಇದು ತುಂಬಾ ಹೆಚ್ಚು.

2) 2023ರ ಹೊತ್ತಿಗೆ ಭಾರತವು ಜನಸಂಖ್ಯೆಯಲ್ಲಿ ಚೀನಾ ದೇಶವನ್ನು ಹಿಂದಕ್ಕಿ ಮೊದಲ ಸ್ಥಾನದಲ್ಲಿ ನಿಲ್ಲಲಿದೆ.

3) ಚೀನಾದಲ್ಲಿ 140 ಕೋಟಿ ಇರುವ ಜನ ಸಂಖ್ಯೆಯು ಕ್ರಮೇಣವಾಗಿ ಇಳಿಯಲಿದೆ, 2050ರ ಹೊತ್ತಿಗೆ 130 ಕೋಟಿಗೆ ಇಳಿದರೆ ಈ ಶತಮಾನ ಅಂತ್ಯಕ್ಕೆ 80 ಕೋಟಿಗೆ ಇಳಿಯಲಿದೆ.

4) 2050ರ ಹೊತ್ತಿಗೆ ಭಾರತದಲ್ಲಿ ಜನಸಂಖ್ಯೆ 170 ಕೋಟಿಗೆ ಏರುವ ಸಾಧ್ಯತೆ ಇದೆ.

ಉತ್ತರ ಸಂಕೇತಗಳು:

ಎ) 1, 3 ಮತ್ತು 4 ಹೇಳಿಕೆಗಳು ಮಾತ್ರ ಸರಿಯಾಗಿವೆ

ಬಿ) 1 ರಿಂದ 4ರ ತನಕ ಎಲ್ಲಾ ಹೇಳಿಕೆ ಸರಿಯಾಗಿವೆ

ಸಿ) 1, 3, ಮತ್ತು 4 ಹೇಳಿಕೆಗಳು ಸರಿಯಾಗಿವೆ

ಡಿ)1, 3 ಮತ್ತು 4 ಹೇಳಿಕೆಗಳು ಮಾತ್ರ ಸರಿಯಾಗಿವೆ

ಉತ್ತರ: ಬಿ

6) ಅಕ್ಟೋಬರ್ 31 ಅನ್ನು ರಾಷ್ಟ್ರೀಯ ಏಕತಾ ದಿನ ಎಂದು ಆಚರಿಸಲಾಗುತ್ತದೆ. ಹಾಗಾದರೆ ಈ ದಿನ ಯಾರ ಜನ್ಮದಿನವಾಗಿದೆ?

‌ಎ) ಸರ್ದಾರ್ ವಲ್ಲಭಭಾಯಿ ಪಟೇಲ್

ಬಿ) ಜವಾಹರ ಲಾಲ್ ನೆಹರು

ಸಿ) ಇಂದಿರಾ ಗಾಂಧಿ

ಡಿ) ಅಟಲ್ ಬಿಹಾರಿ ವಾಜಪೇಯಿ

ಉತ್ತರ: ಎ

7) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ಫೊರೆನ್ಸಿಕ್ಸ್ ಮೆಡಿಸಿನ್(ನ್ಯಾಯ ವೈದ್ಯ ಶಾಸ್ತ್ರ) ತಂಡದಿಂದ ಡಯಾಟಮ್ ಟೆಸ್ಟ್ ನಡೆಸಲಾಗುತ್ತದೆ.

2) ನೀರಿನಲ್ಲಿ ಮುಳುಗಿ ಮೃತಪಟ್ಟ ಪ್ರಕರಣಗಳಲ್ಲಿ ಕೊಲೆಯಾಗಿರುವ ಅನುಮಾನಗಳಿದ್ದರೆ ಡಯಾಟಮ್ ಟೆಸ್ಟ್(ಪರೀಕ್ಷೆ)ಯನ್ನು ನಡೆಸಲಾಗುತ್ತದೆ. ಆಗ ಮೃತರ ಬಟ್ಟೆಗಳು, ಬೂಟು ಇಲ್ಲವೇ ಚಪ್ಪಲಿ ವಾಹನಗಳು ಇತ್ಯಾದಿಗಳಲ್ಲಿ ಸಿಲುಕಿರುವ ಮಣ್ಣು, ತ್ಯಾಜ್ಯವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತದೆ.

3) ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಶವದ ಅಂಗಾಂಗ ಪರೀಕ್ಷೆಯನ್ನು ನಡೆಸಲಾಗುತ್ತದೆ. ಆ ವ್ಯಕ್ತಿಯ ಶ್ವಾಸಕೋಶದೊಳಗೆ ಡಯಾಟಮ್ ಅಂಶವು ಪತ್ತೆಯಾದರೆ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದು ದೃಢವಾಗುತ್ತದೆ. ಒಂದು ವೇಳೆ ಡಯಾಟಮ್ ಅಂಶಗಳು ಇಲ್ಲದೇ ಹೋದರೆ ಆ ವ್ಯಕ್ತಿಯನ್ನು ಯಾರೋ ಸಾಯಿಸಿ ನೀರಿಗೆ ಹಾಕಿದ್ದಾರೆಂಬ ನಿರ್ಧಾರಕ್ಕೆ ಬರಲಾಗುತ್ತದೆ.

ಉತ್ತರ ಸಂಕೇತಗಳು:

ಎ) 1, 2, ಮತ್ತು 3 ಹೇಳಿಕೆಗಳು ಸರಿಯಾಗಿವೆ
ಬಿ) 1 ಮತ್ತು 2 ಹೇಳಿಕೆ ಮಾತ್ರ ಸರಿಯಾಗಿವೆ
ಸಿ) 1 ಮತ್ತು 3 ಹೇಳಿಕೆ ಮಾತ್ರ ಸರಿಯಾಗಿವೆ.
ಡಿ) 1 ರಿಂದ 3ರ ತನಕ ಎಲ್ಲ ಹೇಳಿಕೆಗಳು ತಪ್ಪಾಗಿವೆ

ಉತ್ತರ: ಎ

(ಮಾಹಿತಿ: Spardha Bharati UPSC ಯೂಟ್ಯೂಬ್ ಚಾನೆಲ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.