ADVERTISEMENT

ಶಿಕ್ಷಣ | ಪ್ರತಿಭಾನ್ವಿತರಿಗೆ ಅಮೆರಿಕ ವಿ.ವಿಗಳಲ್ಲಿ ಮುಕ್ತ ಪ್ರವೇಶ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2024, 23:30 IST
Last Updated 18 ಫೆಬ್ರುವರಿ 2024, 23:30 IST
<div class="paragraphs"><p>ಯುಎಸ್‌ ಕಾನ್ಸಲ್‌ ಜನರಲ್‌ ಕ್ರಿಸ್ಟೋಫರ್‌ ಹಾಡ್ಜಸ್‌</p></div>

ಯುಎಸ್‌ ಕಾನ್ಸಲ್‌ ಜನರಲ್‌ ಕ್ರಿಸ್ಟೋಫರ್‌ ಹಾಡ್ಜಸ್‌

   

ದಕ್ಷಿಣ ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕದ ವಿಶ್ವವಿದ್ಯಾಲಯಗಳು ಮುಕ್ತವಾಗಿವೆ. ಕಲಿಕೆಗೆ ಅಗತ್ಯದ ಸೌಲಭ್ಯಗಳನ್ನು ಒದಗಿಸುವಲ್ಲಿ ಒಕ್ಕೂಟ ರಾಷ್ಟ್ರವು ಸಾಧ್ಯ ಇರುವುದನ್ನೆಲ್ಲ ಮಾಡುತ್ತದೆ. ಭಾರತೀಯ ರಾಜ್ಯಗಳಲ್ಲಿ ದಕ್ಷಿಣದಿಂದಲೇ ಹೆಚ್ಚಿನ ವಿದ್ಯಾರ್ಥಿಗಳು ಅಮೆರಿಕಕ್ಕೆ ಬರುತ್ತಾರೆ. ಉನ್ನತ ಶಿಕ್ಷಣ ಉತ್ತೇಜನಕ್ಕೆಂದೇ ದಕ್ಷಿಣದ ರಾಜ್ಯಗಳಲ್ಲಿ ಶಿಕ್ಷಣ ಮೇಳಗಳನ್ನು ಆಯೋಜಿಸುತ್ತಿದ್ದೇವೆ ಎಂದು ಯುಎಸ್‌ ಕಾನ್ಸಲ್‌ ಜನರಲ್‌ ಕ್ರಿಸ್ಟೋಫರ್‌ ಹಾಡ್ಜಸ್‌ ಹೇಳಿದರು.

ಶಿಕ್ಷಣ ಮೇಳದ ಪ್ರಯುಕ್ತ ಈಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದ ಅವರು ಅಮೆರಿಕದ ವಿಶ್ವವಿದ್ಯಾಲಯಗಳು, ಶಿಕ್ಷಣ ಕ್ಷೇತ್ರದಲ್ಲಿರುವ ವಿಪುಲ ಅವಕಾಶಗಳ ಕುರಿತು ‘ಪ್ರಜಾವಾಣಿ’ ಜತೆಗೆ ಚರ್ಚಿಸಿದರು.

ADVERTISEMENT

 ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಜಗತ್ತಿನ ಎಲ್ಲೆಡೆಯ ವಿದ್ಯಾರ್ಥಿಗಳೂ ಕಾಣಸಿಗುತ್ತಾರೆ. ಅಮೆರಿಕದ ಶಿಕ್ಷಣದ ಗುಣಮಟ್ಟ, ವೈವಿಧ್ಯತೆ ಮತ್ತು ಹೊಸತನವನ್ನು ಸೃಷ್ಟಿಸುತ್ತ ಹೋಗುತ್ತದೆ. ಕಾಲಕಳೆದಂತೆ ಪ್ರತಿಯೊಂದನ್ನೂ ಹೊಸದಾಗಿಸುವ ಉತ್ಸಾಹದಿಂದಲೇ ಇಲ್ಲಿಯ ಶಿಕ್ಷಣದ ಗುಣಮಟ್ಟವು ಹೆಚ್ಚಿನ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ. ಇಲ್ಲಿ ಸಂಶೋಧನೆ ಮತ್ತು ಪ್ರಾಯೋಗಿಕ ಆಧಾರದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ.

ವಿದ್ಯಾರ್ಥಿಗಳು ಕ್ರಿಯಾಶೀಲರಾಗಿರಲು, ಹೊಸತನ್ನು ಕಲಿಯಲು, ಹೊಸ ವಿಷಯಗಳನ್ನು ಅನ್ವೇಷಿಸಲು ಪ್ರೇರೇಪಿಸುವ ಶಿಕ್ಷಣ ಪದ್ಧತಿಯನ್ನು ಅಲ್ಲಿ ಅನುಸರಿಸುವುದರಿಂದ ಜಾಗತಿಕ ಮನ್ನಣೆ ಇದೆ. ಇದೀಗ ಕ್ವಾಂಟಮ್‌ ಥಿಯರಿ, ಆಧುನಿಕ ತಂತ್ರಜ್ಞಾನ, ಯಾಂತ್ರಿಕ ಬುದ್ಧಿಮತ್ತೆ, ಹಸಿರು ಹೈಡ್ರೋಜನ್‌ನಂತಹ ನೂತನ ಕ್ಷೇತ್ರಗಳಲ್ಲಿ ಅಧ್ಯಯನ ನಡೆಸಲು ಭಾರತ ಯುಎಸ್‌ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಈ ಕ್ಷೇತ್ರಗಳಲ್ಲಿ ಹೂಡಿಕೆಗಳನ್ನು ಉತ್ತೇಜಿಸುತ್ತದೆ ಎಂದರು.

ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳನ್ನಷ್ಟೆ ಅಲ್ಲದೆ, ಮಾನವೀಯ ವಿಜ್ಞಾನ ಕ್ಷೇತ್ರದಲ್ಲಿಯೂ ಯುಎಸ್‌ ವಿಶ್ವವಿದ್ಯಾಲಯಗಳು ಹೆಚ್ಚಿನ ಅವಕಾಶಗಳನ್ನು ನೀಡುತ್ತಿವೆ. ದಿನನಿತ್ಯದ ಸಮಸ್ಯೆಗಳಿಗೆ ಸ್ಪಂದಿಸುವಂಥ ಹೊಸ ಹೊಸ ಪಠ್ಯಕ್ರಮವನ್ನು ಪರಿಚಯಿಸುವುದು ನಮ್ಮ ವಿಶ್ವವಿದ್ಯಾಲಯಗಳ ವಿಶೇಷವಾಗಿದೆ. ಇಲ್ಲಿಂದ ಬರುವ ಪ್ರತಿಭಾನ್ವಿತ ವಿದ್ಯಾರ್ಥಿಗಳು, ಮಾನವ ಸಂಪನ್ಮೂಲವಾಗಿ ರೂಪ ತಾಳುತ್ತ ಹೋಗುತ್ತಾರೆ.  ಚೆನ್ನೈನಲ್ಲಿರುವ ಯುಎಸ್‌ ಕಾನ್ಸುಲೇಟ್‌ ಜನರಲ್‌ ಅಮೆರಿಕದ ವಿಶ್ವವಿದ್ಯಾಲಯಗಳನ್ನು ದಕ್ಷಿಣ ಭಾರತದ ವ್ಯಾಪಾರ ಮತ್ತು ಸಂಶೋಧನಾ ಪಾಲುದಾರರೊಂದಿಗೆ ಸಂಪರ್ಕಿಸುತ್ತಿದೆ ಎಂದರು. ಯು ಎಸ್ ಕಾನ್ಸುಲೇಟ್ ಜನರಲ್ ಚೆನ್ನೈ ನಮ್ಮ ಅಧಿಕೃತ @EducationUSAindia ನೊಂದಿಗೆ ತಮ್ಮ #StudyInTheUS ಕನಸನ್ನು ಯೋಜಿಸಲು ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದೆ.

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸ್ನಾತಕೋತ್ತರ ಅಥವಾ ಡಾಕ್ಟರೇಟ್ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಇಲ್ಲಿ ಸದಾ ಮುಕ್ತ ಅವಕಾಶವಿದೆ. ಉಳಿದ ದೇಶಗಳಿಗೆ ಹೋಲಿಸಿದರೆ ಭಾರತೀಯ ವಿದ್ಯಾರ್ಥಿಗಳು ಕಷ್ಟ ಸಹಿಷ್ಣುಗಳು. ಉತ್ಸಾಹಿಗಳು, ಮರಳಿ ಪ್ರಯತ್ನ ಮಾಡುವ ಪ್ರಯತ್ನಶೀಲರು. ಉತ್ತಮ ಮೂಲ ಸೌಲಭ್ಯ ಇರುವ ವಿಶ್ವವಿದ್ಯಾಲಯಗಳಿಗೆ, ಪ್ರತಿಭಾನ್ವಿತ ವಿದ್ಯಾರ್ಥಿಗಳು ಬರಲಿ ಎಂಬುದು ಶಿಕ್ಷಣ ಮೇಳಗಳ ಉದ್ದೇಶ. ಈ ಮೇಳಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿದ್ದರೆ EducationUSA ವೆಬ್‌ಸೈಟ್‌ ಸಾಕಷ್ಟು ಮಾಹಿತಿ ಒದಗಿಸಿಕೊಡುತ್ತದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ವಾಗತ ಎನ್ನುತ್ತ ತಮ್ಮ ಮಾತು ಮುಗಿಸಿದರು.

ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಅಮೆರಿಕದಲ್ಲಿ ಅಧ್ಯಯನ ಮಾಡುವುದು ಹೇಗೆ ಎಂಬುದರ ಕುರಿತು ಹೆಚ್ಚುವರಿ ಸಂಪನ್ಮೂಲಗಳಿಗಾಗಿ,  https://www.usief.org.in/Study-in-the-US.aspx ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಕ್ರಿಸ್ಟೋಫರ್‌ ಹಾಡ್ಜಸ್‌
2022ರಿಂದೀಚೆಗೆ ಚೆನ್ನೈ ಯುಎಸ್‌ ಕಾನ್ಸುಲೆಟ್‌ ಜನರಲ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ, ತಮಿಳುನಾಡು, ಕೇರಳ, ಪುದುಚೆರಿ, ಅಂಡಮಾನ್‌ ನಿಕೋಬಾರ್‌ ದ್ವೀಪ ಸಮೂಹಗಳು ಇವರ ಕಾರ್ಯವ್ಯಾಪ್ತಿಗೆ ಬರುತ್ತವೆ. ಇದಕ್ಕೆ ಮೊದಲು Coordinator for Afghan Relocation Efforts (CARE)ಗೆ ಹಿರಿಯ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. 2000ದಿಂದ ವಿದೇಶಾಂಗ ಸೇವೆಯ ಕ್ಷೇತ್ರದಲ್ಲಿದ್ದಾರೆ. ಜೆರುಸಲೆಮ್‌, ಹನೊಯಿ, ವಿಯಟ್ನಾಂ, ಅಕ್ರಾ, ಘಾನಾ ರಾಷ್ಟ್ರಗಳಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿಯೂ, ಆಸ್ಟ್ರಿಯಾ, ಜರ್ಮನಿ, ಸ್ವಿಟ್ಜರ್ಲೆಂಡ್‌ ಮತ್ತು ಯುರೋಪಿಯನ್‌ ವಿದೇಶಾಂಗ ಇಲಾಖೆಯಲ್ಲಿ ಉಪನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.