ADVERTISEMENT

UPSC, KPSC Exams: ಬಹುಆಯ್ಕೆಯ ಪ್ರಶ್ನೋತ್ತರಗಳು

ಪ್ರಜಾವಾಣಿ ವಿಶೇಷ
Published 25 ಡಿಸೆಂಬರ್ 2024, 20:16 IST
Last Updated 25 ಡಿಸೆಂಬರ್ 2024, 20:16 IST
   

1. ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಯ ಸ್ಥಾಪನೆಯ ಹಿಂದಿನ ಶಕ್ತಿ ಎಂದು ಯಾರನ್ನು ಕರೆಯಬಹುದು?

ಎ. ಜವಾಹರ್ ಲಾಲ್ ನೆಹರು.

ಬಿ. ಸರ್ದಾರ್ ವಲ್ಲಭ್‌ಬಾಯ್‌ ಪಟೇಲ್.

ADVERTISEMENT

ಸಿ. ಡಾ. ವರ್ಗೀಸ್ ಕುರಿಯನ್.

ಡಿ. ಶ್ರೀಮತಿ ಇಂದಿರಾಗಾಂಧಿ.

ಉತ್ತರ : ಸಿ

2. ಕೆಳಗಿನ ಯಾವ ಸಂಸ್ಥೆ ಉಕ್ಕು ನಿರ್ಮಾಣದಲ್ಲಿ ಸೃಷ್ಟಿಯಾಗುವ ತ್ಯಾಜ್ಯವನ್ನು ಬಳಸಿಕೊಳ್ಳುವ ತಂತ್ರಜ್ಞಾನವನ್ನು ಕಂಡು ಹಿಡಿದಿದೆ?

ಎ. ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ.

ಬಿ. ಕೇಂದ್ರ ರೈಲು ಸಂಶೋಧನಾ ಸಂಸ್ಥೆ.

ಸಿ. ಕೇಂದ್ರ ರಸ್ತೆ ಮತ್ತು ರೈಲು ಸಂಶೋಧನಾ ಸಂಸ್ಥೆ.

ಡಿ. ಕೇಂದ್ರ ಹಡಗು ನಿರ್ಮಾಣ ಸಂಶೋಧನಾ ಸಂಸ್ಥೆ.

ಉತ್ತರ : ಎ

3. ಕೆಳಗಿನ ಯಾವ ಸ್ಥಳಗಳಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಅನುಮೋದಿಸಿದರು?

ಎ. ರಿಯೋ ಡಿ ಜನೇ ರಿಯೋ.

ಬಿ. ಲಂಡನ್. ಸಿ. ಟೋಕಿಯೋ.

ಡಿ. ಸ್ಯಾನ್ ಫ್ರಾನ್ಸಿಸ್ಕೋ.

ಉತ್ತರ : ಎ

4. ಬಹು ಆಯಾಮದ ಬಡತನದಿಂದ ಹೊರಬರುವ ವಿಚಾರದಲ್ಲಿ ಕೆಳಗಿನ ಯಾವ ರಾಜ್ಯಗಳು ಗಣನೀಯ ಪ್ರಗತಿಯನ್ನು ತೋರಿದೆ?

1. ಮಧ್ಯಪ್ರದೇಶ. 2. ಬಿಹಾರ್.

3. ಉತ್ತರ ಪ್ರದೇಶ. 4. ಓಡಿಸ್ಸ.

5. ರಾಜಸ್ಥಾನ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1, 2, 3, 4 ಮತ್ತು 5⇒ ಬಿ. 1 ಮತ್ತು 3

ಸಿ. 2 ಮತ್ತು 4 ⇒ಡಿ. 3 ಮತ್ತು 5

ಉತ್ತರ : ಎ

5. ರಫ್ತು ಸಿದ್ಧತೆ ಸೂಚ್ಯಂಕದಲ್ಲಿ ಕೆಳಗಿನ ಯಾವ ರಾಜ್ಯ/ಕೇಂದ್ರಾಡಳಿತ ಪ್ರದೇಶ ಕೊನೆಯ ಸ್ಥಾನವನ್ನು ಅಲಂಕರಿಸಿದೆ?

ಎ. ಲಕ್ಷದ್ವೀಪ

ಬಿ. ಅಂಡಮಾನ್ ಮತ್ತು ನಿಕೋಬಾರ್

ಸಿ. ಕೇರಳ ಡಿ. ಮಧ್ಯಪ್ರದೇಶ

ಉತ್ತರ : ಎ

6. ಇತ್ತೀಚೆಗೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಕೆಳಗಿನ ಯಾವ ಸಾಮ್ರಾಜ್ಯದ ಕಾಲದ ಕಲಾಕೃತಿಗಳು ಕಂಡುಬಂದಿದೆ?

ಎ. ಶಾತವಾಹನ ಸಾಮ್ರಾಜ್ಯ

ಬಿ. ಕಾಕತೀಯ ಸಾಮ್ರಾಜ್ಯ

ಸಿ. ಚಾಲುಕ್ಯ ಸಾಮ್ರಾಜ್ಯ

ಡಿ. ಚೋಳ ಸಾಮ್ರಾಜ್ಯ

ಉತ್ತರ : ಬಿ

7. ಭಾರತ-ಫ್ರಾನ್ಸ್ ದ್ವಿಪಕ್ಷೀಯ ಸಂಬಂಧಕ್ಕೆ ಸಂಬಂಧಿಸಿದ ಸರಿಯಾದ ಹೇಳಿಕೆಗಳನ್ನು ಗುರುತಿಸಿ?

1. ಭಾರತ ಮತ್ತು ಫ್ರಾನ್ಸ್ ರಾಷ್ಟ್ರಗಳು ನಡುವಿನ ದ್ವಿ ತೆರಿಗೆ ವಿನಾಯತಿ ಒಪ್ಪಂದ ಜಾರಿಗೆ ಬಂದಿದೆ.

2. ಭಾರತದ ಗಗನಯಾನ ಅಭಿಯಾನದಲ್ಲಿ ಫ್ರಾನ್ಸ್ ರಾಷ್ಟ್ರ ಭಾರತಕ್ಕೆ ಬೆಂಬಲವನ್ನು ನೀಡಲು ಅನುಮೋದಿಸಿದೆ.

3. ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಎರಡು ರಾಷ್ಟ್ರಗಳು ಭಯೋತ್ಪಾದನೆಯ ವಿರುದ್ಧ ಹೋರಾಡುವ ನಿರ್ಧಾರವನ್ನು ಕೈಗೊಂಡಿವೆ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮಾತ್ರ ⇒ಬಿ. 2 ಮಾತ್ರ

ಸಿ. 1 ಮತ್ತು 2⇒ ಡಿ. 1, 2 ಮತ್ತು 3

ಉತ್ತರ : ಡಿ

8. ಕೆಳಗಿನ ಯಾವ ಅಂಶಗಳನ್ನು ಭಾರತ ಮತ್ತು ಫ್ಯಾನ್ಸ್ ರಾಷ್ಟ್ರಗಳ ನಡುವಿನ ಸಿದ್ಧಾಂತ ಎಂದು ಪರಿಗಣಿಸಬಹುದು?

1. ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡದೇ ಇರುವುದು.

2. ಕಾರ್ಯತಂತ್ರದ ಸ್ವಾಯತ್ತತೆಯಲ್ಲಿ ಸಮಾನ ನಂಬಿಕೆಯನ್ನು ಹೊಂದಿರುವುದು.

3. ಮಿಲಿಟರಿ ಒಕ್ಕೂಟಗಳಿಗೆ ಸಹಮತವನ್ನು ಸೂಚಿಸದೆ ಇರುವುದು.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1, 2 ಮತ್ತು 3 ⇒ಬಿ. 2 ಮತ್ತು 3

ಸಿ. 1 ಮತ್ತು 2⇒ ಡಿ. 1 ಮತ್ತು 3

ಉತ್ತರ : ಎ

9. ಕೆಳಗಿನ ಯಾವ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಕೊಲೆಜಿಯಂ ವ್ಯವಸ್ಥೆಯನ್ನು ಜಾರಿಗೆ ತರುವಂತೆ ಆದೇಶಿಸಿತು?

ಎ. ಮೊದಲನೇ ನ್ಯಾಯಾಧೀಶರ ಪ್ರಕರಣ.

ಬಿ. ಎರಡನೇ ನ್ಯಾಯಾಧೀಶರ ಪ್ರಕರಣ.

ಸಿ. ಮೂರನೇ ನ್ಯಾಯಾಧೀಶರ ಪ್ರಕರಣ.

ಡಿ. ನಾಲ್ಕನೇ ನ್ಯಾಯಾಧೀಶರ ಪ್ರಕರಣ.

ಉತ್ತರ : ಸಿ

10. ನಾಲ್ಕನೇ ನ್ಯಾಯಾಧೀಶರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಕೆಳಗಿನ ಯಾವ ಸಂಸ್ಥೆಯನ್ನು ಸಂವಿಧಾನ ಬಾಹಿರ ಎಂದು ಘೋಷಿಸಿತು?

ಎ. ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ.

ಬಿ. ಪ್ರಾದೇಶಿಕ ನ್ಯಾಯಾಂಗೀಯ ನೇಮಕಾತಿ ಆಯೋಗ.

ಸಿ. ರಾಜ್ಯ ನ್ಯಾಯಾಂಗೀಯ ನೇಮಕಾತಿ ಆಯೋಗ.

ಡಿ. ಕೇಂದ್ರ ನ್ಯಾಯಾಂಗೀಯ ನೇಮಕಾತಿ ಮತ್ತು ಬಡ್ತಿ ಆಯೋಗ.

ಉತ್ತರ : ಎ

11. ಭಾರತದಲ್ಲಿ ವಿಶೇಷ ಆರ್ಥಿಕ ವಲಯಗಳು ಕೆಳಗಿನ ಯಾವ ಕಾಯ್ದೆಯ ಜಾರಿಯ ನಂತರ ಅಸ್ತಿತ್ವಕ್ಕೆ ಬಂದವು?

ಎ. ವಿಶೇಷ ಆರ್ಥಿಕ ವಲಯ ಕಾಯ್ದೆ-2005

ಬಿ. ವಿಶೇಷ ಆರ್ಥಿಕ ವಲಯ ಕಾಯ್ದೆ-2006

ಸಿ. ವಿಶೇಷ ಆರ್ಥಿಕ ವಲಯ ಕಾಯ್ದೆ-2000

ಡಿ. ವಿಶೇಷ ಆರ್ಥಿಕ ವಲಯ ಕಾಯ್ದೆ-1999

ಉತ್ತರ : ಎ

12. ರಾಷ್ಟ್ರೀಯ ಸೌರ ಅಭಿಯಾನವನ್ನು ಪ್ರಾಥಮಿಕ ಹಂತದಲ್ಲಿ ಯಾವ ಹೆಸರಿನಿಂದ ಕರೆಯಲಾಗುತ್ತಿತ್ತು?

ಎ. ಮಹಾತ್ಮ ಗಾಂಧಿ ರಾಷ್ಟ್ರೀಯ ಸೌರ ಅಭಿಯಾನ

ಬಿ. ಜವಾಹರ್ ಲಾಲ್ ನೆಹರು ರಾಷ್ಟ್ರೀಯ ಸೌರ ಅಭಿಯಾನ

ಸಿ. ಇಂದಿರಾಗಾಂಧಿ ರಾಷ್ಟ್ರೀಯ ಸೌರ ಅಭಿಯಾನ

ಡಿ. ಪ್ರಧಾನಮಂತ್ರಿ ರಾಷ್ಟ್ರೀಯ ಸೌರ ಅಭಿಯಾನ

ಉತ್ತರ : ಬಿ

13. ಇತ್ತೀಚೆಗೆ ಕೆಳಗಿನ ಯಾವ ಅರಬ್ ರಾಷ್ಟ್ರ ಮೊಟ್ಟಮೊದಲ ಬಾರಿಗೆ ಏಷ್ಯನ್-ಪೆಸಿಫಿಕ್ ಗ್ರೂಪ್ ಆನ್ ಮನಿ ಲಾಂಡರಿಂಗ್ ಸಂಸ್ಥೆಯ ವೀಕ್ಷಕ ಸ್ಥಾನಮಾನವನ್ನು ಪಡೆದಿದೆ?

ಎ. ಯುನೈಟೆಡ್ ಅರಬ್ ಎಮಿರೇಟ್ಸ್

ಬಿ. ಸೌದಿ ಅರೇಬಿಯಾ ಸಿ. ಕತಾರ್

ಬಿ. ಲೆಬನಾನ್

ಉತ್ತರ : ಎ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.