ADVERTISEMENT

ಸ್ಪರ್ಧಾ ವಾಣಿ: ಬಹುಆಯ್ಕೆಯ ಪ್ರಶ್ನೆಗಳು

​ಪ್ರಜಾವಾಣಿ ವಾರ್ತೆ
Published 2 ಜನವರಿ 2025, 0:15 IST
Last Updated 2 ಜನವರಿ 2025, 0:15 IST
<div class="paragraphs"><p>ಸಾಂಕೇತಿಕ ಚಿತ್ರ&nbsp;</p></div>

ಸಾಂಕೇತಿಕ ಚಿತ್ರ 

   

ಸ್ಪರ್ಧಾ ವಾಣಿ: ಬಹುಆಯ್ಕೆಯ ಪ್ರಶ್ನೆಗಳು

1. ಪ್ರಜಾಪ್ರಭುತ್ವಕ್ಕಾಗಿ ಶೃಂಗಸಭೆ ಎನ್ನುವ ಪ್ರಸ್ತಾಪವನ್ನು ಕೆಳಗಿನ ಯಾವ ರಾಷ್ಟ್ರದ ಮುಖ್ಯಸ್ಥರು ನೀಡಿದರು?

ADVERTISEMENT

ಎ. ಅಮೆರಿಕದ ಅಧ್ಯಕ್ಷರು.

ಬಿ. ಭಾರತದ ಪ್ರಧಾನಮಂತ್ರಿ.

ಸಿ. ಭಾರತದ ರಾಷ್ಟ್ರಪತಿ.

ಡಿ. ಬ್ರಿಟನ್ನಿನ ಪ್ರಧಾನಮಂತ್ರಿ.

ಉತ್ತರ : ಎ

2. ಸ್ಟಾರ್ಟ್ ಅಪ್ ಮಹಾ ಕುಂಭವನ್ನು ಕೆಳಗಿನ ಯಾವ ಸ್ಥಳದಲ್ಲಿ ಆಯೋಜಿಸಲಾಗಿತ್ತು?

ಎ. ದೆಹಲಿಯ ಭಾರತ್ ಮಂಟಪಂ.

ಬಿ. ಕೋಲ್ಕತ್ತದ ಈಡೇನ್ ಗಾರ್ಡನ್ಸ್.

ಸಿ. ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣ.

ಡಿ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ.

ಉತ್ತರ‌ : ಎ

3. ಕ್ಷಯರೋಗಕ್ಕೆ ಸಂಬಂಧಿಸಿದ ಸರಿಯಾದ ಹೇಳಿಕೆಗಳನ್ನು ಗುರುತಿಸಿ?

1. ಪ್ರತಿ ವರ್ಷ ಮಾರ್ಚ್ 24ರಂದು ವಿಶ್ವ ಕ್ಷಯರೋಗ ದಿನಾಚರಣೆಯನ್ನು ಆಚರಿಸಲಾಗುತ್ತದೆ.

2. ಕ್ಷಯರೋಗಕ್ಕೆ ಕಾರಣವಾದ ಬ್ಯಾಕ್ಟೀರಿಯಾವನ್ನು ರಾಬರ್ಟ್ ಕೋಚ್ ಆವಿಷ್ಕರಿಸಿದರು.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮಾತ್ರ  ಬಿ. 2 ಮಾತ್ರ 

ಸಿ. 1 ಮತ್ತು 2  ಡಿ. ಮೇಲಿನ ಎರಡು ಹೇಳಿಕೆಗಳು ತಪ್ಪಾಗಿವೆ.

ಉತ್ತರ : ಸಿ

4. ವಿಶ್ವ ಜಲ ದಿನಾಚರಣೆಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ?

1. ವಿಶ್ವ ಜಲ ದಿನಾಚರಣೆಯನ್ನು ಆಚರಿಸಲು 1992ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಿರ್ಣಯವನ್ನು ಅಂಗೀಕರಿಸಿತು.

2. ಮೊಟ್ಟಮೊದಲ ವಿಶ್ವ ಜಲ ದಿನಾಚರಣೆಯನ್ನು 1993ರಲ್ಲಿ ಪ್ರಾರಂಭಿಸಲಾಯಿತು.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮಾತ್ರ    ಬಿ. 2 ಮಾತ್ರ 

ಸಿ. 1 ಮತ್ತು 2  ಡಿ. ಮೇಲಿನ ಎರಡು ಹೇಳಿಕೆಗಳು ತಪ್ಪಾಗಿದೆ.

ಉತ್ತರ : ಸಿ

5. ಸಲಿಂಗ ವಿವಾಹವನ್ನು ಕೆಳಗಿನ ಯಾವ ಏಷ್ಯಾದ ರಾಷ್ಟ್ರಗಳಲ್ಲಿ ಕಾನೂನಾತ್ಮಕಗೊಳಿಸಲಾಗಿದೆ?

1. ನೇಪಾಳ

2. ತೈವಾನ್

3. ಚೀನಾ

4. ವಿಯೆಟ್ನಾಂ

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮತ್ತು 2  ಬಿ. 2 ಮತ್ತು 3 

ಸಿ. 3 ಮತ್ತು 4  ಡಿ. 2 ಮಾತ್ರ

ಉತ್ತರ : ಎ

6. ಕೆಳಗಿನ ಯಾವ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವ ಸಂಸ್ಥೆ ಮೊಟ್ಟಮೊದಲ ಜಾಗತಿಕ ನಿರ್ಣಯವನ್ನು ಅಂಗೀಕರಿಸಿದೆ?

ಎ. ಬ್ಲಾಕ್ ಚೈನ್ ತಂತ್ರಜ್ಞಾನ.

ಬಿ. ಕೃತಕ ಬುದ್ಧಿಮತ್ತೆ.

ಸಿ. ಇಂಟರ್‌ನೆಟ್‌ ಆಫ್ ಥಿಂಗ್ಸ್.

ಡಿ. ರೋಬೋಟಿಕ್ ತಂತ್ರಜ್ಞಾನ.

ಉತ್ತರ : ಬಿ

7. ಕೇಂದ್ರ ಸರ್ಕಾರ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು ಕೆಳಗಿನ ಯಾವ ರಾಜ್ಯಗಳಲ್ಲಿ ಆರು ತಿಂಗಳ ಅವಧಿಗೆ ವಿಸ್ತರಿಸಿದೆ?

1. ನಾಗಾಲ್ಯಾಂಡ್.

2. ಅರುಣಾಚಲ ಪ್ರದೇಶ.

3. ಅಸ್ಸಾಂ.

4. ಮೇಘಾಲಯ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮತ್ತು 2  ಬಿ. 3 ಮತ್ತು 4 

ಸಿ. 2 ಮತ್ತು 3  ಡಿ. 2 ಮಾತ್ರ

ಉತ್ತರ : ಎ

8. ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು ಕೆಳಗಿನ ಯಾವ ಕೇಂದ್ರ ಸರ್ಕಾರದ ಸಚಿವಾಲಯ ವಿಸ್ತರಿಸುವ ಅಧಿಕಾರ ಹೊಂದಿದೆ?

ಎ. ವಿದೇಶಾಂಗ ವ್ಯವಹಾರಗಳ ಸಚಿವಾಲಯ.

ಬಿ. ಆಂತರಿಕ ಭದ್ರತಾ ಸಚಿವಾಲಯ.

ಸಿ. ಸಾರ್ವಜನಿಕ ಭದ್ರತೆ ಸಚಿವಾಲಯ.

ಡಿ. ಗೃಹ ಸಚಿವಾಲಯ.

ಉತ್ತರ : ಡಿ

9. ‘ಭಾಷಾ ಅಟ್ಲಾಸ್’ ಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ?

1. ಭಾಷಾ ಅಟ್ಲಾಸ್ ಸಿದ್ಧಪಡಿಸಲು ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ ಪ್ರಸ್ತಾಪವನ್ನು ಸಲ್ಲಿಸಿದೆ.

2. ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ ಸಮಾಜ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.

3. ಭಾರತದಲ್ಲಿ ಪ್ರಸ್ತುತ 13 ವಿವಿಧ ಲಿಪಿಗಳು ಅಸ್ತಿತ್ವದಲ್ಲಿದೆ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮತ್ತು 3  ಬಿ. 2 ಮತ್ತು 3 

ಸಿ. 1 ಮತ್ತು 2  ಡಿ. 3 ಮಾತ್ರ

ಉತ್ತರ : ಎ

10. ಸಂಗೀತ ಕಲಾನಿಧಿ ಪ್ರಶಸ್ತಿಯನ್ನು ಕೆಳಗಿನ ಯಾವ ಸಂಸ್ಥೆ ನೀಡುತ್ತದೆ?

ಎ. ತಮಿಳುನಾಡು ಮ್ಯೂಸಿಕ್ ಅಕಾಡೆಮಿ.

ಬಿ. ಚೆನ್ನೈ ಮ್ಯೂಸಿಕ್ ಅಕಾಡೆಮಿ.

ಸಿ. ತಿರುವನಂತಪುರಂ ಮ್ಯೂಸಿಕ್ ಅಕಾಡೆಮಿ.

ಡಿ. ಮದ್ರಾಸ್ ಮ್ಯೂಸಿಕ್ ಅಕಾಡೆಮಿ.

ಉತ್ತರ : ಡಿ

11. ಅರಾವಳಿ ಪರ್ವತ ಶ್ರೇಣಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ.

1. ಅರಾವಳಿ ಪರ್ವತ ಶ್ರೇಣಿಯನ್ನು ಮಡಿಕೆ ಪರ್ವತಗಳು ಎಂದು ಪರಿಗಣಿಸಬಹುದು.

2. ಅರಾವಳಿ ಪರ್ವತ ಶ್ರೇಣಿ ಭಾರತದ ನಾಲ್ಕು ರಾಜ್ಯಗಳಲ್ಲಿ ಹಾದು ಹೋಗುತ್ತದೆ.

3. ಅರಾವಳಿ ಪರ್ವತ ಶ್ರೇಣಿಯ ಸರಾಸರಿ ಎತ್ತರ 600 ರಿಂದ 900 ಮೀಟರ್‌ನಷ್ಟು ಎಂದು ಪರಿಗಣಿಸಬಹುದು.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮಾತ್ರ ಬಿ. 2 ಮಾತ್ರ

ಸಿ. 1, 2 ಮತ್ತು 3 ಡಿ. 1 ಮತ್ತು 3

ಉತ್ತರ : ಸಿ

12. ಬಿಲ್ ಬುಡಕಟ್ಟು ಸಮುದಾಯಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ?

1. ಬಿಲ್ ಬುಡಕಟ್ಟು ಸಮುದಾಯದವರನ್ನು ದಕ್ಷಿಣ ಏಷ್ಯಾದ ಅತಿದೊಡ್ಡ ಬುಡಕಟ್ಟು ಎಂದು ಪರಿಗಣಿಸಲಾಗುತ್ತದೆ.

2. ಬಿಲ್ ಬುಡಕಟ್ಟು ಸಮುದಾಯದ ಜನರನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಬಹುದಾಗಿದೆ.

3. ಈ ಬುಡಕಟ್ಟಿಗೆ ಬಿಲ್ ಎನ್ನುವ ಪದ, ದ್ರಾವಿಡ ಭಾಷೆಯ ಬಿಲ್ಲು ಎನ್ನುವ ಪದದಿಂದ ಉಗಮವಾಗಿದೆ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮತ್ತು 3 ಬಿ. 2 ಮತ್ತು 3

ಸಿ. 1 ಮತ್ತು 2 ಡಿ. 3 ಮಾತ್ರ

ಉತ್ತರ : ಎ

13. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರದ ಹಂತದಲ್ಲಿ ಜವಾಹರ್ ಲಾಲ್ ನೆಹರೂ ಅವರು ಯಾರ ಸಲಹೆ ಮೇರೆಗೆ ಬುಡಕಟ್ಟು ಪಂಚಶೀಲ ಯೋಜನೆಯನ್ನು ಜಾರಿಗೆ ತಂದರು?

ಎ. ಬ್ರಿಟಿಷ್ ಮಾನವಶಾಸ್ತ್ರಜ್ಞ ವೆರಿಯರ್ ಎಲ್ವಿನ್.

ಬಿ. ಭಾರತೀಯ ಮಾನವಶಾಸ್ತ್ರಜ್ಞ ಎಂ.ಎನ್. ಶ್ರೀನಿವಾಸ್.

ಸಿ. ಯೋಗೇಂದ್ರ ಸಿಂಗ್.

ಡಿ. ಪ್ರೀತಮ್ ಛಡ್ಡಾ.

ಉತ್ತರ : ಎ

14. ಕೆಳಗಿನ ಯಾವ ಅಂಶಗಳನ್ನು ಬುಡಕಟ್ಟು ಪಂಚಶೀಲ ಯೋಜನೆಯ ಅಂಶಗಳೆಂದು ಪರಿಗಣಿಸಬಹುದು?

1. ಬುಡಕಟ್ಟು ಸಮುದಾಯಗಳ ಸಾಂಪ್ರದಾಯಿಕ ಕಲೆ ಮತ್ತು ಸಂಸ್ಕೃತಿ ಆಧಾರದ ಮೇಲೆ ಬುಡಕಟ್ಟು ಸಮುದಾಯಗಳನ್ನು ಅಭಿವೃದ್ಧಿಪಡಿಸುವುದು.

2. ಬುಡಕಟ್ಟು ಸಮುದಾಯಗಳ ಭೂಮಿಯ ಮೇಲಿನ ಹಕ್ಕುಗಳನ್ನು ಮತ್ತು ಅರಣ್ಯ ಹಕ್ಕುಗಳನ್ನು ಗೌರವಿಸುವುದು.

3. ಆಡಳಿತಾತ್ಮಕ ಯಂತ್ರವನ್ನು ನಿರ್ವಹಿಸಲು ಬುಡಕಟ್ಟು ಸಮುದಾಯದ ಜನರಿಗೆ ತರಬೇತಿಯನ್ನು ಕಲ್ಪಿಸುವುದು.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮಾತ್ರ ‌ ಬಿ. 2 ಮಾತ್ರ

ಸಿ. 1 ಮತ್ತು 2 ಡಿ. 1, 2 ಮತ್ತು 3

ಉತ್ತರ : ಡಿ

15. ಇತ್ತೀಚೆಗೆ ಚೀನಾದ ಯಾವ ಬಹುರಾಷ್ಟ್ರೀಯ ಕಂಪನಿ ವಿದ್ಯುತ್ ಚಾಲಿತ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಿದೆ?

ಎ. Xiaomi ಬಹುರಾಷ್ಟ್ರೀಯ ಕಂಪನಿ.

ಬಿ. ವಿವೋ ಬಹುರಾಷ್ಟ್ರೀಯ ಕಂಪನಿ.

ಸಿ. ಒಪ್ಪೋ ಬಹುರಾಷ್ಟ್ರೀಯ ಕಂಪನಿ.

ಡಿ. ಲಿಪಿಂಗ್ ಬಹುರಾಷ್ಟ್ರೀಯ ಕಂಪನಿ.

ಉತ್ತರ : ಎ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.