ADVERTISEMENT

ಸ್ಪರ್ಧಾ ವಾಣಿ: ಕರ್ನಾಟಕದಲ್ಲಿ ಆರಂಭವಾದ ಪ್ರಮುಖ ಬ್ಯಾಂಕುಗಳು

ಪ್ರಜಾವಾಣಿ ವಿಶೇಷ
Published 11 ಡಿಸೆಂಬರ್ 2024, 20:33 IST
Last Updated 11 ಡಿಸೆಂಬರ್ 2024, 20:33 IST
   

ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್

ಸ್ಥಾಪನೆ - ಮೈಸೂರು ನಗರದಲ್ಲಿ ಈ ಬ್ಯಾಂಕನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯ ಸಂದರ್ಭದಲ್ಲಿ 1913 ರಲ್ಲಿ ಸ್ಥಾಪಿಸಲಾಯಿತು.
ಮೈಸೂರಿನಲ್ಲಿ ಸ್ಥಾಪನೆಯಾದ ನಂತರ ಬೆಂಗಳೂರಿನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಮುಂದಿನ ದಿನಗಳಲ್ಲಿ ಪ್ರಾರಂಭಿಸಲಾಯಿತು.
ಪ್ರಾರಂಭವಾದ ಹಂತದಲ್ಲಿ ಈ ಬ್ಯಾಂಕನ್ನು ಬ್ಯಾಂಕ್ ಆಫ್ ಮೈಸೂರ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು.
1954 ರಲ್ಲಿ ಈ ಬ್ಯಾಂಕನ್ನು ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಎಂದು ಮರುನಾಮಕರಣ ಮಾಡಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹವರ್ತಿ ಬ್ಯಾಂಕ್ ಆಗಿ ಸ್ಥಾಪಿಸಲಾಯಿತು.
ಸರ್ ಎಂ ವಿಶ್ವೇಶ್ವರಯ್ಯ ಅವರ ಅಧ್ಯಕ್ಷತೆಯಲ್ಲಿ ಸ್ಥಾಪಿಸಿದ್ದ ಬ್ಯಾಂಕಿಂಗ್ ಸಮಿತಿಯ ಶಿಫಾರಸ್ಸಿನ ಮೇರೆಗೆ ಬ್ಯಾಂಕ್ ಆಫ್ ಮೈಸೂರ್ ಲಿಮಿಟೆಡ್ ಸ್ಥಾಪಿಸಲಾಯಿತು.
ಏಪ್ರಿಲ್ 1, 2017 ರಂದು ಈ ಬ್ಯಾಂಕನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನಗೊಳಿಸಲಾಯಿತು.
ವಿಶೇಷ ಸೂಚನೆ - ಬೆಂಗಳೂರಿನಲ್ಲಿ ಮುಖ್ಯ ಕಚೇರಿಯನ್ನು 1913 ರಲ್ಲಿ ಪ್ರಾರಂಭಿಸಲಾಯಿತು.


ಕರ್ನಾಟಕ ಬ್ಯಾಂಕ್ ಲಿಮಿಟೆಡ್

ADVERTISEMENT

ಸ್ಥಾಪನೆ - ಫೆಬ್ರವರಿ 18, 1924.
ಪ್ರಧಾನ ಕಛೇರಿ - ಮಂಗಳೂರು.
ಧ್ಯೇಯವಾಕ್ಯ - ಭಾರತದಾದ್ಯಂತ ನಿಮ್ಮ ಕುಟುಂಬದ ಬ್ಯಾಂಕ್ (Your family bank across India)
ಕರ್ನಾಟಕ ಬ್ಯಾಂಕ್ ಖಾಸಗಿ ವಲಯದ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಭಾರತೀಯ ರಿಸರ್ವ್ ಬ್ಯಾಂಕ್ ಇದಕ್ಕೆ ವಾಣಿಜ್ಯ ಬ್ಯಾಂಕ್ ಎನ್ನುವ ಸ್ಥಾನಮಾನವನ್ನು ಕಲ್ಪಿಸಿದೆ.
ವಿಶೇಷ ಸೂಚನೆ - ಮಹಿಳಾ ಸಿಬ್ಬಂದಿಗಳನ್ನು ಮಾತ್ರ ಹೊಂದಿರುವ ಕರ್ನಾಟಕ ಬ್ಯಾಂಕಿನ ಮೊದಲ ಶಾಖೆಯನ್ನು ಬೆಂಗಳೂರಿನ ಬಸವನಗುಡಿಯಲ್ಲಿ ಸ್ಥಾಪಿಸಲಾಗಿದೆ.

ಬ್ಯಾಂಕಿನ ಸಂಸ್ಥಾಪಕರು - ವ್ಯಾಸರಾಯ ಆಚಾರ್ ಮತ್ತು ಕೆ ಸೂರ್ಯನಾರಾಯಣ ಅಡಿಗ.

ವಿಜಯ ಬ್ಯಾಂಕ್

ಸ್ಥಾಪನೆ - ಅಕ್ಟೋಬರ್ 23, 1931 (ಮಂಗಳೂರಿನಲ್ಲಿ ಸ್ಥಾಪನೆಯಾಯಿತು).
ಕೇಂದ್ರ ಕಚೇರಿ - ಬೆಂಗಳೂರು.
ಎಸ್ ಬಿ ಶೆಟ್ಟಿ ಹಾಗೂ ಕೆಲ ಪ್ರಗತಿಪರ ರೈತರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ಯಾಂಕಿಂಗ್ ಹವ್ಯಾಸವನ್ನು ಮತ್ತು ಉದ್ದಿಮೆ ಶೀಲತೆಯನ್ನು ರೈತರಲ್ಲಿ ಉತ್ತೇಜಿಸಲು ಮತ್ತು ರೈತರ ಅವಶ್ಯಕತೆಗಳಿಗೆ ಅನುಗುಣವಾಗಿ ಸಾಲದ ಸವಲತ್ತನ್ನು ಕಲ್ಪಿಸುವ ಉದ್ದೇಶದಿಂದ ಈ ಬ್ಯಾಂಕನ್ನು ಸ್ಥಾಪಿಸಿದರು.
1980 ಏಪ್ರಿಲ್ 15 ರಂದು ವಿಜಯ ಬ್ಯಾಂಕ್ ರಾಷ್ಟ್ರೀಕರಣವಾಯಿತು.
ವಿಜಯ ಬ್ಯಾಂಕ್, ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನವಾಗುವ ಮುನ್ನ ಕೆಲ ಹೆಗ್ಗಳಿಕೆಗಳನ್ನು ಹೊಂದಿದ್ದು, 100 ಡಿಜಿಟಲ್ ಶಾಖೆ, 100 ಡಿಜಿಟಲ್ ಹಳ್ಳಿ ಮತ್ತು 100 ಎಟಿಎಂ ಗಳು ಎನ್ನುವ ಯೋಜನೆಯನ್ನು 2017 ರಲ್ಲಿ ಜಾರಿಗೆ ತಂದಿದ್ದು, ಡಿಜಿಟಲೀಕರಣ ಪ್ರಕ್ರಿಯೆಯನ್ನು 2017 ರಲ್ಲಿಯೇ ಪ್ರಾರಂಭಿಸಿತು. ಇದರೊಂದಿಗೆ ವಿಜಯ ಬ್ಯಾಂಕಿನ ಉತ್ತೇಜನದಿಂದ ಮಂಡ್ಯ ಜಿಲ್ಲೆಯ ಚಾಂದ್ಗಲ್ಲು ಗ್ರಾಮವನ್ನು ಕರ್ನಾಟಕದ ಮೊದಲ ಡಿಜಿಟಲ್ ಗ್ರಾಮವಾಗಿ 2017 ರಲ್ಲಿ ಉದ್ಘಾಟಿಸಲಾಯಿತು.
ಏಪ್ರಿಲ್ 1, 2019 ರಂದು ವಿಜಯ ಬ್ಯಾಂಕ್ ಅನ್ನು ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನಗೊಳಿಸಲಾಯಿತು.

ಸಿಂಡಿಕೇಟ್ ಬ್ಯಾಂಕ್

1925 ರಲ್ಲಿ, ಕೆನರಾ ಇಂಡಸ್ಟ್ರಿಯಲ್ ಅಂಡ್ ಬ್ಯಾಂಕಿಂಗ್ ಸಿಂಡಿಕೇಟ್ ಲಿಮಿಟೆಡ್ ಎನ್ನುವ ಹೆಸರಿನಲ್ಲಿ ಈ ಬ್ಯಾಂಕನ್ನು ಉಡುಪಿಯಲ್ಲಿ ಸ್ಥಾಪಿಸಲಾಯಿತು.
ಸಂಸ್ಥಾಪಕರು - ಉಪೇಂದ್ರ ಅನಂತ ಪೈ, ವಾಮನ್ ಶ್ರೀನಿವಾಸ್ ಕೊಡವ ಮತ್ತು ಡಾ. ಟಿ. ಎಮ್. ಎ. ಪೈ.
ಕೇಂದ್ರ ಕಚೇರಿ - ಮಣಿಪಾಲ್
ಜುಲೈ 19, 1969 ರಲ್ಲಿ ಸಿಂಡಿಕೇಟ್ ಬ್ಯಾಂಕ್ ಅನ್ನು ರಾಷ್ಟ್ರೀಕರಣಗೊಳಿಸಲಾಯಿತು.
ಬ್ಯಾಂಕಿನ ವಿಶೇಷತೆಗಳು

ಭಾರತದಲ್ಲಿ ಪಿಗ್ಮಿ ಸ್ಕೀಮ್ ಅನ್ನು ಜಾರಿಗೆ ತಂದ ಮೊದಲ ಬ್ಯಾಂಕ್ ಎನ್ನುವ ಹೆಗ್ಗಳಿಕೆ.
1975 ರಲ್ಲಿ ಉತ್ತರ ಪ್ರದೇಶದ ಔರಂಗಬಾದ್ ಜಿಲ್ಲೆಯಲ್ಲಿ ಭಾರತದ ಮೊದಲ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗೆ ಪ್ರಾಯೋಜಕತ್ವವನ್ನು ನೀಡಿ ಸ್ಥಾಪಿಸಲಾಯಿತು.
2020 ಏಪ್ರಿಲ್ 1 ರಂದು ಸಿಂಡಿಕೇಟ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್ ನ ಅಡಿಯಲ್ಲಿ ವಿಲೀನಗೊಳಿಸಲಾಗಿದೆ.


ಕೆನರಾ ಬ್ಯಾಂಕ್

ಸ್ಥಾಪನೆಯಾದ ವರ್ಷ - 1906.
ಹಿಂದೂ ಶಾಶ್ವತ ನಿಧಿ ಎನ್ನುವ ಹೆಸರಿನಲ್ಲಿ ಈ ಬ್ಯಾಂಕನ್ನು ಮಂಗಳೂರಿನಲ್ಲಿ ಸ್ಥಾಪಿಸಲಾಯಿತು.
ಸಂಸ್ಥಾಪಕರು – ಎ. ಸುಬ್ಬರಾವ್ ಪೈ.
1910 ರಲ್ಲಿ ಕೆನರಾ ಬ್ಯಾಂಕ್ ಲಿಮಿಟೆಡ್ ಎಂದು ಮರುನಾಮಕರಣ.
ಜುಲೈ 19, 1969 ರಂದು ಕೆನರಾ ಬ್ಯಾಂಕ್ ಎಂದು ಮರುನಾಮಕರಣವಾಗಿ ರಾಷ್ಟ್ರೀಕರಣವಾಯಿತು.

ಕಾರ್ಪೊರೇಷನ್ ಬ್ಯಾಂಕ್

ಸ್ಥಾಪನೆಯ ವರ್ಷ- 1906.
ಈ ಬ್ಯಾಂಕನ್ನು ಉಡುಪಿಯಲ್ಲಿ ಸ್ಥಾಪಿಸಲಾಯಿತು.
ಕೇಂದ್ರ ಕಚೇರಿ - ಮಂಗಳೂರು.
ಏಪ್ರಿಲ್ 15, 1980 ರಂದು ಈ ಬ್ಯಾಂಕನ್ನು ರಾಷ್ಟ್ರೀಕರಣಗೊಳಿಸಲಾಯಿತು.
ಏಪ್ರಿಲ್ 1, 2020 ರಲ್ಲಿ ಈ ಬ್ಯಾಂಕನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಡಿಯಲ್ಲಿ ವಿಲೀನಗೊಳಿಸಲಾಗಿದೆ.

ವೈಶ್ಯ ಬ್ಯಾಂಕ್

ಸ್ಥಾಪನೆಯ ವರ್ಷ - 1930.
ಸ್ಥಾಪನೆಯಾದ ಸ್ಥಳ - ಬೆಂಗಳೂರು.
ಕೇಂದ್ರ ಕಚೇರಿ - ಬೆಂಗಳೂರು.
2002 ರಿಂದ ವೈಶ್ಯ ಬ್ಯಾಂಕ್ ಐ ಎನ್ ಜಿ ಸಂಸ್ಥೆಯ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು ಇದರ ಹೆಸರನ್ನು ಐ ಎನ್ ಜಿ ವೈಶ್ಯ ಬ್ಯಾಂಕ್ ಎಂದು ಮರುನಾಮಕರಣ ಮಾಡಲಾಗಿದೆ.
ಕರ್ನಾಟಕದಲ್ಲಿ ಪ್ರಾರಂಭವಾದ ಬಹುತೇಕ ಬ್ಯಾಂಕುಗಳು ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಮಂಗಳೂರಿನಲ್ಲಿ ಸ್ಥಾಪನೆಯಾದ ಕಾರಣದಿಂದ ಮಂಗಳೂರು ಜಿಲ್ಲೆಯನ್ನು "ಭಾರತದ ಬ್ಯಾಂಕಿಂಗ್ ತೊಟ್ಟಿಲು" (The cradle of India) ಎಂದು ಕರೆಯಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.