ADVERTISEMENT

ಎಂ.ಅನುಷಾ ಪ್ರಭುಗೆ ಪ್ರಥಮ ರ‍್ಯಾಂಕ್, ಎರಡು ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2025, 13:12 IST
Last Updated 18 ಮಾರ್ಚ್ 2025, 13:12 IST
ಎಂ.ಅನುಷಾ
ಎಂ.ಅನುಷಾ   

ಮಂಗಳೂರು: ಬೆಸೆಂಟ್ ಸಮೂಹ ಸಂಸ್ಥೆಗೆ ಸೇರಿದ ನಗರದ ಬೊಂದೆಲ್‌ನಲ್ಲಿರುವ ಮಣೇಲ್ ಶ್ರೀನಿವಾಸ್ ನಾಯಕ್ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್ (ಎಂಎಸ್‌ಎನ್‌ಐಎಂ)ನ ವಿದ್ಯಾರ್ಥಿನಿ ಎಂ.ಅನುಷಾ ಪ್ರಭು 2024–25ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯದ ಎಂಬಿಎ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ.

ಅವರು ನಗರದ ಎಂ.ರಘುವೀರ ಪ್ರಭು, ವಿಜಯಾ ಪ್ರಭು ದಂಪತಿ ಪುತ್ರಿ.

ಅನುಷಾ ಅವರು ಶೈಕ್ಷಣಿಕ ಶ್ರೇಷ್ಠತೆಗಾಗಿ ವೈಶ್ಯ ಬ್ಯಾಂಕ್ ನಗದು ಬಹುಮಾನದ ಜತೆಗೆ 8.2 ಅಂಕ ಗಳಿಸಿದ್ದು, ವಿಶ್ವವಿದ್ಯಾನಿಲಯದಿಂದ ಎರಡು ಚಿನ್ನದ ಪದಕಗಳನ್ನು (ರಾಮಕೃಷ್ಣ ಮಲ್ಯ ಚಿನ್ನದ ಪದಕ, ಡಾ.ಎಚ್.ವಿ.ಶಂಕರನಾರಾಯಣ ಚಿನ್ನದ ಪದಕ) ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.