ADVERTISEMENT

598 ಕನ್ನಡ ಶಾಲೆಗಳಲ್ಲಿ ಶೂನ್ಯ ದಾಖಲಾತಿ

ಹಾಸನದಲ್ಲೇ ಅಧಿಕ– ಶಾಲೆಗಳು ಕ್ರಮೇಣ ಮುಚ್ಚುವ ಆತಂಕ

ಎಂ.ಜಿ.ಬಾಲಕೃಷ್ಣ
Published 3 ಫೆಬ್ರುವರಿ 2020, 19:45 IST
Last Updated 3 ಫೆಬ್ರುವರಿ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ಬೆಂಗಳೂರು:2019–20ನೇ ಸಾಲಿನಲ್ಲಿ ರಾಜ್ಯದಲ್ಲಿ 598 ಸರ್ಕಾರಿ ಕನ್ನಡ ಶಾಲೆಗಳಲ್ಲಿಒಬ್ಬನೇ ಒಬ್ಬ ವಿದ್ಯಾರ್ಥಿಯ ದಾಖಲಾತಿಯೂ ಆಗಿಲ್ಲ. ಕ್ರಮೇಣ ಈ ಶಾಲೆಗಳು ಕಾಯಂ ಆಗಿ ಮುಚ್ಚುವ ಆತಂಕಕ್ಕೆ ಸಿಲುಕಿವೆ.

ಹಾಸನ ಜಿಲ್ಲೆಯಲ್ಲಿ 129 ಕಿರಿಯ ಪ್ರಾಥಮಿಕ ಶಾಲೆಗಳು, 14 ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ 1
ಪ್ರೌಢಶಾಲೆಯಲ್ಲಿ ಒಂದು ದಾಖಲಾತಿಯೂ ಆಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಮಾಹಿತಿಯಿಂದ ಬಹಿರಂಗವಾಗಿದೆ.

ತುಮಕೂರು ಜಿಲ್ಲೆಯಲ್ಲಿ 40 ಕಿರಿಯ ಪ್ರಾಥಮಿಕ, 3 ಹಿರಿಯ ಪ್ರಾಥಮಿಕ ಹಾಗೂ 1 ಪ್ರೌಢಶಾಲೆಯಲ್ಲಿ ಪ್ರವೇಶಾತಿ ನಡೆದಿಲ್ಲ. ಉತ್ತರ ಕನ್ನಡ, ಶಿವಮೊಗ್ಗ ದಲ್ಲಿ ತಲಾ 37, ಕಲಬುರ್ಗಿಯಲ್ಲಿ 24, ಕೋಲಾರದಲ್ಲಿ 23, ಚಿಕ್ಕಬಳ್ಳಾಪುರದಲ್ಲಿ 21, ಚಿಕ್ಕಮಗಳೂರಿನಲ್ಲಿ 17, ಉಡುಪಿ, ಬೆಳಗಾವಿ, ಚಾಮರಾಜನಗರದಲ್ಲಿ ತಲಾ14, ಕೊಡಗಿನಲ್ಲಿ13,ಚಿಕ್ಕೋಡಿ, ಚಿತ್ರದುರ್ಗದಲ್ಲಿ ತಲಾ11 ಹಾಗೂ ವಿಜಯಪುರ, ಬೆಂಗಳೂರು ಗ್ರಾಮಾಂತರದಲ್ಲಿತಲಾ 10 ಕಿರಿಯ ಪ್ರಾಥಮಿಕ ಶಾಲೆಗಳಿಗೆ ಮಕ್ಕಳು ಪ್ರವೇಶ ಪಡೆದಿಲ್ಲ.

ADVERTISEMENT

ಮೂಲ ತಿಳಿಯಿರಿ: ‘ಶೂನ್ಯ ದಾಖಲಾತಿ ಎಂದರೆ ಆ ಭಾಗದಲ್ಲಿಮಕ್ಕಳಿಲ್ಲ ಅಂತಲ್ಲ, ಸರ್ಕಾರಿ ಶಾಲೆಗೆ ಸೇರುತ್ತಿಲ್ಲ ಅಷ್ಟೇ. ಅತ್ಯಂತ ಅರ್ಹ ಶಿಕ್ಷಕರೇ ಇರುವ ಸರ್ಕಾರಿ ಶಾಲೆಗೆ ಮಕ್ಕಳು ಯಾಕೆ ಬರುತ್ತಿಲ್ಲ ಎಂಬುದನ್ನು ಸರ್ಕಾರ ಚಿಂತಿಸಿದರೆ ಮತ್ತು ಸಮಸ್ಯೆ ಬಗೆಹರಿಸುವತ್ತ ಗಮನ ಹರಿಸಿದರೆ ಪರಿಸ್ಥಿತಿ ಸುಧಾರಿಸಬಹುದು, ಇಲ್ಲವಾದರೆ ಇಂತಹ ಶಾಲೆಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಅಪಾಯ ಇದೆ’ ಎಂದು ಶಿಕ್ಷಣ ತಜ್ಞ ಡಾ.ವಿ.ಪಿ.ನಿರಂಜನಾರಾಧ್ಯ ಹೇಳಿದರು.

ಇಂಗ್ಲಿಷ್‌ ಮಾಧ್ಯಮ ಬೇಡ:ತಿಂಗಳ ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಪತ್ರವೊಂದನ್ನು ಬರೆದಿದ್ದ ಮೈಸೂರಿನ ಕನ್ನಡ ಕ್ರಿಯಾ ಸಮಿತಿಯವರು, ರಾಜ್ಯದಲ್ಲಿ 1 ಸಾವಿರ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸಿದ್ದರೂ, ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ ನಿರೀಕ್ಷೆಯ 30 ಸಾವಿರ ಬದಲಿಗೆ26 ಸಾವಿರ ಮಾತ್ರ. ಹೀಗಾಗಿ ಇಂಗ್ಲಿಷ್‌ ಮಾಧ್ಯಮಕ್ಕೆ ಬಾರಿ ಬೇಡಿಕೆ ಇದೆ ಎಂಬುದು ಸುಳ್ಳು ಎಂದಿದ್ದರು.
ಇದೇ ಹೊತ್ತಲ್ಲಿ ಶೂನ್ಯ ದಾಖಲಾತಿಯ ಮಾಹಿತಿಯೂ ಹೊರಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.