ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ: ಕೋಟಕ್ ಸುರಕ್ಷಾ, ಡೀಕನ್ ಇಂಡಿಯಾ ಸ್ಕಾಲರ್‌ಷಿಪ್

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2024, 23:30 IST
Last Updated 29 ಡಿಸೆಂಬರ್ 2024, 23:30 IST
   

ಕೋಟಕ್ ಸುರಕ್ಷಾ ಸ್ಕಾಲರ್‌ಷಿಪ್

ಸಾಮಾನ್ಯ / ವೃತ್ತಿಪರ ಕೋರ್ಸ್‌ಗಳನ್ನು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಕೋಟಕ್ ಸೆಕ್ಯೂರಿಟಿಸ್‌ ಲಿಮಿಟೆಡ್ (ಕೆಎಸ್‌ಎಲ್) ಅರ್ಜಿಗಳನ್ನು ಆಹ್ವಾನಿಸುತ್ತದೆ
ಅರ್ಹತೆ:  ಅಭ್ಯರ್ಥಿಗಳು ಕನಿಷ್ಠ ಶೇ 55 ಅಂಕಗಳನ್ನು ಗಳಿಸಿರಬೇಕು.  ಕುಟುಂಬದ ವಾರ್ಷಿಕ ಆದಾಯವು ₹ 3,20,000 ಮೀರುವಂತಿರಬಾರದು.

ಆರ್ಥಿಕ ಸಹಾಯ:ವಾರ್ಷಿಕ ₹ 1,00,000 

ಅರ್ಜಿ ಸಲ್ಲಿಸಲು ಕೊನೆ ದಿನ: 23-01-2025

ADVERTISEMENT

ಅರ್ಜಿ ಸಲ್ಲಿಸುವ ವಿಧಾನ:  ಆನ್‌ಲೈನಲ್ಲಿ ಅರ್ಜಿ ಹಾಕಿ.

ಮಾಹಿತಿಗೆ:  Short Url: www.b4s.in/pjvi/KSSP3

ಅಬ್ದುಲ್ ಕಲಾಂ ಯಂಗ್ ರಿಸರ್ಚ್ ಫೆಲೋಷಿಪ್

ಪರಿಸರಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಪಿಎಚ್‌.ಡಿಯನ್ನು ಅಭ್ಯಾಸ ಮಾಡುತ್ತಿರುವ ಅಥವಾ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳಿಗೆ  ಟೆಕ್ನಾಲಜಿ, ಎಜುಕೇಷನ್, ರಿಸರ್ಚ್ ಅಂಡ್ ರಿಹ್ಯಾಬಲಿಟೇಶನ್ ಫಾರ್‌ ಎನ್ವೈರ್ನಮೆಂಟ್ (ಟಿಇಆರ್‌ಆರ್‌ಇ) ಸೆಂಟರ್‌ ನೀಡುವ ಅವಕಾಶ ಇದಾಗಿದೆ. 

ಅರ್ಹತೆ: 2024ರ ಡಿಸೆಂಬರ್ 31ಕ್ಕೆ ಅನ್ವಯವಾಗುವಂತೆ 18ರಿಂದ 25 ವರ್ಷದೊಳಗಿನ ವಯೋಮಾನದವರಾಗಿರಬೇಕು. ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿಯ ಕಡೆಗೆ ಅದ್ವಿತೀಯ ಸಂಶೋಧನಾ ಕೊಡುಗೆಯನ್ನು ನೀಡಿರಬೇಕು. 

ಆರ್ಥಿಕ ಸಹಾಯ:  ₹25,000ದ ವರೆಗಿನ ಫೆಲೋಶಿಪ್ ಮತ್ತು ಪ್ರಮಾಣಪತ್ರ. 

ಅರ್ಜಿ ಸಲ್ಲಿಸಲು ಕೊನೆ ದಿನ:  15-02-2025

ಅರ್ಜಿ ಸಲ್ಲಿಸುವ ವಿಧಾನ:  ಆನ್‌ಲೈನಲ್ಲಿ ಅರ್ಜಿ ಹಾಕಿ

ಮಾಹಿತಿಗೆ: Short Url:www.b4s.in/pjvi/APJF1 

ಡೀಕನ್ ಇಂಡಿಯಾ

ಭಾರತೀಯ ಪದವೀಧರರಿಗೆ ಆಸ್ಟ್ರೇಲಿಯಾದ ಡೀಕನ್ ಯುನಿವರ್ಸಿಟಿ ನೀಡುವ ಅವಕಾಶವಾಗಿದೆ. ಅರ್ಹ ವಿದ್ಯಾರ್ಥಿಗಳಿಗೆ ತಮ್ಮ ವಿಶ್ವವಿದ್ಯಾಲಯ ಶುಲ್ಕ ಮತ್ತು ಅಧ್ಯಯನ ವೆಚ್ಚಕ್ಕಾಗಿ ಆರ್ಥಿಕವಾಗಿ ಬೆಂಬಲ ನೀಡುತ್ತದೆ. 

ಅರ್ಹತೆ:  ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ಮತ್ತು ಅರ್ಜಿ ಸಲ್ಲಿಸುವ ಸಮಯದಲ್ಲಿ ಭಾರತದಲ್ಲಿ ವಾಸಿಸುತ್ತಿರುವವರಿಗೆ ಮುಕ್ತವಾಗಿದೆ. ಅವರು ಭಾರತ ಮೂಲದ ಡೀಕನ್ ಅಧಿಕೃತ ಏಜೆಂಟ್ ಮೂಲಕ ಅರ್ಜಿ ಸಲ್ಲಿಸಬೇಕು. ಪದವಿಯಲ್ಲಿ ಒಟ್ಟಾರೆ ಶೇ 55  - ಶೇ 74.99 ಅಂಕಗಳನ್ನು ಗಳಿಸಿರಬೇಕು.

ಆರ್ಥಿಕ ಸಹಾಯ:  ಬೋಧನಾ ಶುಲ್ಕದಲ್ಲಿ ಶೇ 20 ವಿನಾಯಿತಿ.

ಅರ್ಜಿ ಸಲ್ಲಿಸಲು ಕೊನೆ ದಿನ:  31-01-2025

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ. ಮಾಹಿತಿಗೆ:  Short Url: www.b4s.in/pjvi/DIPB4 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.