ADVERTISEMENT

‘ಟೆಕ್ನಿಕಲ್ ರೈಟರ್ ಆಗುವಾಸೆ’

ಅನ್ನಪೂರ್ಣ ಮೂರ್ತಿ
Published 9 ಸೆಪ್ಟೆಂಬರ್ 2018, 19:30 IST
Last Updated 9 ಸೆಪ್ಟೆಂಬರ್ 2018, 19:30 IST
ಅನ್ನಪೂರ್ಣ ಮೂರ್ತಿ
ಅನ್ನಪೂರ್ಣ ಮೂರ್ತಿ   

1. ನಾನು ಇಂಗ್ಲೀಷ್‌ನಲ್ಲಿ ಎಂ.ಎ. ಮಾಡಿದ್ದೇನೆ. ನನಗೆ ಟೆಕ್ನಿಕಲ್ ರೈಟಿಂಗ್ ಬಗ್ಗೆ ಮಾಹಿತಿ ಬೇಕು. ಇದರ ಸ್ಕೋಪ್ ಏನು?

ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಮಾಡಿ, ಟೆಕ್ನಿಕಲ್ ರೈಟಿಂಗ್ ಬಗ್ಗೆ ಆಸಕ್ತಿ ತೋರಿರುವುದು ಶ್ಲಾಘನೀಯ. ಲೇಬರ್ ಸ್ಯಾಟಿಸ್ಟಿಕ್ಸ್‌ ಪ್ರಕಾರ 2016 ರಿಂದ 2026ರ ವರೆಗೂ ಟೆಕ್ನಿಕಲ್ ರೈಟಿಂಗ್‌ಗೆ ಶೇ 11 ಬೆಳವಣಿಗೆಯ ಆಶ್ವಾಸನೆಯನ್ನು ನೀಡಿದ್ದಾರೆ. ಭಾರತದಲ್ಲಿ ಹಲವಾರು ಎಂ.ಎನ್.ಸಿ.ಎಸ್.ಗಳು ತಮ್ಮ ಕಚೇರಿಗಳನ್ನು ತೆರೆದಿರುವುದರಿಂದ ಉತ್ತಮ ಉದ್ಯೋಗಾವಕಾಶವಿದೆ. ಇಂಗ್ಲಿಷ್‌ನಲ್ಲಿ ಪರಿಣತಿ ಪಡೆದವರಿಗೆ ಉದ್ಯೋಗಾವಕಾಶಗಳು ಎಲ್ಲೆಲ್ಲಿವೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲವೆನಿಸುತ್ತದೆ.

‘ಟೆಕ್ನಿಕಲ್ ರೈಟಿಂಗ್’ ಎಂದರೆ ಒಂದು ವಿಷಯವನ್ನು ಕಂಪನಿಯ ಒಳಗಿನ ಉದ್ಯೋಗಿಗಳಿಗೆ ಆಗಲಿ, ಬೇರೆ ಕಂಪನಿಗಳಿಗೇ ಆಗಲಿ, ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಒಂದು ವಿಷಯವನ್ನು ತಿಳಿಸುವುದೇ ಅವರ ಕೆಲಸ. ಟೆಕ್ನಿಕಲ್ ರೈಟರ್ಸ್‌ಗೆ ಈ ಮೊದಲು ಐ.ಟಿ. ಇಂಡಸ್ಟ್ರಿಯಲ್ಲಿ ಮಾತ್ರ ಉದ್ಯೋಗಾವಕಾಶವಿತ್ತು. ಈಗ ಡಿಫೆನ್ಸ್, ಏವಿಯೇಷನ್, ಆಯಿಲ್ ಅಂಡ್ ಗ್ಯಾಸ್ ಆಟೊಮೋಟೀವ್ಸ್, ಇಂಡಸ್ಟ್ರಿಯಲ್ ಮತ್ತು ಕನ್ಸ್ಯೂಮರ್‌, ಎಲೆಕ್ಟ್ರಾನಿಕ್ಸ್ ಮೆಡಿಕಲ್ ಡಿವೈಸಸ್, ಫಾರ್ಮಸಿಟಿಕಲ್ಸ್ ಬಯೋಟೆಕ್ನಾಲಜಿ – ಹೀಗೆ ವಿವಿಧ ಕ್ಷೇತ್ರಗಳಲ್ಲಿ ಇದರ ವ್ಯಾಪ್ತಿ ಹರಡಿದೆ.

ADVERTISEMENT

ನಿಮ್ಮಲ್ಲಿ ಒಳ್ಳೆಯ ಭಾಷಾಪರಿಜ್ಞಾನ, ವಿಷಯಸಂಗ್ರಹಣೆಯ ಕುತೂಹಲ, ಬರವಣಿಗೆಯಲ್ಲಿ ಪ್ರಬುದ್ಧತೆಗಳು ಇದ್ದರೆ ನೀವು ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಟೆಕ್ನಿಕಲ್ ರೈಟರ್‌ಗಳು ಯೂಸರ್ ಮ್ಯಾನಿಯಲ್‌ಗಳನ್ನು, ಆನ್‌ಲೈನ್ ಹೆಲ್ಪ್ ಫೈಲ್‌ಗಳನ್ನು, ಮಲ್ಟಿ ಮಿಡಿಯಾ ಪ್ರಸೆಂಟೇಷನ್‌ಗಳನ್ನು, ಸಾಫ್ಟ್‌ವೇರ್ ಇನ್ಸ್ಟಲೇಷನ್ ಗೈಡ್‌ಗಳನ್ನು ಬರೆಯುತ್ತಾರೆ.

ಇಂಗ್ಲಿಷ್‌ಜರ್ನಲಿಸಂನಲ್ಲಿ ಪದವಿ, ಮಾಸ್ ಕಮ್ಯೂನಿಕೇಷನ್ ಮತ್ತು ಟೆಕ್ನಿಕಲ್ ರೈಟಿಂಗ್ ತರಬೇತಿ ಮುಖ್ಯ. ಟೆಕ್ನಿಕಲ್ ರೈಟರ್ಸ್ Society of Technical Communication (STC)ಗೆ ಸದಸ್ಯತ್ವವನ್ನೂ ಪಡೆಯಬಹುದು.

ಹೆಚ್ಚಿನ ವಿವರಗಳಿಗೆ www.stc-india.org The Techanical Writer in India (TWIN) ಸದಸ್ಯತ್ವದಿಂದ ಹೆಚ್ಚಿನ ನೆಟ್‌ವರ್ಕ್ ಸಾಧ್ಯತೆ ಇದೆ. ವಿವರಗಳಿಗೆ www.twin-india.com ಟೆಕ್ನಿಕಲ್ ರೈಟರ್ಸ್‌ನ ಕೆಲಸಕ್ಕೆ ತೆಗೆದುಕೊಳ್ಳುವ ಹಲವು ಕಂಪನಿಗಳು ಇನ್ಫೋಸಿಸ್‌, ಒರೆಕಲ್ ಇಂಡಿಯಾ, ಕಂಪ್ಯೂಟರ್ ಅಸೋಸಿಯೇಟ್ಸ್, SAP Labs ಇನ್ನೂ ಅನೇಕ....⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.