ADVERTISEMENT

ಜೆ‍ಎನ್ ಟಾಟಾ ಎಂಡೋಮೆಂಟ್ ಲೋನ್ ಸ್ಕಾಲರ್‌ಷಿಪ್

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 20:30 IST
Last Updated 29 ಜನವರಿ 2023, 20:30 IST
   

ಜೆ‍ಎನ್ ಟಾಟಾ ಎಂಡೋಮೆಂಟ್ ಲೋನ್ ಸ್ಕಾಲರ್‌ಷಿಪ್ 2023-24
ವಿವರ: ವಿದೇಶದಲ್ಲಿ ಉನ್ನತ ಅಧ್ಯಯನ ಮುಂದುವರಿಸಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಂದ ಜೆಎನ್‌ ಟಾಟಾ ಎಂಡೊಮೆಂಟ್‌, ಲೋನ್‌ ಸ್ಕಾಲರ್‌‌‌‍ಷಿಪ್‌ಗಾಗಿ ಅರ್ಜಿ ಆಹ್ವಾನಿಸಿದೆ. ಈ ಲೋನ್ ಸ್ಕಾಲರ್‌ಶಿಪ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಭಾಗಶಃ ‘ಟ್ರಾವೆಲ್ ಗ್ರಾಂಟ್’ ಮತ್ತು ‘ಗಿಫ್ಟ್ ಅವಾರ್ಡ್‌’ಗೆ ಶಿಫಾರಸು ಮಾಡಬಹುದಾಗಿದ್ದು ಇದು ಅವರ ಸಾಗರೋತ್ತರ ಅಧ್ಯಯನದಲ್ಲಿನ ಶೈಕ್ಷಣಿಕ ಕಾರ್ಯಕ್ಷಮತೆಗೆ ಸಂಬಂಧಿಸಿರುತ್ತದೆ.


ಅರ್ಹತೆ : ಕನಿಷ್ಠ ಒಂದು ಪದವಿಯನ್ನು ಪೂರ್ಣಗೊಳಿಸಿದ ಭಾರತೀಯ ಪ್ರಜೆಗಳಿಗೆ ಅಥವಾ ಭಾರತದಲ್ಲಿನ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಕಾಲೇಜು/ಸಂಸ್ಥೆಯಲ್ಲಿ ಯಾವುದೇ ಪದವಿ ಕೋರ್ಸ್‌ನ ಅಂತಿಮ ವರ್ಷದಲ್ಲಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ವಿದೇಶದಲ್ಲಿ ಸ್ನಾತಕೋತ್ತರ/ಡಾಕ್ಟರೇಟ್/ಪೋಸ್ಟ್‌ ಡಾಕ್ಟರಲ್ ಅಧ್ಯಯನಗಳನ್ನು ಮುಂದುವರಿಸಲು ಸಿದ್ಧರಿರಬೇಕು.

ADVERTISEMENT

2023ರ ಕೊನೆಯಲ್ಲಿ ಓದುತ್ತಿರುವ ಮತ್ತು ಸಾಗರೋತ್ತರ ಅಧ್ಯಯನದ ಎರಡನೇ ವರ್ಷಕ್ಕೆ (2024) ಪ್ರವೇಶಿಸುತ್ತಿರುವ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಕೋರ್ಸ್‌ನ ಕನಿಷ್ಠ ಅವಧಿಯು 2 ವರ್ಷಗಳಾಗಿದ್ದರೆ ಮತ್ತು ಲೋನ್ ಸ್ಕಾಲರ್‌‌‌ಶಿಪ್ ನೀಡುವ ವೇಳೆ ಕೋರ್ಸ್‌ ಪೂರ್ಣಗೊಳಿಸಲು ಕನಿಷ್ಠ ಒಂದು ಶೈಕ್ಷಣಿಕ ವರ್ಷ ಬಾಕಿ ಇದ್ದವರಿಗೆ ಮಾತ್ರ ಇದು ಅನ್ವಯಿಸುತ್ತದೆ.

ವಿದ್ಯಾರ್ಥಿಗಳು ತಮ್ಮ ಪದವಿ ಅಥವಾ ಸ್ನಾತಕೋತ್ತರ ಅಧ್ಯಯನದಲ್ಲಿ ಸರಾಸರಿ ಕನಿಷ್ಠ ಶೇ 60 ಅಂಕಗಳನ್ನು ಗಳಿಸಿರಬೇಕು.

ಅಭ್ಯರ್ಥಿಗಳು ಜೂನ್ 30, 2023ಕ್ಕೆ 45 ವರ್ಷಗಳಿಗಿಂತ ಹೆಚ್ಚು ವಯಸ್ಸಾಗಿರಬಾರದು.

ಆರ್ಥಿಕ ಸಹಾಯ: ₹ 10 ಲಕ್ಷದವರೆಗೆ
ಅರ್ಜಿ ಸಲ್ಲಿಕೆಗೆ ಕೊನೆ ದಿನ: 07-03-2023
ಅರ್ಜಿ ಸಲ್ಲಿಸುವ ವಿಧಾನ : ಆನ್‌ಲೈನ್‌

ಮಾಹಿತಿಗೆ: Short Url: www.b4s.in/praja/JNT6

ಕೃಪೆ: www.Buddy4Study.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.